
ಲಕ್ನೋ(ಏ.20: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ಸೋಮವಾರದಂದು ಕೊನೆಯುಸಿರೆಳೆದಿದ್ದಾರೆ. ಆದರೆ ಲಾಕ್‌ಡೌನ್ ಘೋಷಣೆ ಹಿನ್ನೆಲೆ ಯೋಗಿ ಆದಿತ್ಯನಾಥ್ ತನ್ನ ತಂದೆ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಸಿಎಂ ಯೋಗಿ ಆದಿತ್ಯನಾಥ್ ಲಾಕ್‌ಡೌನ್ ನಿಯಮ ಪಾಲಿಸುವುದಾಗಿ ನಿರ್ಧರಿಸಿದ್ದು, ತಾನು ತಂದೆಯ ಅಂತ್ಯ ದರ್ಶನ ಪಡೆಯಲು ಸಾಧ್ಯವಿಲ್ಲ ಎಂದು ಮನೆಯವರಿಗೂ ತಿಳಿಸಿದ್ದಾರೆ. ಅಲ್ಲದೇ ಲಾಕ್‌ಡೌನ್ ಇರುವ ಕಾರಣ ಅಂತ್ಯ ಕ್ರಿಯೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಜನರು ಇರುವಂತೆ ನಿಗಾ ವಹಿಸಲು ಮನವಿಯನ್ನೂ ಮಾಡಿದ್ದಾರೆ.
ತನ್ನ ಬಾರ್‌ಗೆ ತಾನೇ ಕನ್ನ ಹಾಕಿದ ಮಾಲೀಕ: ಕಾರಣ?
ಯುಪಿ ಸಿಎಂ ತಂದೆ ಆದಿತ್ಯ ಸಿಂಗ್ ವಷ್ಟ್ ಸೋಮವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಿಕ್ಕಾಗ ಅವರು ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿದ್ದರೆನ್ನಲಾಗಿದೆ. ಅಧಿಕಾರಿಗಳು ಯೋಗಿ ಆದಿತ್ಯನಾಥ್ ಅಂತಿಮ ದರ್ಶನಕ್ಕೆ ತೆರಳುತ್ತಾರೆಂದು ತಯಾರಿ ಮಾಡಿದ್ದರು. ಆದರೆ ಸಿಎ ಮಾತ್ರ ಸಭೆ ಮುಂದುವರೆಸಿದ್ದಾರೆ.
ಈ ಸಂಬಂಧ ನೊಟ್ ಒಂದನ್ನು ಬಿಡುಗಡೆ ಮಾಡಿರುವ ಯೋಗಿ ಆದಿತ್ಯನಾಥ್ ನನ್ನ ತಂದೆ ಮೃತಪಟ್ಟಿದ್ದು, ಬಹಳ ದುಃಖವಾಗುತ್ತಿದೆ. ಕೊನೆಯ ಬಾರಿ ಒಮ್ಮೆ ನೋಡಬೇಕೆಂಬ ಇಚ್ಛೆ ಇತ್ತು. ಆದರೆ ಮಾಮಾರಿ ಕೊರೋನಾದಿಂದಾಗಿ ಇದು ಸಾಧ್ಯವಾಗಿಲ್ಲ ಎಂದಿದ್ದಾರೆ. ತಾಯಿಗೆ ಭಾವುಕ ಪತ್ರವೊಂದನ್ನು ಬರೆದಿರುವ ಸಿಎಂ ಸದ್ಯ ತನ್ನ ವೈಯುಕ್ತಿಕ ಜೀವನಕ್ಕಿಂತಲೂ ಕರ್ತವ್ಯವೇ ಪ್ರಮುಖವಾದದ್ದು, ಈ ನಿಟ್ಟಿನಲ್ಲಿ ತನಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ