UP Election 2022: ಅಖಿಲೇಶ್, ಡಿಂಪಲ್ ಆಪ್ತ ಪಂಖೂರಿಗೆ ಕೈ ಟಿಕೆಟ್

By Suvarna NewsFirst Published Jan 13, 2022, 7:55 PM IST
Highlights

ನೋಯ್ಡಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪಂಖೂರಿ ಪಾಠಕ್
ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಡಿಂಪಲ್ ಯಾದವ್ ಗೆ ಆಪ್ತರಾಗಿದ್ದ ಪಂಖೂರಿ
125 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟ, ಇದರಲ್ಲಿ ಶೇ.40ರಷ್ಟು ಮಹಿಳೆಯರಿಗೆ ಮೀಸಲು

ಲಖನೌ (ಜ. 13): ಉತ್ತರ ಪ್ರದೇಶ (Uttar Pradesh Election) ಚುನಾವಣೆಯಲ್ಲಿ ಈ ಬಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ (Congress), ವಿಧಾನಸಭೆ ಚುನಾವಣೆಗೆ 125 ಅಭ್ಯರ್ಥಿಗಳ ಮೊದಲ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚಿನವು ಹೊಸ ಹೆಸರುಗಳಾಗಿರುವುದು ಅಚ್ಚರಿ ತಂದಿದೆ. ಹಿಂದೊಮ್ಮೆ ಸಮಾಜವಾದಿ ಪಕ್ಷದ (Samajwadi Party ) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಹಾಗೂ ಅವರ ಪತ್ನಿಗೆ ಆಪ್ತರಾಗಿದ್ದ ವಿದ್ಯಾರ್ಥಿ ನಾಯಕಿ ಪಂಖೂರಿ ಪಾಠಕ್ ಗೆ ನೋಯ್ಡಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಅದರೊಂದಿಗೆ ಸಲ್ಮಾನ್ ಖುರ್ಷಿದ್ ಅವರ ಪತ್ನಿ, ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ತಾಯಿ ಆಶಾ ಸಿಂಗ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಘೋಷಣೆ ಮಾಡಿದ 125 ಅಭ್ಯರ್ಥಿಗಳ ಪೈಕಿ ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳಾಗಿರುವುದು ವಿಶೇಷವಾಗಿದೆ.

ಸಮಾಜವಾದಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದ ಪಂಖೂರಿ ಪಾಠಕ್ ಮೇಲೆ ನಂಬಿಕೆ ಇರಿಸಿರುವ ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ನೋಯ್ಡಾದಿಂದ ಟಿಕೆಟ್ ನೀಡುವ ನಿರ್ಧಾರ ಪ್ರಕಟಿಸಿದರು. ಟಿಕೆಟ್ ಘೋಷಣೆ ಆದ ಬೆನ್ನಲ್ಲಿಯೇ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟ್ವೀಟ್ ಮಾಡುವ ಮೂಲಕ ಪಂಖೂರಿ ಪಾಠಕ್ ಧನ್ಯವಾದ ಹೇಳಿದ್ದಾರೆ.

"ನಾನು ಹುಡುಗಿ ಹಾಗೂ ಹುಡುಗಿಯೊಬ್ಬಳ ತಾಯಿ. ನನ್ನ ಹೋರಾಟ ಭಾರತದ ಎಲ್ಲಾ ಮಹಿಳೆಯರಿಗೆ ಅರ್ಪಣೆ. ಕಾಂಗ್ರೆಸ್ ಪಕ್ಷದಿಂದ ನೋಯ್ಡಾ ಅಭ್ಯರ್ಥಿಯಾಗಿ ನನ್ನನ್ನು ಘೋಷಣೆ ಮಾಡಿದ್ದಕ್ಕೆ ಥ್ಯಾಂಕ್ಸ್ ಪ್ರಿಯಾಂಕಾ ಗಾಂಧಿ ವಾದ್ರಾ' ಎಂದು ಟ್ವೀಟ್ ಮಾಡಿದ್ದಾರೆ.
 

मैं लड़की हूँ ,
एक लड़की की माँ हूँ ..

और मेरा यह संघर्ष भारत की सभी लड़कियों को समर्पित है ।

मुझे से का प्रत्याशी बनाने के लिए धन्यवाद दीदी । pic.twitter.com/R8XNnif6cn

— Pankhuri Pathak पंखुड़ी पाठक پنکھڑی (@pankhuripathak)


ಪತ್ನಿಯ ಮೇಲಿನ ಟೀಕೆಗೆ ನೊಂದು ಪಕ್ಷ ತ್ಯಜಿಸಿದ್ದ ಗಂಡ: ಸಮಾಜವಾದಿ ಪಕ್ಷದ ನಾಯಕ ಅನಿಲ್ ಯಾದವ್ ರನ್ನು 2019ರಲ್ಲಿ ಮದುವೆಯಾಗಿರುವ ಪಂಖೂರಿ ಪಾಠಕ್, ಪಕ್ಷದ ಉನ್ನತ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷವನ್ನು ತೊರೆದಿದ್ದರು. ಆ ಬಳಿಕ ಅವರು ಕಾಂಗ್ರೆಸ್ ಸೇರಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ನಾಯಕರು ಪಂಖೂರಿ ಪಾಠಕ್ ವಿರುದ್ಧ ಮಾಡಿದ ಟೀಕೆಗಳಿಂದ ಬೇಸರಗೊಂಡಿದ್ದ ಅನಿಲ್ ಯಾದವ್ ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.

UP Election 2022 : ಬಿಜೆಪಿಗೆ ಗುಡ್ ಬೈ ಹೇಳಿದ ಮೂರನೇ ಸಚಿವ, ಈವರೆಗೂ 14 ನಾಯಕರ ರಾಜೀನಾಮೆ
ಯಾರೆಲ್ಲಾ ಇದ್ದಾರೆ ಲಿಸ್ಟ್ ನಲ್ಲಿ: 2017ರಲ್ಲಿ ಉನ್ನಾವೋ (Unnao) ಅತ್ಯಾಚಾರ ಸಂತ್ರಸ್ಥೆಯ ತಾಯಿಯಾಗಿರುವ ಆಶಾ ಸಿಂಗ್ ಅವರಿಗೆ ಕಾಂಗ್ರೆಸ್ ಉನ್ನಾವೋದಿಂದಲೇ ಟಿಕೆಟ್ ಘೋಷಣೆ ಮಾಡಿದೆ. ಮಣಿಕ್ ಪುರದಿಂದ ರಂಜನಾ ಭಾರತಿ ಲಾಲ್ ಪಾಂಡೆಗೆ ಟಿಕೆಟ್ ಘೋಷಣೆ ಮಾಡಿದೆ.  ಭಾರತಿ ಲಾಲ್ ಪಾಂಡೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿರುವುದು 2ನೇ ಬಾರಿ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಲ್ಲಿಂದಲೇ ಟಿಕೆಟ್ ಪಡೆದಿದ್ದ ಭಾರತಿ ಲಾಲ್ ಪಾಂಡೆ, 10 ಸಾವಿರ ಮತಗಳನ್ನು ಪಡೆದಿದ್ದರು.

ಇನ್ನು ಫರೂಖಾಬಾದ್ ಕ್ಷೇತ್ರದಿಂದ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೌಸಿ ಖುರ್ಷಿದ್ ಗೆ  ಟಿಕೆಟ್ ನೀಡಲಾಗಿದೆ. ಕಾನ್ಪುರದ ಬಿಲ್ ಹೌರ್ ಕ್ಷೇತ್ರದಿಂದ ಉಷಾ ರಾಣಿ ಕೋರಿ, ಮೀರತ್ ನ ಹಸ್ತಿನಾಪುರ ಕ್ಷೇತ್ರದಿಂದ ಅರ್ಚನಾ ಗೌತಮ್, ಕೈತೋರ್ ಕ್ಷೇತ್ರದಿಂದ ಬಬತಾ ಗುರ್ಜರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಶೇ. 40ರಷ್ಟು ಯುವ ಜನತೆಗೆ ಹಾಗೂ ಶೇ. 40 ರಷ್ಟು ಮಹಿಳೆಯರಿಗೆ ಟಿಕೆಟ್ ನೀಡುವ ನಮ್ಮ ಆಶ್ವಾಸನೆಯನ್ನು ಈ ಮೂಲಕ ಪೂರ್ತಿ ಮಾಡಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

 

click me!