
ಜೈಪುರ(ಜ.12): ರಾಜಸ್ತಾನದ ಅಲ್ವಾರದಲ್ಲಿರುವ ತಿಜಾರ ಫ್ಲೈಓವರ್ ಬಳಿ ವಿಕಲಚೇತನ ಅಪ್ರಾಪ್ತ ಬಾಲಕಿಯೊಬ್ಬಳು ಎಸೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕಿ ಅತ್ಯಾಚಾರಕ್ಕೊಳಗಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಅಲ್ವಾರ್ ದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಮತ್ತೊಮ್ಮೆ ಮಾನವೀಯತೆ ತಲೆತಗ್ಗಿಸುವಂತೆ ಮಾಡಿದೆ. ಈ ಘೋರ ಘಟನೆ ತಿಜಾರಾ ಮೇಲ್ಸೇತುವೆಯಲ್ಲಿ ನಡೆದಿದೆ. ತಡರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಬಾಲಕಿ ಚಿಂತಾಜನಕ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದ್ದು, ಬಾಲಕಿಯ ಖಾಸಗಿ ಭಾಗದಲ್ಲಿ ರಕ್ತ ಸುರಿಯುತ್ತಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅಪ್ರಾಪ್ತೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಾಲಕಿ ಯಾರು ಎಲ್ಲಿನ ನಿವಾಸಿ ಎಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ.
ರಾತ್ರಿ 9 ಗಂಟೆ ಸುಮಾರಿಗೆ ತಿಜಾರಾ ಮೇಲ್ಸೇತುವೆ ಮೇಲೆ ಯಾರೋ ಅಪ್ರಾಪ್ತ ಬಾಲಕಿಯನ್ನು ಎಸೆದಿರುವ ಮಾಹಿತಿ ಲಭಿಸಿದೆ ಎಂದು ಎಸ್ಪಿ ತೇಜಸ್ವಿನಿ ಗೌತಮ್ (SP Tejaswani Gautam) ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದಾಗ ಬಾಲಕಿಯ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ಈ ಬಾಲಕಿ ಮಾನಸಿಕ ಅಸ್ವಸ್ಥಳು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Minor Girl Rape: ಅಪ್ರಾಪ್ತೆಗೆ ಬಲವಂತದ ಮದುವೆ, ಅತ್ಯಾಚಾರ, ಇಬ್ಬರ ಬಂಧನ
ಇದು ಸಂಪೂರ್ಣ ಅತ್ಯಾಚಾರ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆದು ಆಕೆಯನ್ನು ಫ್ಲೈ ಓವರ್ ಮೇಲೆ ಎಸೆದಿರಬಹುದು. ಈ ಬಗ್ಗೆ ತಿಳಿದ ಜಿಲ್ಲಾಧಿಕಾರಿ ನನ್ನುಮಲ್ ಪಹಾಡಿಯಾ (Nannumal Pahadia) ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು. ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
Fresh FIR Against Actor Dileep: ಲೈಂಗಿಕ ದೌರ್ಜನ್ಯ ಕೇಸ್, ಸ್ಟಾರ್ ನಟನ ವಿರುದ್ಧ ಮತ್ತೊಮ್ಮೆ FIR
2.5 ವರ್ಷದ ಮಗುವಿನ ಮೇಲೆ ವೃದ್ಧನೋರ್ವ ಅತ್ಯಾಚಾರ (Rape) ಯತ್ನ ನಡೆಸಿದ್ದು ಕಾಮ ಪಿಶಾಚಿ ವೃದ್ಧನಿಗೆ ಮಹಿಳೆಯರು (Woman)ಸರಿಯಾಗಿ ಗೂಸಾ ನೀಡಿದ ಘಟನೆ ತುಮಕೂರು ಗ್ರಾಮಾಂತರದ ಬೇತ್ತಲೂರು ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. 60 ವರ್ಷದ ವಿನ್ಸನ್ ಜಾನ್ಸನ್ ಕೃತ್ಯ ಎಸಗಲು ಮುಂದಾಗಿದ್ದ ವ್ಯಕ್ತಿ. ಮಗುವನ್ನು ತೋಟಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ. ಕಾಮುಕನ ಕೃತ್ಯ ನೋಡಿದ ಗ್ರಾಮದ ನಿವಾಸಿಗಳು ರಕ್ಷಣೆ ಮಾಡಿದ್ದಾರೆ. ಬಳಿಕ ಮಹಿಳೆಯರೇ ಸೇರಿಕೊಂಡು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಈ ಹಿಂದೆ ಕೂಡ ಮಹಿಳೆಯರೊಂದಿಗೆ ಈ ವೃದ್ಧ ಅಸಭ್ಯವಾಗಿ ವರ್ತಿಸಿದ್ದ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ