ಹತ್ಯೆಯಾದ ಗ್ಯಾಂಗ್‌ಸ್ಟಾರ್ ಅತೀಕ್‌ ಸಾವಿರಾರು ಕೋಟಿಯ ಒಡೆಯ

By Kannadaprabha News  |  First Published Apr 21, 2023, 7:22 AM IST

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹಮದ್‌ ಅಕ್ರಮವಾಗಿ ಸಾವಿರಾರು ಕೋಟಿ ರು. ಆಸ್ತಿ ಸಂಪಾದನೆ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ.


ಲಖನೌ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹಮದ್‌ ಅಕ್ರಮವಾಗಿ ಸಾವಿರಾರು ಕೋಟಿ ರು. ಆಸ್ತಿ ಸಂಪಾದನೆ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಿಂದ ಈತನ ಪಾತಕ ಜಾಲವನ್ನು ಹೆಡೆಮುರಿ ಕಟ್ಟಲು ಸಾಧ್ಯವಿದ್ದ ಎಲ್ಲಾ ಯತ್ನಗಳನ್ನು ಮಾಡಿದ್ದ ಸಿಎಂ ಯೋಗಿ ಸರ್ಕಾರ ಈತನಿಗೆ ಸೇರಿದ 1169 ಕೋಟಿ ರು. ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ಹೀಗೆ ವಶಪಡಿಸಿಕೊಂಡ ಆಸ್ತಿ ಪೈಕಿ 750 ಕೋಟಿ ರು. ಮೌಲ್ಯದ ಭೂಮಿ ಮತ್ತು 417 ಕೋಟಿ ರು. ಮೌಲ್ಯದ ಇತರೆ ಆಸ್ತಿ ಸೇರಿವೆ. ಇದರ ಜೊತೆಗೆ ಹುಡುಕಿದಷ್ಟೂಆತನ ಇನ್ನಷ್ಟು ಆಸ್ತಿಗಳು ಪತ್ತೆಯಾಗುತ್ತಲೇ ಇವೆ. ಆದರೆ ಈಗಾಗಲೇ ಆಸಿಫ್‌ (Asif) ಮತ್ತು ಆತನ ಸೋದರ ಹತ್ಯೆಗೀಡಾಗಿದ್ದಾನೆ. ಮಗ ಕೂಡಾ ಎನ್‌ಕೌಂಟರ್‌ಗೆ (Encounter) ಬಲಿಯಾಗಿದ್ದಾನೆ. ಇನ್ನಿಬ್ಬರು ಪುತ್ರರು ಜೈಲು ಸೇರಿದ್ದಾರೆ. ಪತ್ನಿ ಪರಾರಿಯಾಗಿದ್ದಾಳೆ. ಹೀಗಾಗಿ ಅತೀಕ್‌ನ ನಿಜವಾದ ಆಸ್ತಿ ಎಂದಾದರೂ ಪೂರ್ಣ ಪ್ರಮಾಣದಲ್ಲಿ ಬಯಲಾಗುವುದೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಅಚ್ಚರಿ ವಿಷಯವೆಂದರೆ ಕೊನೆಯ ಬಾರಿ 2019ರ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅತೀಕ್‌ ಅಹ್ಮದ್‌ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 25 ಕೋಟಿ ರು. ಆಸ್ತಿ ಘೋಷಣೆ ಮಾಡಿಕೊಂಡಿದ್ದ. ಈತನ ಅಪಹರಣ (Kidnap), ಕೊಲೆ (Murder) ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಏಕತೆಯ ಅಗತ್ಯವನ್ನು ಎತ್ತಿ ಹಿಡಿದ ಅತೀಖ್‌ ಅಹ್ಮದ್‌ ಹತ್ಯೆ: ಇದೇ ನಾವು ಕಲಿಯಬೇಕಿರೋ ಪಾಠ!

ಪೊಲೀಸರ ಅಮಾನತು
ಮಾಫಿಯಾ ಡಾನ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಹತ್ಯೆ ಸಮಯದಲ್ಲಿದ್ದ 5 ಪೊಲೀಸ್‌ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರ ಅಶ್ರಫ್‌ ತನಿಖೆಗೆಂದು ರಚಿಸಿರುವ ಎಸ್‌ಐಟಿ, ಈ ಅಧಿಕಾರಿಗಳು ತಮ್ಮ ಕೆಲಸದ ವೇಳೆಯಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ವರದಿ ನೀಡಿದೆ. ಈ ಕಾರಣವಾಗಿ ಅಲ್ಲಿದ್ದ ಐವರು ಶಾಹಗಂಜ್‌ ಪೊಲೀಸ್‌ ಠಾಣೆಯ ಅಶ್ವನಿ ಕುಮಾರ್‌ ಸಿಂಗ್‌ ಸೇರಿ ಐವರು ಪೊಲೀಸರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

 ಅತೀಕ್‌ ಸಮಾಧಿಗೆ ರಾಷ್ಟ್ರಧ್ವಜ
ಈ ಮಧ್ಯೆ ಹತ್ಯೆಗೀಡಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ (Athiq ahmed) ಮತ್ತು ಆತನ ಸೋದರ ಅಶ್ರಫ್‌ನ ಸಮಾಧಿಯ ಮೇಲೆ ರಾಷ್ಟ್ರಧ್ವಜ ಹೊದಿಸಿ, ಅಮರರಾಗಿ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (video viral) ಆಗಿದೆ. ಅತೀಕ್‌ ಹಾಗೂ ಅಶ್ರಫ್‌ ಸಮಾಧಿಗೆ ಬುಧವಾರ ಭೇಟಿ ನೀಡಿದ ರಾಜ್‌ಕುಮಾರ್‌ ರಾಜು ಸಮಾಧಿಯ ಮೇಲೆ ರಾಷ್ಟ್ರಧ್ವಜ ಇರಿಸಿ, ‘ಅತೀಕ್‌ ಭಾಯ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಅತೀಕ್‌ ಮತ್ತು ಅಶ್ರಫ್‌ಗೆ ಗೌರವ ಕೊಡಿಸುವುದಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ರಾಜು, ಅತೀಕ್‌ನನ್ನು ಹುತಾತ್ಮ ಎಂದು ಕರೆದಿದ್ದರು.

ಅತೀಕ್ ಅಹಮ್ಮದ್ ವಕೀಲನ ಮನೆ ಮೇಲೆ ಬಾಂಬ್ ಎಸೆತ, ಯುಪಿಯಲ್ಲಿ ಮತ್ತೆ ಸೇಡಿನ ಸಮರ!

ಮಾನವ ಹಕ್ಕು ಆಯೋಗ ನೋಟಿಸ್‌
ಪೊಲೀಸರ ಬೆಂಗಾವಲಿದ್ದಾಗಲೇ ಗ್ಯಾಂಗ್‌ಸ್ಟರ್‌, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಸಹೋದರ ಅಶ್ರಫ್‌ರ ಕೊಲೆ ಹೇಗಾಯಿತು. ಈ ಕುರಿತು ನಾಲ್ಕು ವಾರಗಳೊಳಗಾಗಿ ವರದಿ ನೀಡಿ ಎಂದು  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಪೊಲೀಸರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಿನಗಳ ಹಿಂದೆ ನೋಟಿಸ್‌ ನೀಡಿತ್ತು. ಅಲ್ಲದೇ ಕೊಲೆಯ ಕುರಿತ ಎಲ್ಲಾ ಆಯಾಮಗಳು, ಮೃತರ ವೈದ್ಯಕೀಯ ವರದಿ, ವಿಚಾರಣಾ ವರದಿ, ಮರಣೋತ್ತರ ಪರೀಕ್ಷಾ (PostMortem report) ವರದಿ ಹಾಗೂ ಅದರ ವೀಡಿಯೋಗಳನ್ನು ಒದಗಿಸಬೇಕೆಂದು ಸೂಚಿಸಿದೆ.

click me!