Yogi Meets Mother 28 ವರ್ಷದ ಬಳಿಕ ತಾಯಿ ಭೇಟಿ ಮಾಡಿ ಭಾವುಕರಾದ ಯೋಗಿ ಆದಿತ್ಯನಾಥ್!

Published : May 04, 2022, 05:15 AM IST
Yogi Meets Mother 28 ವರ್ಷದ ಬಳಿಕ ತಾಯಿ ಭೇಟಿ ಮಾಡಿ ಭಾವುಕರಾದ ಯೋಗಿ ಆದಿತ್ಯನಾಥ್!

ಸಾರಾಂಶ

ತಾಯಿ ಭೇಟಿಯಾಗಿ ಆಶೀರ್ವಾದ ಪಡೆದ ಸಿಎಂ ಯೋಗಿ ಸಿಎಂ ಆದ ಬಳಿಕ ಇದೆ ಮೊದಲ ಬಾರಿಗೆ ತಾಯಿ ಬೇಟಿ ಹುಟ್ಟೂರಿಗೆ ತೆರಳಿ ತಾಯಿ ಭೇಟಿ ಮಾಡಿದ ಯೋಗಿ  

ಲಖನೌ(ಮೇ.04): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಖಾಸಗಿ ಕಾರ್ಯಕ್ರಮದ ಮೇಲೆ ಬಹಳ ವರ್ಷಗಳ ನಂತರ ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ ತೆರಳಿರುವ ಯೋಗಿ, ತಮ್ಮ ತಾಯಿ ಸಾವಿತ್ರಾ ದೇವಿ(85) ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ತಾಯಿಗೆ ನಮಸ್ಕಾರ ಮಾಡುತ್ತಿರುವ ಫೋಟೋವನ್ನು ಟ್ವೋಟರ್‌ನಲ್ಲಿ ಸ್ವತಃ ಯೋಗಿ ಅವರು ಹಂಚಿಕೊಂಡಿದ್ದಾರೆ. 28 ವರ್ಷಗಳಿಂದ ಯೋಗಿ ತಮ್ಮ ಹುಟ್ಟೂರಿಗೆ ಭೇಟಿ ನೀಡಿರಲಿಲ್ಲ ಎಂದು ಹೇಳಲಾಗಿದೆ.

ಇತ್ತೀಚೆಗೆ ಯೋಗಿ ಸಹೋದರಿ ಯೋಗಿ ಆದಿತ್ಯನಾಥ್ ಬಳಿ ವಿಶೇಷ ಮನವಿ ಮಾಡಿದ್ದರು. ಒಮ್ಮೆಯಾದರೂ ತಾಯಿಯನ್ನು ಭೇಟಿಯಾಗಿ ಎಂದಿದ್ದರು. ಗೋರಖ್‌ಪುರ ಮಠಕ್ಕೆ ಬಂದ ಬಳಿಕ ಯೋಗಿ ತಾಯಿಯನ್ನು ಭೇಟಿಯಾಗಿಲ್ಲ. ನಿಮ್ಮ ಭೇಟಿಗಾಗಿ ತಾಯಿ ಕಾಯುತ್ತಿದ್ದಾರೆ ಎಂದು ಯೋಗಿ ಸಹೋದರಿ ಹೇಳಿದ್ದರು.

ಯೋಗಿ ಆದಿತ್ಯನಾಥ್ ಭೇಟಿಯಾದ ಕಂಗನಾ; ಮಹಾರಾಜ್ ಎಂದು ಹೊಗಳಿದ ನಟಿ

ಸಿಎಂ ಯೋಗಿ ಭೇಟಿಯಾದ ತುಮಕೂರು ಶ್ರೀಗಳು
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ತುಮಕೂರು ಮೂಲದ ಹಲವು ಮಠಾಧೀಶರು ಭೇಟಿ ಮಾಡಿದ್ದಾರೆ. ಬೆಳ್ಳಾವಿಯ ಶ್ರೀಕಾರದೇಶ್ವರ ವೀರಬಸವ ಸ್ವಾಮೀಜಿ, ತಿಪಟೂರಿನ ಷಡಕ್ಷರ ಮಠದ ಬಸವಲಿಂಗ ಸ್ವಾಮೀಜಿ,ಕಾಶಿ ಅನ್ನಪೂರ್ಣೇಶ್ವರಿ ಮಠ,ತಂಗನಹಳ್ಳಿ ಮಠದ ಶ್ರೀಗಳು ಸಹಿತ ಹಲವು ಮಠಾಧೀಶರು ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿದರು. ಇದೇ ವೇಳೆ ಶ್ರೀಕಾರದೇಶ್ವರ ಮಠದ ವೀರಬಸವ ಸ್ವಾಮೀಜಿ ಅವರು ತಮ್ಮ ಮಠಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

 

 

ಬಳಿಕ ಸಿಎಂ ಯೋಗಿ ಆದಿತ್ಯನಾಥರು ತಮ್ಮ ಒತ್ತಡದ ಕಾರ್ಯಗಳ ನಡುವೆಯೂ ಶ್ರೀಕಾರದೇಶ್ವರ ಶ್ರೀಗಳ ಸಹಿತ ಇತರೇ ಶ್ರೀಗಳ ಜೊತೆಯಲ್ಲಿ ಉಭಯ ಕುಶಲೋಪರಿ ನಡೆಸಿ, ಶ್ರೀ ಮಠಕ್ಕೆ ನಮ್ಮ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಪ್ರತಿ ರೈತನ ಕುಟುಂಬಕ್ಕೆ ಒಂದು ಕೆಲಸ ನೀಡಲು ಯೋಗಿ ಆದಿತ್ಯನಾಥ್ ನಿರ್ಧಾರ!

ಯೋಗಿ ಭೇಟಿಗೆ 200 ಕಿ.ಮೀ ಓಡಿದ 10 ವರ್ಷದ ಬಾಲಕಿಅಥ್ಲೀಟ್‌ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ 10 ವರ್ಷದ ಬಾಲಕಿಯೊಬ್ಬಳು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಹ್ವಾನದ ಅನ್ವಯ ಅವರನ್ನು ಭೇಟಿ ಮಾಡಲು ಪ್ರಯಾಗರಾಜ್‌ನಿಂದ ಲಖನೌವರೆಗೆ ಓಡಿದ್ದಾಳೆ. ಶನಿವಾರ ಆಕೆಯನ್ನು ಬರಮಾಡಿಕೊಂಡ ಮುಖ್ಯಮಂತ್ರಿ ಆಕೆಯ ಕನಸು ನನಸಾಗಲಿ ಎಂದು ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಭೇಟಿಯಾದ ಬಾಲಕಿ ಕಾಜಲ್‌ಗೆ ಯೋಗಿ ಒಂದು ಜತೆ ಶೂ, ಟ್ರ್ಯಾಕ್‌ಸ್ಯೂಟ್‌ ಮತ್ತು ಕ್ರೀಡಾ ಕಿಟ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಯಾಗ್‌ರಾಜ್‌ನ ಮಾಂಡ ಪೊಲೀಸ್‌ ಠಾಣೆ ವಲಯದಲ್ಲಿ ವಾಸಿಸುತ್ತಿರುವ 4ನೇ ತರಗತಿ ವಿದ್ಯಾರ್ಥಿನಿ ಕಾಜಲ್‌, ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸುಮಾರು 200 ಕಿ.ಮೀ. ದೂರ ಓಟ ನಡೆಸಿದ್ದಾಳೆ. ಏ.10ರಂದು ಪ್ರಯಾಗರಾಜ್‌ನಿಂದ ಓಟ ಆರಂಭಿಸಿದ್ದ ಬಾಲಕಿ ಏ.15ರಂದು ತನ್ನ ಓಟವನ್ನು ಪೂರ್ಣಗೊಳಿಸಿದ್ದಾಳೆ.

ಬೀದಿ ಕಾಮಣ್ಣರ ನಿಗ್ರಹಕ್ಕೆ ಆ್ಯಂಟಿ ರೋಮಿಯೋ ಸ್ಕ್ವಾಡ್
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯದಾದ್ಯಂತ ಏ.2ರಿಂದ ‘ಆ್ಯಂಟಿ ರೋಮಿಯೋ ಸ್ಕ್ವಾಡ್’ಗಳನ್ನು ಸಕ್ರಿಯಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಇರುವ ಈ ಪಡೆಯ ಸಿಬ್ಬಂದಿ, ಸಾಮಾನ್ಯ ಸಮವಸ್ತ್ರದಲ್ಲೇ ಎಲ್ಲೆಡೆ ತಿರುಗಾಡುತ್ತಾ ಮಹಿಳೆಯರ ರಕ್ಷಣೆ ಮಾಡುತ್ತಾರೆ. ಹಗಲು ವೇಳೆ ಶಾಲಾ ಕಾಲೇಜುಗಳ ಬಳಿ ಮತ್ತು ಸಂಜೆ ವೇಳೆ ಮಾರುಕಟ್ಟೆಮತ್ತು ಜನನಿಬಿಡ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದೇ ವೇಳೆ ಏ.10ರಿಂದ ಹೆಣ್ಣುಮಕ್ಕಳ ಸುರಕ್ಷತೆಗಾಗಿ ‘ಮಿಷನ್‌ ಶಕಿ’್ತ ಎಂಬ ಎಂಬ ಯೋಜನೆ ಜಾರಿಗೂ ಸರ್ಕಾರ ಮುಂದಾಗಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ