UP Election 2022 ಚುನಾವಣೆ ಬೆನ್ನಲ್ಲೇ ಉತ್ತರ ಪ್ರದೇಶ ಬಿಜೆಪಿ ಶಾಸಕನ ಕಿಡ್ನಾಪ್, ರಕ್ಷಣೆ ಕೋರಿ ಪುತ್ರಿಯಿಂದ ದೂರು!

By Suvarna NewsFirst Published Jan 12, 2022, 3:51 PM IST
Highlights
  • ಉತ್ತರ ಪ್ರದೇಶದಲ್ಲಿ ಶುರುವಾಯ್ತು ಚುನಾವಣಾ ರಾಜಕೀಯ
  • ಬಿಧುನಾ ಕ್ಷೇತ್ರದ ಬಿಜೆಪಿ ಶಾಸಕ ವಿನಯ ಶಕ್ಯಾ ಅಪಹರಣ
  • ರಕ್ಷಣೆ ನೀಡಲು ಯೋಗಿ ಸರ್ಕಾರಕ್ಕೆ ಪುತ್ರಿಯ ಮನವಿ, ಪೊಲೀಸರಿಗೆ ದೂರು

ಉತ್ತರ ಪ್ರದೇಶ(ಜ.12): ಉತ್ತರ ಪ್ರದೇಶದಲ್ಲಿ ಚುನಾವಣೆ(UP Election 2022) ದಿನಾಂಕ ಘೋಷಣೆಯಾಗುವ ಮೊದಲೇ ರಾಜಕೀಯ ಚಟುವಟಿಕೆ ಗರಿದೆರಿತ್ತು. ಇದೀಗ ರಾಜಕೀಯ ಬೆಳವಣಿಗೆಗಳು ಹೆಚ್ಚಾಗಿದೆ. ಯುಪಿ ಚುನಾವಣೆಗೆ ಇನ್ನು ಪೂರ್ಣ ಒಂದು ತಿಂಗಳು ಬಾಕಿ ಇಲ್ಲ. ಅಷ್ಟರಲ್ಲೇ ನಾಯಕರ ಅಪಹರಣ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ವರದಿಯಾಗುತ್ತಿದೆ. ಇದೀಗ ಬಿಧುನಾ ಕ್ಷೇತ್ರದ ಬಿಜೆಪಿ ಶಾಸಕ ವಿನಯ್ ಶಕ್ಯಾರನ್ನು(Vinjya Shakya) ಕಿಡ್ನಾಪ್ (Kidnap)ಮಾಡಲಾಗಿದೆ. ಈ ಕುರಿತು ಶಕ್ಯಾ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಂದೆ ವಿನಯ್ ಶಕ್ಯಾರನ್ನು ಚಿಕ್ಕಪ್ಪ ಹಾಗೂ ಅಜ್ಜಿ ಔರಿಯಾದಿಂದ ಲಕ್ನೋಗೆ ಕರೆದೊಯ್ದಿದ್ದಾರೆ. ಬಳಿಕ ತಂದೆ ನಾಪತ್ತೆಯಾಗಿದ್ದಾರೆ. ಇದರ ಹಿಂದೆ ರಾಜಕೀಯ(UP Politics) ಷಡ್ಯಂತ್ರ ಅಡಗಿದೆ. ತಂದೆ ಫೋನ್ ಸ್ವಿಚ್ ಆಫ್ ಆಗಿದೆ. ತಂದೆಯನ್ನು ಬಿಜೆಪಿಯಿಂದ ಇತರ ಪಕ್ಷಕ್ಕೆ ಪಕ್ಷಾಂತರ ಮಾಡಲು ಬೆದರಿಕೆ ತಂತ್ರ ಉಪಯೋಗಿಸಲಾಗುತ್ತಿದೆ ಎಂದು ಪುತ್ರಿ ರಿಯಾ ಶಕ್ಯ (Riya Shakya) ಪೊಲೀಸರಿಗೆ ತೂರು ನೀಡಿದ್ದಾರೆ. 

UP Election 2022 ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಶಿವಸೆನೆ, 50 ರಿಂದ 100 ಸ್ಥಾನಗಳಲ್ಲಿ ಸ್ಪರ್ಧೆ!

ಚುನಾವಣೆ ಹೊಸ್ತಿಲಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪ್ರರ್ಯಟನೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡಿದಿರುವುದು ಆತಂಕ ಹೆಚ್ಚಿಸಿದೆ. ಉತ್ತರ ಪ್ರದೇಶ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರ ಇಬ್ಬರು ನಾಯಕರು ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಸೇರಿದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ಸ್ವಾಮಿ ಪ್ರಸಾದ್ ಮೌರ್ಯ ಆಪ್ತರಾಗಿರುವ ವಿನಯ್ ಶಕ್ಯಾರನ್ನು ಸಮಾಜಿವಾದಿ ಪಕ್ಷಕ್ಕೆ ಸೇರಿಸಲು ಈ ಅಪಹರಣ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ತಂದೆಯನ್ನು ಹುಡುಕಿ ಕೊಡಿ ಎಂದು ಪೊಲೀಸರಿಗೆ ಪುತ್ರಿ ದೂರು ನೀಡಿದ್ದಾರೆ. ಇತ್ತ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ಗೆ ಕುಟುಂಬಕ್ಕೆ ರಕ್ಷಣೆ ನೀಡುವಂತೆ ರಿಯಾ ಶಕ್ಯ ಮನವಿ ಮಾಡಿದ್ದಾರೆ. ಈ ಕುರಿತು ಪುತ್ರಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಮೂಲಗಳ ಪ್ರಕಾರ ಶಕ್ಯಾ ಕುಟುಂಬದಲ್ಲಿ ಮುಂಬರುವ ಚುನಾವಣೆ ಟಿಕೆಟ್‌(Election Ticket) ಹಾಗೂ ಸ್ಪರ್ಧಿಸುವ ನಿಟ್ಟಿನಲ್ಲಿ ಭಾರಿ ಜಗಳ ನಡೆಯುತ್ತಿದೆ. ವಿನಯ್ ಶಕ್ಯಾರಿಗೆ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ ವಿನಯ್ ಶಕ್ಯಾ ಅವರ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕುಟುಂಬದಲ್ಲಿ ಭಾರಿ ಕೋಲಾಹಲ ನಡೆಯುತ್ತಿದೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. ವಿನಯ್ ಶಕ್ಯ ಸಹೋದರು ದೇವೇಶ್ ಶಕ್ಯಾ ಬಿಧುನಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇತ್ತ ತಂದೆ ಅನಾರೋಗ್ಯದ(Health) ಕಾರಣ ಆ ಸ್ಥಾನ ತನಗೆ ಬೇಕು ಎಂದು ಪುತ್ರಿ ರಿಯಾ ಶಕ್ಯ ಪಟ್ಟು ಹಿಡಿದ್ದಾರೆ. 

Uttar Pradesh elections : ಬಿಜೆಪಿಗೆ ಆಘಾತ, ಒಂದೇ ದಿನ ನಾಲ್ವರು ಶಾಸಕರ ರಾಜೀನಾಮೆ!

ಕುಟುಂಬದ ಆತಂಕರಿಕ ಕಲಹದಿಂದ ಈ ರಾಜಕೀಯ ನಾಟಕ ಆರಂಭಗೊಂಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಿಯಾ ಶಕ್ಯ ತಂದೆ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಬಿಧುನಾ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಮತದಾರರನ್ನು ಸೆಳೆಯಲು ಕರಸತ್ತು ಮಾಡುತ್ತಿದ್ದಾರೆ. ರಿಯಾ ಶಕ್ಯ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ವಿನಯ್ ಶಕ್ಯಾ ತಾಯಿ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಿಡ್ನಾಪ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022:
ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಏಣಿಕೆ ನಡೆಯಲಿದೆ. 403 ಕ್ಷೇತ್ರಗಳ ಚನಾವಣೆ 7 ಹಂತಗಳಲ್ಲಿ ನಡೆಯಲಿದೆ. ಕಳೆದ ಚುನಾವಣೆ ಅಂದರೆ 2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತು.

click me!