
ಲಖನೌ(ಜು.30): ಪತಿ ಮನೆ ಬಿಟ್ಟು ಹೋಗಿ 10 ವರ್ಷಗಳೇ ಉರುಳಿದೆ. ಹಲವು ಸವಾಲು, ದುಡಿಮೆ, ಆರ್ಥಿಕ ಮುಗ್ಗಟ್ಟಿನ ನಡುವೆಯೂ ಪತ್ನಿ ಏಕಾಂಗಿಯಾಗಿ ಬದುಕಿನ ಬಂಡಿ ಎಳೆದಿದ್ದಾಳೆ. ಮುಂದೊಂದು ದಿನ ಪತಿ ಮನೆಗೆ ಬರುತ್ತಾನೆ ಅನ್ನೋ ವಿಶ್ವಾಸದಲ್ಲೇ ದಿನ ದೂಡಿದ್ದಾಳೆ. ವೈದ್ಯರನ್ನು ಭೇಟಿಯಾಗಲು ಆಸ್ಪತ್ರೆ ತೆರಳಿದ ಪತ್ನಿಗೆ ಅಚಾನಕ್ಕಾಗಿ ಆಸ್ಪತ್ರೆ ಗೇಟಿನ ಮುಂದೆ ಕೆದರಿದ ಕೂದಲು, ಸ್ನಾನ ಮಾಡದ ವ್ಯಕ್ತಿಯೊಬ್ಬರು ಕಾಣಿಸಿದ್ದಾರೆ. ಈ ವ್ಯಕ್ತಿಯನ್ನು ದಿಟ್ಟಿಸಿ ನೋಡಿದ ಮಹಿಳೆಕ ದುಃಖ ಉಮ್ಮಳಿಸಿ ಬಂದಿದೆ. ನಾಪತ್ತೆಯಾಗಿದ್ದ ಪತಿ ಸಿಕ್ಕ ಖುಷಿಯಲ್ಲಿ ಮಾತನಾಡಿದ್ದಾಳೆ. ಕೆಲ ಹೊತ್ತಿನ ಮಾತುಕತೆ ಬಳಿಕ ಮತ್ತೆ ಸಿಕ್ಕ ಪತಿಯನ್ನು ಸಂತೈಸಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. 10 ವರ್ಷಗಳ ಬಳಿ ಪತಿ-ಪತ್ನಿ ಪುನರ್ಮಿಲನ ಬೆನ್ನಲ್ಲೇ ಪತಿಗೆ ಆಘಾತವಾಗಿದೆ. ಕಾರಣ ತಾನು ಮನೆಗೆ ಕರೆದುಕೊಂಡು ಬಂದಿರುವುದು ನಾಪತ್ತೆಯಾದ ಪತಿಯನ್ನಲ್ಲ, ಅಪರಿಚಿತ ವ್ಯಕ್ತಿ ಅನ್ನೋದು ಖಚಿತವಾಗಿದೆ. ಈ ಘಟನೆ ಉತ್ತರ ಪ್ರದೇಶದ ಸುಖಪುರ ಏರಿಯಾದಲ್ಲಿ ನಡೆದಿದೆ.
ದೇವಕಾಳಿ ಗ್ರಾಮದ 44 ವರ್ಷದ ಮೋತಿಚಂದ್ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಮೋತಿಚಂದ್ ಪತ್ನಿ ಜಾನಕಿ ದೇವಿ ಏಕಾಂಗಿಯಾಗಿ ಕಳೆದ 10 ವರ್ಷ ದಿನ ದೂಡಿದ್ದಾರೆ. ಮನೆಯಿಂದ ತೆರಳಿದ ಪತಿ ಬಳಿಕ ವಾಪಸ್ ಬರಲೇ ಇಲ್ಲ. ಸಂಬಂಧಿಕರ ಮನೆಗೆ ತೆರಳಿರುವ ಸಾಧ್ಯತೆ ಇದೆ ಎಂದು ಒಂದೆರಡು ದಿನ ಕಾದ ಪತ್ನಿ ಜಾನಕಿ ದೇವಿಗೆ ಆತಂಕ ಹೆಚ್ಚಾಗಿತ್ತು. ಕಾರಣ ಗಂಡ ಒಂದು ವಾರವಾದರೂ ಮನೆಗೆ ಬರಲಿಲ್ಲ. ಪೊಲೀಸ್ ದೂರು ನೀಡಲಾಗಿತ್ತು. ದಿನಗಳು ಉರುಳಿತು, ವರ್ಷಗಳೇ ಉರುಳಿ ಒಂದು ದಶಕವಾಗಿತ್ತು. ಆದರೂ ಪತಿ ಬರಲೇ ಇಲ್ಲ.
ಬಾಲ್ಯದಲ್ಲಿ ನಾಪತ್ತೆಯಾದ ಬಾಲಕ 20 ವರ್ಷದ ಬಳಿಕ ಮರಳಿ ಪೋಷಕರ ಮಡಿಲಿಗೆ
ಪೊಲೀಸರು ಹತ್ತಿರದ ಠಾಣೆ,ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸುಮ್ಮನಾಗಿದ್ದರು. ಇತ್ತ ಪತಿಯ ಸುಳಿವಿಲ್ಲ. ಇಂದಲ್ಲ ನಾಳೆ ಪತಿ ಮನೆಗೆ ಬಂದೇ ಬರುತ್ತಾನೆ ಎಂದು ಜಾನಕಿ ದೇವಿ ದಿನದೂಡಿದ್ದಾಳೆ. ಹೀಗಿರುವಾಗಿ ಆರೋಗ್ಯದ ಕಾರಣಕ್ಕಾಗಿ ಗ್ರಾಮದ ಆಸ್ಪತ್ರೆ ಕೇಂದ್ರಕ್ಕೆ ತೆರಳುತ್ತಿದ್ದ ಜಾನಕಿ ದೇವಿಗೆ ಆಸ್ಪತ್ರೆ ಗೇಟ್ ಮುಂದೆ ಕುಳಿತ ವ್ಯಕ್ತಿ ಮೇಲೆ ಅನುಮಾನ ಬಂದಿದೆ.
ಕೆದರಿದ ಕೂದಲು, ಉದ್ದ ಗಡ್ಡ, ಹಸಿವಿನ ಕಣ್ಣುಗಳನ್ನು ನೋಡಿದ ಜಾನಕಿ ದೇವಿಗೆ ದುಃಖ ತಡೆಯಲಾಗಲಿಲ್ಲ. ವ್ಯಕ್ತಿಯ ಹತ್ತಿರ ಹೋಗಿ ದಿಟ್ಟಿಸಿ ನೋಡಿದ್ದಾಳೆ. ಅರೇ ಇದೇ ತನ್ನ ಪತಿ ಎಂದು ಖಾತ್ರಿ ಮಾಡಿಕೊಂಡಿದ್ದಾಳೆ. ಬಳಿಕ ಯಾಕೆ ಇಷ್ಟು ದಿನ ಮನೆ ಬಿಟ್ಟು ಹೋದೆ, ಮರಳಿ ಮನೆಗೆ ಬರಬಹುದಿತ್ತಲ್ಲ. ಈ ರೀತಿ ರಸ್ತೆಯಲ್ಲಿ ಭೀಕ್ಷೆ ಬೀಡುವ ಪರಿಸ್ಥಿತಿ ಇರುತ್ತಿರಲಿಲ್ಲ ಎಂದೆಲ್ಲಾ ಹೇಳಿದ್ದಾಳೆ. ಆದರೆ ಆತ ಮರು ಮಾತು ಆಡಿಲ್ಲ. ಕೊನೆಗೆ ಆತನ ಸಂತೈಸಿದ ಪತ್ನಿ ಮನಗೆ ಕರೆದುಕೊಂಡು ಹೋಗಿದ್ದಾಳೆ.
ಈ ಸುದ್ದಿ ಭಾರಿ ವೈರಲ್ ಆಗಿತ್ತು. ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. 10 ವರ್ಷಗಳ ಬಳಿ ಪತಿ-ಪತ್ನಿ ಪುನರ್ಮಿಲನ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪತಿ ಪತ್ನಿಯ ಪುನರ್ಮಿನಲದ ಬೆನ್ನಲ್ಲೇ ಪತ್ನಿಗೆ ಆಘಾತವಾಗಿದೆ. ಕಾರಣ ಇದು ನಾಪತ್ತೆಯಾದ ತನ್ನ ಪತಿ ಮೋತಿಚಂದ್ ಅಲ್ಲ ಅನ್ನೋದು ಖಚಿತವಾಗಿದೆ. ಕಾರಣ ಅಪರಿಚಿತ ವ್ಯಕ್ತಿ ದೇಹದಲ್ಲಿದ್ದ ಮಚ್ಚೆ ನೋಡಿ ಜಾನಕಿ ದೇವಿ ಹೌಹಾರಿದ್ದಾಳೆ. ರಸ್ತೆಯಲ್ಲಿದ್ದ ಅಪರಿಚತ ವ್ಯಕ್ತಿಯನ್ನು ಪತಿ ಎಂದು ಕರೆತಂದನಲ್ಲ ಎಂದು ಆಘಾತಕ್ಕೊಳಗಾಗಿದ್ದಾಳೆ.
ಗಂಡನ ಹತ್ಯೆ ತಪ್ಪೊಪ್ಪಿಕೊಂಡಿದ್ದ ಪತ್ನಿ ಪ್ರಕರಣಕ್ಕೆ ಟ್ವಿಸ್ಟ್, ಒಂದೂವರೆ ವರ್ಷದ ಬಳಿಕ ಪತಿ ಜೀವಂತ ಪತ್ತೆ!
ಜಾನಕಿ ದೇವಿ ಆಸ್ಪತ್ರೇ ಗೇಟ್ ಮುಂದಿನ ಭೇಟಿಯಿಂದ ಹಿಡಿದು ಮನೆಗೆ ಕರೆತಂದು ಬಳಿಕವೂ ಹಲವು ಪ್ರಶ್ನೆ ಕೇಳಿದ್ದಾಳೆ. ಆದರೆ ಯಾವ ಪ್ರಶ್ನೆಗೆ ಆತನಿಂದ ಒಂದು ಮಾತಿಲ್ಲ. ಲಡ್ಡು ಬಂದು ಬಾಯಿಗೆ ಬಿತ್ತು ಎಂದುಕೊಂಡಿದ್ದ ವ್ಯಕ್ತಿಯನ್ನು ಹಿಡಿದು ಗದರಿಸಿದ್ದಾಳೆ. ಇಷ್ಟೆಲ್ಲಾ ಕೇಳಿದ್ದೇನೆ. ಮೋತಿಚಂದ್ ಎಂದು ಕರೆದಾಗ ಓ ಎಂದಿದ್ದೀರಿ. ಆದರೆ ನೀವು ಮೋತಿಚಂದ್ ಅಲ್ಲ ನಿಜವಾಗಿ ಹೇಳಿ ನಿಮ್ಮ ಹೆಸರೇನು ಎಂದು ಜಾನಕಿ ದೇವಿ ಕೇಳಿದ್ದಾಳೆ. ತಾನು ಮೋತಿಚಂದ್ ಅಲ್ಲ, ತನ್ನ ಹೆಸರು ರಾಹುಲ್ ಎಂದು ಬಾಯ್ಬಿಟ್ಟಿದ್ದಾನೆ.
ಜಾನಕಿ ದೇವಿ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಗ್ರಾಮದ ಮುಖಂಡರನ್ನು ಕರೆದಿದ್ದಾಳೆ. ಅಷ್ಟರಲ್ಲೇ ನಡೆದ ಘಟನೆ ಎಲ್ಲಡೆ ಹರಿದಾಡಿದೆ. ಗ್ರಾಮದ ಮುಖಂಡರು, ಪೊಲೀಸರು ಆಗಮಿಸಿದ್ದಾರೆ. ಬಳಿಕ ರಾಹುಲ್ ಗುರುತು ಪತ್ತೆ ಮಾಡಿ ಆತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರಿಗೆ ರಾಹುಲ್‌ನನ್ನು ಹಸ್ತಾಂತರಿಸಲಾಗಿದೆ. ಇತ್ತ ಜಾನಕಿ ದೇವಿಗೆ ರಾಹುಲ್ ಸಂಬಂಧಿಕರು ಧನ್ಯವಾದ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ