
ಲಕ್ನೋ: ಉತ್ತರ ಪ್ರದೇಶದ ಫತ್ಹೇಪುರ ನಿವಾಸಿ ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ ಪಡೆದುಕೊಂಡ ಪರಿಣಾಮ ವಿಕಾಸ್ ದುಬೆ ಜೀವ ಉಳಿದಿದೆ. ಪದೇ ಪದೇ ಹಾವು ಕಡಿತಕ್ಕೆ ಒಳಗಾಗುತ್ತಿರುವ ವಿಕಾಸ್ ದುಬೆ ಅವರನ್ನು ಕಂಡು ವೈದ್ಯರು ಸಹ ಹೈರಾಣು ಆಗಿದ್ದಾರೆ. ಹಾವಿನ ಭಯದಿಂದ ವಿಕಾಸ್ ಸ್ವಂತ ಮನೆ ತೊರೆದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಅಲ್ಲಿಯೂ ವಿಷಕಾರಿ ಹಾವು ಕಚ್ಚಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ವಿಕಾಸ್ ದುಬೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೂನ್ 2ರಂದು ಮೊದಲ ಬಾರಿ ಮನೆಯಲ್ಲಿ ಮಲಗಿದ್ದಾಗ ವಿಕಾಸ್ ದುಬೆ ಅವರಿಗೆ ಹಾವು ಕಚ್ಚಿತ್ತು. ಹಾವು ಕಚ್ಚಿದ ತಕ್ಷಣ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ವಿಕಾಸ್ ದುಬೆ ಮನೆಗೆ ಹಿಂದಿರುಗಿದ್ದರು. ನಂತರ ಜೂನ್ 10ರಂದು ಎರಡನೇ ಬಾರಿ ಹಾವು ಕಚ್ಚಿದೆ. ಕೂಡಲೇ ಪೋಷಕರು ಅದೇ ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖರಾಗಿ ಬಂದ ಬಳಿಕ ಮನೆಗೆ ಬಂದ ವಿಕಾಸ್ ದುಬೆ ಭಯದಿಂದ ರಾತ್ರಿ ಒಬ್ಬರೇ ಹೊರಗೆ ತೆರಳೋದನ್ನು ನಿಲ್ಲಿಸಿದರು.
ಆಂಟಿ ಮನೆಗೂ ಬಂದ ನಾಗಪ್ಪ!
ಹಾವು ಕಚ್ಚುವ ಭಯದಿಂದ ಸದಾ ಜನರೊಂದಿಗೆ ವಿಕಾಸ್ ಇರಿಸಲು ಆರಂಭಿಸಿದರು. ರಾತ್ರಿ ಮಲಗುವ ಸ್ಥಳದಲ್ಲಿ ಹಾವು ಬರದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಂಡರೂ ಜೂನ್ 17ರಂದು ಮನೆಯಲ್ಲಿಯೇ ಮೂರನೇ ಬಾರಿ ಹಾವು ಕಚ್ಚಿದೆ. ನಂತರ ಚಿಕಿತ್ಸೆ ಪಡೆದು ಹಿಂದಿರುಗಿ ಬರುತ್ತಿದ್ದಂತೆ ನಾಲ್ಕನೇ ಬಾರಿ ಹಾವು ಕಚ್ಚಿದೆ. ಮತ್ತೆ ಚಿಕಿತ್ಸೆ ವಿಕಾಸ್ ದುಬೆ ಅವರಿಗೆ ಚಿಕಿತ್ಸೆ ಕೊಡಿಸಲಾಯ್ತು. ನಂತರ ಗ್ರಾಮದ ಹಿರಿಯರು ಸಲಹೆ ಮೇರೆಗೆ ವಿಕಾಸ್ ದುಬೆ ಅವರನ್ನು ರಾಧಾ ನಗರದಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಕಳುಹಿಸಲಾಗಿತ್ತು. ಆದ್ರೆ ಆಂಟಿ ಮನೆಗೂ ಬಂದ ನಾಗಪ್ಪ ಐದನೇ ಬಾರಿ ಕಚ್ಚಿದ್ದಾನೆ.
ವಿಕಾಸ್ ದುಬೆಗೆ ಚಿಕಿತ್ಸೆ ನೀಡಿರುವ ವೈದ್ಯ ಡಾ.ಜವಾಹರ್, ಇದೊಂದು ವಿಚಿತ್ರ ಘಟನೆಯಾಗಿದೆ. ಮೂರನೇ ಬಾರಿ ಹಾವು ಕಚ್ಚಿದಾಗ ಊರು ತೊರೆಯುವಂತೆ ಸಲಹೆ ನೀಡಿದ್ದೆ. ಆದರೂ ಮತ್ತೆ ಹಾವು ಕಚ್ಚಿದೆ. ಸದ್ಯ ವಿಕಾಸ್ ದುಬೆ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ