Uttar Pradesh ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

Published : Mar 25, 2022, 12:05 AM ISTUpdated : Mar 25, 2022, 12:10 AM IST
 Uttar Pradesh ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

ಸಾರಾಂಶ

- ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ - ಆರೋಪಿಯ ಮನೆಯ ಮುಂದೆ ಬುಲ್ಡೋಜರ್ ತಂದು ನಿಲ್ಲಿಸಿದ್ದ ಪೊಲೀಸ್ - ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ

ಲಕ್ನೋ (ಮಾ.24): ಬಿಜೆಪಿಯ ಯೋಗಿ ಆದಿತ್ಯನಾಥ್ ( Yogi Adityanath) ಅವರ ಪ್ರಚಾರದ ಮೂಲಕ ಉತ್ತರ ಪ್ರದೇಶದಾದ್ಯಂತ  (Uttar Pradesh) ಪ್ರತಿಧ್ವನಿಸಿದ ಬುಲ್ಡೋಜರ್ (bulldozer) ಈಗ ಅಪರಾಧಿಗಳು ಮತ್ತು ದುಷ್ಕರ್ಮಿಗಳಲ್ಲಿ ಕಾನೂನಿನ ಭಯವನ್ನು ಮೂಡಿಸುವ ಪೊಲೀಸರ (Police) ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ಪ್ರತಾಪಗಢ ಜಿಲ್ಲೆಯಲ್ಲಿ (Pratapgarh district ) ಇಂತಹ ಒಂದು ಪ್ರಕರಣ ವರದಿಯಾಗಿದ್ದು, ಬುಲ್ಡೋಜರ್ ಭಯದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗುವಂತೆ ಮಾಡಿದೆ.

ವರದಿಗಳ ಪ್ರಕಾರ, ಪ್ರತಾಪ್‌ಗಢ್ ರೈಲ್ವೆ ನಿಲ್ದಾಣದ (Pratapgarh Railway Station)ಬಳಿ ಶೌಚಾಲಯವನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿದ್ದ ಎಂದು ಆರೋಪಿಸಲಾಗಿತ್ತು. ಮಹಿಳೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ(medical test) ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.

ಆತ ತನ್ನ ಮನೆಯಲ್ಲಿ ಇಲ್ಲದ ಕಾರಣ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ಹುಡುಕಲು ವಿಫಲವಾದ ಕಾರಣ, ಅವರು ಅವರ ಮನೆಯ ಹೊರಗೆ ಬುಲ್ಡೋಜರ್ ಅನ್ನು ನಿಲ್ಲಿಸಿದರು ಮತ್ತು ಆರೋಪಿಯು 24 ಗಂಟೆಗಳ ಒಳಗೆ ಶರಣಾಗದಿದ್ದರೆ, ಅವರ ಮನೆಯನ್ನು ನೆಲಸಮ ಮಾಡುವುದಾಗಿ ಅವರ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. ಪೊಲೀಸರು ನೀಡಿದ ಈ ಎಚ್ಚರಿಕೆ ಆರೋಪಿಯನ್ನು ಹುಡುಕಲು ಸರಿಯಾದ ಮಾರ್ಗ ತೋರಿಸಿದೆ. ಅತ ತಾನು ಇರುವ ಪ್ರದೇಶದ ಬಗ್ಗೆ ಮಾಹಿತಿ ನೀಡಿದ್ದರಿಂದ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

ಕಾನೂನುಬದ್ಧವಾಗಿ, ಆಡಳಿತವು ಬುಲ್ಡೋಜರ್‌ಗಳನ್ನು ಪ್ರಾಥಮಿಕವಾಗಿ ಎರಡು ಸಂದರ್ಭಗಳಲ್ಲಿ ಬಳಸುತ್ತದೆ. ಮೊದಲನೆಯದು ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವುದು ಮತ್ತು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಯನ್ನು ಮುಕ್ತಗೊಳಿಸುವುದು. ಎರಡನೇ ಬಳಕೆಯ ಪ್ರಕರಣವು ತಲೆಮರೆಸಿಕೊಂಡಿರುವ ಕ್ರಿಮಿನಲ್ ವಿರುದ್ಧ ಪೊಲೀಸರು ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ಕೆಡವಲೂ ಬಳಸುತ್ತಾರೆ. ಹಾಗಿದ್ದರೂ, ಅಪರಾಧಿಗಳನ್ನು ಹಿಡಿಯಲು ಪೊಲೀಸರು ಬುಲ್ಡೋಜರ್ ಅನ್ನು ಬುದ್ಧಿವಂತಿಕೆಯಿಂದ ಬಳಸುತ್ತಿರುವುದು ಬಹುಶಃ ಇದೇ ಮೊದಲು.

'ಬುಲ್ಡೋಜರ್' ಎದುರು ಪಂಕ್ಚರ್ ಆದ 'ಸೈಕಲ್': ಅಖಿಲೇಶ್‌ಗೆ ಮುಳುವಾಗಿದ್ದು ಇದೇ ವಿಚಾರ

ಯೋಗಿ ಆದಿತ್ಯನಾಥ್ ಸರ್ಕಾರವು ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇತರ ಚುನಾವಣಾ ಯೋಜನೆಗಳ ನಡುವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿತ್ತು. ವಾಸ್ತವವಾಗಿ, ಯೋಗಿ ಆದಿತ್ಯನಾಥ್ ಅವರ ಕೆಲವು ರ್ಯಾಲಿಗಳಲ್ಲಿ ಬುಲ್ಡೋಜರ್‌ಗಳನ್ನು ಪ್ರಚಾರಕ್ಕಾಗಿ ಬಳಸಲಾಗಿತ್ತು.

ಉತ್ತರ ಪ್ರದೇಶದಲ್ಲಿ, ಯೋಗಿ ಆದಿತ್ಯನಾಥ್ ಅವರನ್ನು ಫಾದರ್ ಆಫ್ ಬುಲ್ಡೋಜರ್ ಎಂದೇ ಕರೆಯಲಾಗುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಬುಲ್ಡೋಜರ್‌ಗಳನ್ನು ಬಳಸುವುದಾಗಿ ಹಲವು ಭಾಷಣಗಳಲ್ಲಿ ಹೇಳಿದ್ದರು. ಅನೇಕರ ಪ್ರಕಾರ, ಈ ಬುಲ್ಡೋಜರ್‌ನ ಭಯವು ಉತ್ತರ ಪ್ರದೇಶದಲ್ಲಿ ಅಪರಾಧವನ್ನೂ ಕಡಿಮೆ ಮಾಡಿದೆ. ಹಾಗಾಗಿ ಈ ಆರೋಪಿಯ ಶರಣಾಗತಿ ಸಾಬೀತಾಗಿದೆ. 

ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಪಕ್ಷ, ಚಿಹ್ನೆಗಿಂತ ಬುಲ್ಡೋಜರ್‌ನದ್ದೇ ಸದ್ದು!

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌  ಈ ಬಾರಿ 'ಅಭಿವೃದ್ಧಿ' ಹಾಗೂ 'ಶೋಷಣೆ'ಯ ರೂಪಕವಾಗಿ ಬಳಕೆಯಾಗುತ್ತಿದೆ.  ಏನಿದು ಬುಲ್ಡೋಜರ್ ರಹಸ್ಯ ನೋಡೋಣ ಬನ್ನಿ. ಉತ್ತರ ಪ್ರದೇಶದಲ್ಲಿ ಅಧಿಕಾರ ಗಿಟ್ಟಿಸಿದ ಬಳಿಕಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ 'ಬುಲ್ಡೋಜರ್ ಬಾಬಾ' ಎಂದು ವ್ಯಂಗ್ಯವಾಡಿದ್ದರು. ಆ ಬಳಿಕ ತೆಲಂಗಾಣದ ಬಿಜೆಪಿ ಶಾಸಕ ಉತ್ತರ ಪ್ರದೇಶದ ಪ್ರಚಾರಸಭೆಯೊಂದರಲ್ಲಿ, ಯೋಗಿ ಆದಿತ್ಯನಾಥ್‌ಗೆ ಮತ ನೀಡದಿದ್ದರೆ ಬುಲ್ಡೋಜರ್ ಹರಿಸುವ ಬೆದರಿಕೆ ಹಾಕಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಅದು ಕೂಡಾ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ