
ಲಖನೌ(ಸೆ.19): ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರಕ್ಕೆ ಪ್ರಚೋದಿಸುವ ‘ಲವ್ ಜಿಹಾದ್’ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿಂತನೆ ನಡೆಸಿದ್ದಾರೆ.
ಯೋಗಿ ರಾಜ್ಯದಲ್ಲಿ ಚುನಾವಣಾ ಸ್ಪರ್ಧಿಗಳಿಗೆ ಎರಡು ಷರತ್ತು, ಅಶಿಕ್ಷಿತರಿಗಿಲ್ಲ ಟಿಕೆಟ್!
‘ಲವ್ ಜಿಹಾದ್ ವಿರುದ್ಧ ಕಠಿಣ ನಿಯಮಗಳನ್ನು ಸಿದ್ಧಪಡಿಸಿ. ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಆದಿತ್ಯನಾಥ್ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪ್ರೀತಿ-ಪ್ರೇಮದ ನಾಟಕವಾಡಿ ಯುವತಿಯರನ್ನು ಕೆಲವರು ಮದುವೆ ಆಗುತ್ತಾರೆ. ನಂತರ ಬಲವಂತವಾಗಿ ಯುವತಿಯರನ್ನು ಮತಾಂತರಿಸುತ್ತಾರೆ ಹಾಗೂ ದೌರ್ಜನ್ಯವೆಸಗುತ್ತಾರೆ. ಇಂಥ ಪ್ರಕರಣಗಳಲ್ಲಿ ಕೊಲೆಗಳೂ ನಡೆದಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿಯಮಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅಗತ್ಯಬಿದ್ದರೆ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಲವ್ ಜಿಹಾದ್ ತಡೆಯಲು ಸಿಎಂ ಯೋಗಿ ದಿಟ್ಟ ಆದೇಶ!
ಕಳೆದ ವರ್ಷ ಉತ್ತರ ಪ್ರದೇಶ ಕಾನೂನು ಆಯೋಗವು, ಬಲವಂತದ ಮತಾಂತರ ನಿಷೇಧಕ್ಕೆ ಹೊಸ ಕಾನೂನು ರೂಪಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ