Uttarakhand Elections: ಬಿಪಿನ್ ರಾವತ್ ತಮ್ಮ ಬಿಜೆಪಿಗೆ, ಸಿಎಂ ಭೇಟಿ ಬೆನ್ನಲ್ಲೇ ಜೋರಾದ ಚರ್ಚೆ!

By Suvarna NewsFirst Published Jan 19, 2022, 3:22 PM IST
Highlights

* ಉತ್ತರಾಖಂಡ್ ಚುನಾವಣೆಗೆ ದಿನಗಣನೆ

* ಗೆಲುವಿಗಾಗಿ ಪಕ್ಷಗಳ ಪೈಪೋಟಿ

* ಬಿಪಿನ್ ರಾವತ್ ತಮ್ಮ ಬಿಜೆಪಿಗೆ, ಸಿಎಂ ಭೇಟಿ ಬೆನ್ನಲ್ಲೇ ಜೋರಾದ ಚರ್ಚೆ

ಡೆಹ್ರಾಡೂನ್(ಜ.19): ದಿವಂಗತ ಸಿಡಿಎಸ್ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಬಿಜೆಪಿ ಸೇರಬಹುದು. ಬುಧವಾರ ದೆಹಲಿಯಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದ ನಂತರ ಊಹಾಪೋಹಗಳು ತೀವ್ರಗೊಂಡಿವೆ. ಮಾಧ್ಯಮ ವರದಿಗಳ ಪ್ರಕಾರ, ಕರ್ನಲ್ ವಿಜಯ್ ಶೀಘ್ರದಲ್ಲೇ ಬಿಜೆಪಿ ಸೇರಬಹುದು. ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯೂ ವರದಿಗಳಿವೆ.

ಬಿಜೆಪಿಯ ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೆ

ಬುಧವಾರದ ಈ ಸಭೆಯ ನಂತರ ರಾಜಕೀಯ ಪಡಸಾಲೆಯಲ್ಲಿ ಕೋಲಾಹಲ ತೀವ್ರಗೊಂಡಿದೆ. ಶೀಘ್ರದಲ್ಲೇ ಅವರು ಬಿಜೆಪಿ ಸೇರಬಹುದು ಮತ್ತು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಸಿಎಂ ಭೇಟಿಯ ವೇಳೆ ವಿಜಯ್ ರಾವತ್ ಅವರು ನಮ್ಮ ಕುಟುಂಬದ ಸಿದ್ಧಾಂತ ಬಿಜೆಪಿಯಂತೆಯೇ ಇದೆ ಎಂದು ಹೇಳಿದ್ದಾರೆ. ನಾನು ಬಿಜೆಪಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಬಿಜೆಪಿ ಹೇಳಿದರೆ ನಾನೂ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

ರಾವತ್ ಕುಟುಂಬದ ದೇಶಸೇವೆಗೆ ನಮನ - ಸಿಎಂ

ಅದೇ ಸಮಯದಲ್ಲಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇಂದು ವಿಜಯ್ ರಾವತ್ ಅವರನ್ನು ಭೇಟಿಯಾದರು. ಬಿಪಿನ್ ರಾವತ್ ಮತ್ತು ಅವರ ಕುಟುಂಬ ದೇಶಕ್ಕೆ ಮಾಡಿದ ಸೇವೆಯನ್ನು ನಾವು ಅಭಿನಂದಿಸುತ್ತೇವೆ. ಅವರ ಕನಸಿನಂತೆ ಉತ್ತರಾಖಂಡವನ್ನು ಮಾಡಲು ನಾನು ಯಾವಾಗಲೂ ಶ್ರಮಿಸುತ್ತೇನೆ ಎಂದಿದ್ದಾರೆ.

ಫೆಬ್ರವರಿ 14 ರಂದು ಚುನಾವಣೆ

ಉತ್ತರಾಖಂಡದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ತೀವ್ರ ಪ್ರಯತ್ನ ನಡೆಸುತ್ತಿವೆ. ವಿಜಯ್ ರಾವತ್ ಅವರು ದೇಶದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರ ಕಿರಿಯ ಸಹೋದರ. ಬಿಪಿನ್ ರಾವತ್ ಅವರು 8 ಡಿಸೆಂಬರ್ 2021 ರಂದು ಕೂನೂರ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

click me!