Dont Shoot Me.. ಪ್ಲೇ ಕಾರ್ಡ್‌ನೊಂದಿಗೆ ಠಾಣೆಗೆ ಬಂದು ಶರಣಾದ ಗೂಂಡಾಗಳು

Suvarna News   | Asianet News
Published : Mar 16, 2022, 03:43 PM IST
Dont Shoot Me.. ಪ್ಲೇ ಕಾರ್ಡ್‌ನೊಂದಿಗೆ ಠಾಣೆಗೆ ಬಂದು ಶರಣಾದ ಗೂಂಡಾಗಳು

ಸಾರಾಂಶ

ನನ್ನನ್ನು ಶೂಟ್ ಮಾಡಬೇಡಿ, ನಾನು ಶರಣಾಗುತ್ತಿದ್ದೇನೆ ಪ್ಲೇಕಾರ್ಡ್‌ಹಿಡಿದು ಠಾಣೆಗೆ ಬಂದು ಶರಣಾದ ಗೂಂಡಾ ಯೋಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ರಿಮಿನಲ್‌ಗಳಿಗೆ ಭೀತಿ

ಲಕ್ನೋ(ಮಾ.16):ಯೋಗಿ ಆದಿತ್ಯನಾಥ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಉತ್ತರಪ್ರದೇಶದ ಕ್ರಿಮಿನಲ್‌ಗಳಲ್ಲಿ ಭೀತಿ ಎದುರಾಗಿದೆ. ಹೀಗಾಗಿ ಅಪರಾಧಿಗಳೇ ಠಾಣೆಗೆ ಬಂದು ಶರಣಾಗುತ್ತಿದ್ದಾರೆ. ಹೀಗೆ ಶರಣಾಗಲು ಬಂದ ರೌಡಿಯೋರ್ವ ನನ್ನನ್ನು ಶೂಟ್ ಮಾಡಬೇಡಿ ಎಂದು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು ಬಂದಿದ್ದ. ಮಂಗಳವಾರ (15 ಮಾರ್ಚ್ 2022) ಉತ್ತರಪ್ರದೇಶದ ಗೊಂಡಾದಲ್ಲಿ (Gonda) ಈ ಒಂದು ಪ್ರಕರಣ ಕಂಡುಬಂದಿದೆ. ಗೊಂಡದ ಠಾಣಾ ಛಾಪಿಯಾದಲ್ಲಿ (Thana Chhapia) ತಲೆಗೆ 25 ಸಾವಿರ ಬಹುಮಾನ ಘೋಷಿಸಲ್ಪಟ್ಟ ರೌಡಿಯೋರ್ವ  ಶರಣಾಗಲು ಪೊಲೀಸ್ ಠಾಣೆಗೆ ಹೀಗೆ ಕೈಯಲ್ಲಿ ನನ್ನನ್ನು ಶೂಟ್ ಮಾಡಬೇಡಿ ಎಂಬ ಪ್ಲೇ ಕಾರ್ಡ್‌ ಹಿಡಿದು ಠಾಣೆಗೆ ಶರಣಾಗಲು ಬಂದಿದ್ದ. ನಾನು ಶರಣಾಗುತ್ತಿದ್ದೇನೆ, ನನಗೆ ಗುಂಡು ಹಾರಿಸಬೇಡಿ ಎಂದು ಆ ಪ್ಲೇಕಾರ್ಡ್‌ನಲ್ಲಿ ಬರೆಯಲಾಗಿತ್ತು.

ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪ್ರತಿ ಪ್ರದೇಶದ ಜನರು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಾದ ಸುಧಾರಣೆಗಳನ್ನು ಶ್ಲಾಘಿಸುತ್ತಿರುವುದು ಕಂಡುಬಂದಿತ್ತು. ಇದೀಗ ಮತ್ತೆ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರಿಮಿನಲ್‌ಗಳಲ್ಲಿ ಮತ್ತೆ ಅದೇ ಭೀತಿ ಎದ್ದು ಕಾಣುತ್ತಿದೆ. ಅಪರಾಧಿಗಳೇ ಠಾಣೆಗೆ ಬಂದು ಶರಣಾಗಲು ಆರಂಭಿಸಿದ್ದಾರೆ. 

ವರುಣ್ ಹಲ್ಲೆ: SDPI ಗೂಂಡಾಗಳು ಪೊಲೀಸ್‌ ಖೆಡ್ಡಕ್ಕೆ ಬಿದ್ದ ರೋಚಕ ಕಹಾನಿ ಇದು!

ಇನ್ನು ಹೀಗೆ ಶರಣಾದ ಪಾತಕಿಯನ್ನು ಗೌತಮ್ ಸಿಂಗ್(Gautam Singh) ಎಂದು ಗುರುತಿಸಲಾಗಿದೆ. ವ್ಯಾಪಾರಿಯೋರ್ವರ ಅಪಹರಣ ಪ್ರಕರಣದಲ್ಲಿ ಈತ ಬೇಕಾಗಿದ್ದ. ಚಿಕನ್‌ ಅಂಗಡಿ ಮಾಲೀಕನನ್ನು ಅಪಹರಿಸಿ ಆತನ ಬಿಡುಗಡೆಗೆ 20 ಲಕ್ಷಕ್ಕೆ ಬೇಡಿಕೆ ಇರಿಸಿದ್ದ. ಅಣ್ಣನ ಜೊತೆ ಶರಣಾಗಲು ಬಂದ ಗೌತಮ್ ಸಿಂಗ್, 'ಸರ್, ನನ್ನನ್ನು ಕ್ಷಮಿಸಿ, ನನಗೆ ತುಂಬಾ ಭಯವಾಗಿದೆ, ಅವರು ಗುಂಡು ಹಾರಿಸುತ್ತಾರೆ ಎಂದು ಕ್ಯಾಪ್ಟನ್ ಸಾಹೇಬ್ ಹೇಳಿದ್ದು ಕೇಳಿ ನನಗೆ ತುಂಬಾ ಭಯವಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ ಸಾರ್. ನಾನು ಶರಣಾಗುತ್ತಿದ್ದೇನೆ. ನಾನು ತಂಬೆಪುರ ನಿವಾಸಿ ನನ್ನ ಹೆಸರು ಗೌತಮ್ ಸಿಂಗ್ ತಂದೆಯ ಹೆಸರು ರಾಜೇಶ್ವರಿ ಸಿಂಗ್ ಎಂದು ಆತ ಒಂದೇ ಉಸಿರಿನಲ್ಲಿ ಹೇಳಿದ್ದಾನೆ. ನಾನು ರಾಜ್‌ಕುಮಾರ್‌, ಶಿವಮ್‌, ಜುಬೇರ್‌ ಬಭನನ್‌  ( Babhanan) ಪ್ರದೇಶದ ಅಂಗಡಿಯೊಂದರ ವ್ಯಾಪಾರಿಯನ್ನು ಎತ್ತಾಕಿಕೊಂಡು ಬಂದೆವು. ಕ್ಯಾಪ್ಟನ್ ಸಾಹೇಬ್ ಗುಂಡು ಹಾರಿಸುತ್ತಾರೆ ಎಂಬುದನ್ನು ಕೇಳಿ ನಾನು ಭಯಗೊಂಡಿದ್ದೇನೆ ಎಂದು ಆತ ಹೇಳಿದ್ದಾನೆ.

ಕಿಡ್ನಾಪ್‌ ನಡೆದ ನಂತರ ಪೊಲೀಸರು ಮಾರ್ಚ್‌ 7 ರಂದು ಪೊಲೀಸರು ಕಾರ್ಯಾಚರಣೆ ನಡೆಸಿ ಜುಬೇರ್‌ ಹಾಗೂ ರಾಜ್‌ಕುಮಾರ್‌ ಎಂಬ ಇಬ್ಬರನ್ನು ಬಂಧಿಸಿದ್ದರು. ಆದರೆ ಈ ವೇಳೆ ಗೌತಮ್‌ ಸಿಂಗ್‌ ತಪ್ಪಿಸಿಕೊಂಡಿದ್ದ. ಹೀಗಾಗಿ ಈತನ ಬಗ್ಗೆ ಸುಳಿವು ನೀಡಿದವರಿಗೆ 25000 ಬಹುಮಾನ ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ ಇದನ್ನರಿತ ಗೌತಮ್‌ ಸಿಂಗ್ ತನ್ನ ಸಹೋದರ ಅನಿಲ್‌ ಜೊತೆ ಬಂದು ಠಾಣೆಯಲ್ಲಿ ಶರಣಾಗಿದ್ದಾನೆ. 

Boyfriend On Rent... ಪ್ರೇಮಿಗಳ ದಿನ BE ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್
 

ಈ ಗೌತಮ್‌ ತನ್ನ ಸಹಚರರೊಡಗೂಡಿ ವ್ಯಾಪಾರಿ ಶೀಲಾ ಪ್ರಕಾಶ್‌ ಎಂಬುವವರನ್ನು ಕಿಡ್ನಾಪ್‌ ಮಾಡಿದ್ದ ಬಳಿಕ ಅವರನ್ನು ಕಾರೊಂದರಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಅವರ ಬಿಡುಗಡೆಗೆ 20 ಲಕ್ಷ ನೀಡಬೇಕೆಂದು ಬೇಡಿಕೆ ಇರಿಸಿದ್ದ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?