‘ಉತ್ತರಪ್ರದೇಶದ ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದು ದುರದೃಷ್ಟಕರ’ ಎಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದನ್ನು ‘ಪ್ರಭು ವಿಶ್ವನಾಥನ ಸಾಕಾರ ಸ್ವರೂಪ’ ಎಂದಿದ್ದಾರೆ.
ಗೋರಖಪುರ: ‘ಉತ್ತರಪ್ರದೇಶದ ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದು ದುರದೃಷ್ಟಕರ’ ಎಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದನ್ನು ‘ಪ್ರಭು ವಿಶ್ವನಾಥನ ಸಾಕಾರ ಸ್ವರೂಪ’ ಎಂದಿದ್ದಾರೆ. ಗೋರಖಪುರದ ದೀನ ದಯಾಳು ಉಪಾಧ್ಯಾಯ ವಿಶ್ವವಿದ್ಯಾಲಯದಲ್ಲಿ ‘ಸಾಮರಸ್ಯ ಸಮಾಜ ನಿರ್ಮಿಸುವಲ್ಲಿ ನಾಥ ಪಂಥದ ಕೊಡುಗೆ’ ಎಂಬ ಅಂತಾರಾಷ್ಟ್ರೀಯ ಗೋಷ್ಠಿಯಲ್ಲಿ ಮಾತನಾಡಿದ ಯೋಗಿ, ಕಾಶಿ ಹಾಗೂ ಜ್ಞಾನವಾಪಿಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಯೋಗಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಅಬ್ಬಾಸ್ ಹೈದರ್, ‘ಜ್ಞಾನವಾಪಿ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಹೇಳಿಕೆ ನೀಡುವ ಮೂಲಕ ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಯೋಗಿ ನ್ಯಾಯಾಲಯಕ್ಕೆ ಗೌರವ ಕೊಡುತ್ತಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ದೇವಸ್ಥಾನವಿದ್ದ ಜಾಗದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಮುದಾಯ ಆರೋಪಿಸಿದ್ದು, ಮುಸ್ಲಿಮರು ಇದನ್ನು ಅಲ್ಲೆಗಳೆದಿದ್ದಾರೆ. ಈ ಪ್ರಕರಣ ಕೋರ್ಟ್‌ನ ಅಂಗಳದಲ್ಲಿದೆ
undefined
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ: ಎಸ್‌ಡಿಪಿಐ
ಅಕ್ರಮ ಮಸೀದಿ ವಿರುದ್ಧ ದೇಶವ್ಯಾಪಿ ಹೋರಾಟಕ್ಕೆ ಕೇಂದ್ರ ಸಚಿವ ಕರೆ:
ನವದೆಹಲಿ: ಶಿಮ್ಲಾದಲ್ಲಿನ ಅಕ್ರಮ ಮಸೀದಿ ವಿರುದ್ಧ ನಡೆದ ಪ್ರತಿಭಟನೆ ರೀತಿ ಇಡೀ ದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಸೀದಿಗಳ ವಿರುದ್ಧವೂ ಪ್ರತಿಭಟನೆ ನಡೆಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶನಿವಾರ ಕರೆ ನೀಡಿದ್ದಾರೆ.
ಶನಿವಾರ ಮಾತನಾಡಿದ ಅವರು, ‘ಹಿಮಾಚಲ ಪ್ರದೇಶದ ಹಿಂದೂಗಳು ದೇಶವನ್ನು ಒಗ್ಗೂಡಿಸಿದ್ದಾರೆ. ಅಕ್ರಮವಾಗಿ ಭೂಮಿ ಆಕ್ರಮಿಸಿಕೊಂಡಿದ್ದ ವಕ್ಫ್ ಮಂಡಳಿಗೆ ಈಗ ಸವಾಲೆಸೆದಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ನಿರ್ಮಿಸಿದ 3 ಲಕ್ಷ ಮಸೀದಿಗಳಿವೆ. ಹೀಗಾಘಿ ದೇಶಾದ್ಯಂತ ಇಂಥ ಮಸೀದಿಗಳ ವಿರುದ್ಧ ಹೋರಾಡಬೇಕಿದೆ’ ಎಂದರು.
ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?
ಈ ನಡುವೆ ಅಕ್ರಮ ಮಸೀದಿಗಳ ವಿರುದ್ಧ ಹಿಮಾಚಲ ಪ್ರದೇಶದ ವಿವಿಧ ನಗರಗಳಲ್ಲಿ ಶನಿವಾರ ಅಂಗಡಿಗಳನ್ನು ಮುಚ್ಚಿ 2 ಗಂಟೆಗಳ ಕಾಲ ಬಂದ್ ಆಚರಿಸಲಾಯಿತು.