ಸ್ನೇಹಿತರ ಜೊತೆ ಕುಡಿಯುತ್ತ ಕುಳಿತಿದ್ದ ಕುಡುಕನ ಹೊತ್ತೊಯ್ದ ಹುಲಿ

By Anusha KbFirst Published Dec 27, 2022, 12:35 AM IST
Highlights

ಸ್ನೇಹಿತರ ಜೊತೆ ಕುಡಿಯುತ್ತಾ ಕುಳಿತಿದ್ದ ವ್ಯಕ್ತಿಯನ್ನು ಹುಲಿಯೊಂದು ಹೊತ್ತೊಯ್ದ ಆಘಾತಕಾರಿ ಘಟನೆ ಉತ್ತರಾಖಂಡ್‌ನ, ಜಿಮ್ ಕೊರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪ ನಡೆದಿದೆ.

ಉತ್ತರಾಖಂಡ್: ಸ್ನೇಹಿತರ ಜೊತೆ ಕುಡಿಯುತ್ತಾ ಕುಳಿತಿದ್ದ ವ್ಯಕ್ತಿಯನ್ನು ಹುಲಿಯೊಂದು ಹೊತ್ತೊಯ್ದ ಆಘಾತಕಾರಿ ಘಟನೆ ಉತ್ತರಾಖಂಡ್‌ನ, ಜಿಮ್ ಕೊರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪ ನಡೆದಿದೆ. ಶನಿವಾರ ಡಿಸೆಂಬರ್ 24 ರಂದು ರಾತ್ರಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಮೇಲೆರಗಿದ ಹುಲಿ ಆತನನ್ನು ಸಮೀಪದ ಕಾಡಿಗೆ ಎಳೆದೊಯ್ದಿದೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ (Jim Corbett National Park) ವ್ಯಾಪ್ತಿಗೆ ಒಳಪಡುವ ಧನಗರ್ಹಿಯಿಂದ (Dhangarhi) ಮೋಹನ್ ಪ್ರದೇಶದ(Mohan area)ನಡುವೆ ಈ ಘಟನೆ  ನಡೆದಿದೆ. ಈ ಪ್ರದೇಶದಲ್ಲಿ ಆಗಾಗ ಮನುಷ್ಯರ ಮೇಲೆ ವ್ಯಾಘ್ರಗಳು ದಾಳಿ ನಡೆಸುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ  ರಾಮನಗರ ಆಡಳಿತವು (Ramnagar administration) ಇಲ್ಲಿ ಸೆಕ್ಷನ್ 144 ಅನ್ನು ವಿಧಿಸಿದೆ. ಇದರ ಪ್ರಕಾರ ಇಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಮೂವರು ಸ್ನೇಹಿತರು ಈ ಭಾಗದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾಗ ಹುಲಿ ಅವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿ ಕಾಡಿಗೆ ಎಳೆದೊಯ್ದಿದೆ.

ವ್ಯಕ್ತಿಯನ್ನು ಹುಲಿ ಹೊತ್ತೊಯ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಿಗಾಗಿ ಶೋಧ ಕಾರ್ಯ ಆರಂಭಿಸಿದರಾದರೂ ಆರಂಭದಲ್ಲಿ ಆತ ಪತ್ತೆಯಾಗಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಗಂಟೆಗಟ್ಟಲೆ ಹುಡುಕಾಟ ನಡೆಸಿದ ಬಳಿಕ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರಾಮನಗರ (Ramnagar) ನಿವಾಸಿ ನಫೀಸ್ (Nafees) ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ವರದಿಯ ಪ್ರಕಾರ ಈ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಜನರು ಹುಲಿ ದಾಳಿಯಿಂದ ಇದುವರೆಗೆ ಸಾವನ್ನಪ್ಪಿದ್ದಾರೆ. ರಾಮನಗರ ಅರಣ್ಯ ವಿಭಾಗದಲ್ಲಿ (Ramnagar Forest Division) ಬರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಿಷೇಧಿತ ಪ್ರದೇಶದಲ್ಲಿ ಈ ನರಭಕ್ಷಕ ಹುಲಿಗಾಗಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಜೊಯಿಡಾ : ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಸೆರೆ

ಈ ನರಭಕ್ಷಕ ಹುಲಿಗಾಗಿ ಅರಣ್ಯ ಇಲಾಖೆ ಹಲವು ತಂಡಗಳನ್ನು ರಚಿಸಿದ್ದು ಆನೆಗಳನ್ನು (elephant) ಕೂಡ ನಿಯೋಜಿಸಿದೆ. ಜೊತೆಗೆ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಕೂಡ ಅಳವಡಿಸಲಾಗಿದೆ ಮತ್ತು ಹುಲಿಯನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳೊಂದಿಗೆ ವೈದ್ಯರ ತಂಡವು ಕೂಡ ಕಾರ್ಯಾಚರಿಸುತ್ತಿದ್ದು, ಹುಲಿ ಈ ಪ್ರದೇಶಕ್ಕೆ ಬಂದಲ್ಲಿ ಅದನ್ನು ಹಿಡಿಯಬಹುದು ಎಂಬ ಭರವಸೆಯೊಂದಿಗೆ ಮುಖ್ಯ ರಸ್ತೆ ಮತ್ತು ಅರಣ್ಯ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Chamarajanagar: ರೈತನ ಮೇಲೆರಗಿದ ಹುಲಿ, ರೈತ ಪಾರು

ಈಗಾಗಲೇ ಹುಲಿ ಹಿಡಿಯಲು ಅರಣ್ಯ ಇಲಾಖೆ (forest department) ಹಲವೆಡೆ ಬೋನುಗಳನ್ನು (cages) ಅಳವಡಿಸಿದ್ದರೂ ಯಾವುದೂ ಫಲ ನೀಡಿಲ್ಲ. ಅರಣ್ಯ ಇಲಾಖೆ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಹುಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಜನರ ಮೇಲೆ ದಾಳಿ ನಡೆಸುತ್ತಿದೆ. ರಾಮನಗರ ಆಡಳಿತ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೊರತಾಗಿ, ಅರಣ್ಯ ಇಲಾಖೆಯು ಸುತ್ತಮುತ್ತಲಿನ ನಿವಾಸಿಗಳಿಗೆ ನಿಷೇಧಿತ ಪ್ರದೇಶಕ್ಕೆ ಹೋಗದಂತೆ ಮನವಿ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಸಂಜೆಯ ಸಮಯದಲ್ಲಿ ಗರಿಷ್ಠ ಹುಲಿ ದಾಳಿಗಳು ವರದಿಯಾಗಿವೆ. ಅಧಿಕಾರಿಗಳು ಅಲ್ಲಿ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಹಾಕಿದ್ದಾರೆ ಮತ್ತು ನಿರ್ಬಂಧಿತ ವಲಯಕ್ಕೆ ಹೋಗಬೇಡಿ ಎಂಬ ಸಂದೇಶವನ್ನು ಜನರಿಗೆ ತಿಳಿಸಲು ಮಾಧ್ಯಮಗಳ ಸಹಾಯವನ್ನು ಸಹ ತೆಗೆದುಕೊಂಡಿದ್ದಾರ. ಇಷ್ಟೆಲ್ಲಾ ಮಾಡಿದ ನಂತರವೂ ಕೆಲವರು ನಿಯಮಗಳನ್ನು ಉಲ್ಲಂಘಿಸಿ ಪ್ರದೇಶಕ್ಕೆ ಹೋಗಿ ತಮ್ಮ ಪ್ರಾಣವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆ.
 

click me!