ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಅದ್ರಲ್ಲಿ ಕೆಲ ವಿಡಿಯೋ ಪೊಲೀಸರ ಗಮನ ಸೆಳೆಯುತ್ತೆ. ಈಗ ಮಂಗಳವಾದ್ಯ ಕೇಳಬೇಕಾದ ಸ್ಥಳದಲ್ಲಿ ಗುಂಡಿನ ಸದ್ದು ಕೇಳಿದೆ ವಿಡಿಯೋ ವೈರಲ್ ಆಗಿದೆ.
ಈಗಿನ ದಿನಗಳಲ್ಲಿ ಮದುವೆ ಸಾಕಷ್ಟು ವಿಶೇಷತೆಯನ್ನು ಪಡೆಯುತ್ತಿದೆ. ಜೀವನದಲ್ಲಿ ಒಮ್ಮೆ ನಡೆಯುವ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ಯುವಕರು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ. ಮದುವೆ ಫಿಕ್ಸ್ ಆದ್ಮೇಲೆ ವಿವಿಧ ಫೋಟೋ ಶೂಟ್, ವಿಡಿಯೋಗಳನ್ನು ಮಾಡುವ ನವಜೋಡಿ, ಮದುವೆಯನ್ನು ತಮ್ಮಿಷ್ಟದ ಸ್ಥಳದಲ್ಲಿ ಮಾಡಿಕೊಳ್ತಾರೆ. ಅದಕ್ಕೆ ಸಾಕಷ್ಟು ತಯಾರಿ ನಡೆಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮುನ್ನ ಪಾರ್ಟಿ ಮಾಡುವವರಿದ್ದಾರೆ. ಮದುವೆ ದಿನ ಸದಾ ನೆನಪಿನಲ್ಲಿರುವಂತೆ ಮಾಡಲು ಜನರು ಹೊಸ ಹೊಸ ಸಾಹಸ ಮಾಡ್ತಾರೆ. ಹಿಂದೆ ಕುದುರೆ ಏರಿ ವಧುವಿನ ಮನೆಗೆ ಬರ್ತಿದ್ದ ವರನ ಸ್ಥಾನವನ್ನು ಈಗ ವಧು ಪಡೆದಿದ್ದಾಳೆ. ಅನೇಕ ಹುಡುಗಿಯರು ತಮ್ಮ ಕನಸಿನಂತೆ ಮದುವೆ ಮನೆಗೆ ಕುದುರೆ ಏರಿ ಬರ್ತಾರೆ. ಮತ್ತೆ ಕೆಲ ಹುಡುಗಿಯರು ತಮ್ಮ ಮದುವೆಯನ್ನು ಅತ್ಯಂತ ಭಿನ್ನವಾಗಿ ಆಚರಿಸಿಕೊಳ್ತಾರೆ. ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಬರುವ ಹುಡುಗಿಯರನ್ನು ಕೂಡ ನೀವು ನೋಡ್ಬಹುದು. ಅನೇಕ ಬಾರಿ ಜೋಶ್ ನಲ್ಲಿ ಮಾಡುವ ಕೆಲಸಗಳು ಯಡವಟ್ಟು ಮಾಡುತ್ತವೆ. ಮದುವೆ ಖುಷಿಯಲ್ಲಿ ಈ ದಂಪತಿ ಮಾಡಿದ ಕೆಲಸವೊಂದು ಈಗ ಸುದ್ದಿಯಲ್ಲಿದೆ.
ಮದುವೆ (Marriage) ಮನೆಯಲ್ಲಿ ಗುಂಡು ಹಾರಿಸಿದ ವಧು: ಮದುವೆ ಸಮಯದಲ್ಲಿ ಕುದುರೆ, ಆನೆ, ಬೈಕ್ ಸೇರಿದಂತೆ ಯಾವುದೇ ಪ್ರಾಣಿ (Animal)ಯನ್ನು ಒಪ್ಪಿಗೆ ಮೇಲೆ ಬಳಸಿದ್ರೆ ಹೆಚ್ಚು ಚರ್ಚೆಯಾಗೋದಿಲ್ಲ. ಆದ್ರೆ ಮದುವೆ ಸಮಾರಂಭದಲ್ಲಿ ಪಿಸ್ತೂಲ್ (Pistol) ಬಳಸಲು ಯಾವುದೇ ಅನುಮತಿ ಸಿಗೋದಿಲ್ಲ. ಸಿಕ್ಕರೂ ಅದನ್ನು ಅನಿವಾರ್ಯ ಕಾರಣಕ್ಕೆ ಮಾತ್ರ ಬಳಕೆ ಮಾಡ್ಬೇಕು. ಪಿಸ್ತೂಲನ್ನು ಅನುಮತಿ ಇಲ್ಲದೆ ಇಟ್ಟುಕೊಂಡ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ಇನ್ನು ಒಪ್ಪಿಗೆ ಇಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವುದು ದೊಡ್ಡ ಅಪರಾಧ. ಆದ್ರೆ ಈ ವಧು, ಮದುವೆಯಾದ ಖುಷಿ (Happiness) ಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಆಕೆಯ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
undefined
ರೋಗಕ್ಕೆಲ್ಲಿ ಬಡ-ಸಿರಿವಂತ ವ್ಯತ್ಯಾಸ? ಬ್ರಿಟನ್ ರಾಣಿಗೂ ವಕ್ಕರಿಸಿದೆ ಕ್ಯಾನ್ಸರ್
ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ವಧು ಮದುವೆ ಮನೆಯಲ್ಲಿ ಫೈರಿಂಗ್ ಮಾಡಿದ್ದಾಳೆ. ಪೊಲೀಸರು ವಧು-ವರರು ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ವಧು-ವರರು ಯಾರೆಂಬುದು ಪೊಲೀಸರಿಗೆ ಗೊತ್ತಾಗಿಲ್ಲ. ಅವರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ವಿಷಯ ಖತೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದು ದುದ್ದಲಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಎಂದು ಅಂದಾಜಿಸಲಾಗಿದೆಯಾದ್ರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
ವೈರಲ್ ಆದ ವಿಡಿಯೋ 23 ಸೆಕೆಂಡಿನದ್ದಾಗಿದೆ. ವಿಡಿಯೋ ಆರಂಭದಲ್ಲಿ ವಧು – ವರರಿಬ್ಬರು ನಿಂತಿದ್ದಾರೆ. ಅಲ್ಲಿಗೆ ಇನ್ನೊಬ್ಬ ವ್ಯಕ್ತಿ ಬರ್ತಾನೆ. ಆತ ವಧುವಿಗೆ ಪಿಸ್ತೂಲ್ ನೀಡ್ತಾನೆ. ವಧು ಪಿಸ್ತೂಲ್ ಎತ್ತಿ ಗುಂಡು ಹಾರಿಸುತ್ತಾಳೆ. ನಂತ್ರ ಮತ್ತೆ ಗುಂಡು ಹಾರಿಸುವಂತೆ ವ್ಯಕ್ತಿ ಹೇಳುತ್ತಾನೆ. ಹೀಗೆ ಆಕೆ ಮೂರು ಬಾರಿ ಗುಂಡು ಹಾರಿಸುತ್ತಾಳೆ.
ವಧು ಗುಂಡು ಹಾರಿಸುತ್ತಿದ್ದಾಗ, ಹಿಂದಿನಿಂದ ಅನೇಕ ಜನರು ಅವಳನ್ನು ಹೊಗಳುತ್ತಿರುವುದನ್ನು ನೋಡ್ಬಹುದು. ಅದ್ರಲ್ಲಿ ಒಬ್ಬರು ವಾವ್ ನನ್ನ ಕಿವಿ ಮರಗಟ್ಟಿತು ಅಂದ್ರ ಇನ್ನೊಬ್ಬರು ತುಂಬ ಒಳ್ಳೆಯದು ಎನ್ನುತ್ತಿದ್ದಾರೆ.
ಇಲ್ನೋಡಿ, ಅನಂತ್ ಅಂಬಾನಿಯ 200 ಕೋಟಿ ಮೌಲ್ಯದ ವಾಚ್‌ಗಳ ಸಂಗ್ರಹ!
ಸದ್ಯ ಪೊಲೀಸರು ವಧು-ವರರು ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಪರಿಚಿತ ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 290 ಮತ್ತು ಸೆಕ್ಷನ್ 336 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.