
ತಿರುವನಂತಪುರ (ಮಾ.23): ‘ಕೇರಳ ಮೂಲದ ಶಾಸ್ತ್ರೀಯ ನೃತ್ಯವಾಗಿರುವ ‘ಮೋಹಿನಿಯಾಟ್ಟಂ’ ಮಾಡುವವರು ಮೋಹಿನಿ ರೀತಿ ಇರಬೇಕು. ಆದರೆ ಆತನನ್ನು ನೋಡಿ... ಕಾಗೆಯ ಬಣ್ಣ ಹೊಂದಿದ್ದಾನೆ. ಅಂತಹ ವ್ಯಕ್ತಿ ಮೋಹಿನಿಯಾಟ್ಟಂ ಆಡುವುದು ನೋಡಿದರೆ, ಸಹಿಸಿಕೊಳ್ಳಲಾಗದು. ಅಸಹ್ಯ ಹುಟ್ಟುತ್ತದೆ’ ಎಂದು ಕೇರಳದ ಹಿರಿಯ ಮೋಹಿನಿಯಾಟ್ಟಂ ನೃತ್ಯಗಾರ್ತಿ ಕಲಾಮಂಡಲಂ ಸತ್ಯಭಾಮ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಕೇವಲ 5 ದಿನದಲ್ಲಿ ಸಾಲಗಾರ ಅನಿಲ್ ಅಂಬಾನಿ ಕಂಪನಿಯ ಷೇರುಗಳು ಶೇ.13ಕ್ಕಿಂತ ಹೆಚ್ಚು ಏರಿಕೆ!
ಸಂದರ್ಶನದಲ್ಲಿ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲವಾದರೂ, ನನ್ನನ್ನೇ ಉದ್ದೇಶಿಸಿ ಅವರು ಆ ಮಾತುಗಳನ್ನು ಆಡಿದ್ದಾರೆ ಎಂದು ಮೋಹಿನಿಯಾಟ್ಟಂ ನೃತ್ಯಗಾರ ಡಾ। ಆರ್‌ಎಲ್‌ವಿ ರಾಮಕೃಷ್ಣನ್ ಹೇಳಿಕೊಂಡಿದ್ದಾರೆ. ಸತ್ಯಭಾಮ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ. ರಾಮಕೃಷ್ಣನ್ ಅವರಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದ್ದು, ಸತ್ಯಭಾಮ ಅವರ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ಆದರೆ, ತಾವು ಸಂದರ್ಶನದಲ್ಲಿ ಯಾರ ಹೆಸರನ್ನೂ ಹೇಳಿಲ್ಲ. ಕ್ಷಮೆ ಕೇಳುವುದು ಇಲ್ಲ ಎಂದು ಸತ್ಯಭಾಮ ಹೇಳಿದ್ದಾರೆ.
ಕೇಜ್ರಿ ಬಂಧನ, ಆಪ್ ಪ್ರಚಾರಕ್ಕೆ ಹೊಡೆತ ಸಾಧ್ಯತೆ, ದಿಲ್ಲಿ ಗುಜರಾತಲ್ಲಿ ಹೆಚ್ಚು ಸ್ಥಾನ ಗೆಲ್ಲೋ ಕನಸಿಗೆ ತಣ್ಣೀರು
ಅಲ್ಲದೆ ತಮ್ಮ ಹೇಳಿಕೆಯನ್ನು ಸುದ್ದಿಗಾರರ ಮುಂದೆ ಸಮರ್ಥಿಸಿಕೊಂಡಿದ್ದಾರೆ. ಹೆಸರೇ ಹೇಳುವಂತೆ ಮೋಹಿನಿಯಾಟ್ಟಂ ನೃತ್ಯಗಾರರು ಮೋಹಿನಿಯಂತಿರಬೇಕು. ನಾವು ಏಕೆ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತೇವೆ? ಕಪ್ಪು ಬಣ್ಣದ ಮಕ್ಕಳು ಸೌಂದರ್ಯ ಸ್ಪರ್ಧೆ ಗೆದ್ದಿರುವುದನ್ನು ಎಂದಾದರೂ ನೋಡಿದ್ದೀರಾ? ನಮ್ಮ ಬಳಿಗೆ ಕಪ್ಪು ವರ್ಣೀಯ ಮಕ್ಕಳು ನೃತ್ಯ ಕಲಿಯಲು ಬಂದರೆ, ಅವರಿಗೆ ತರಬೇತಿ ನೀಡುತ್ತೇವೆ. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಬೇಡ ಎಂದು ಹೇಳುತ್ತೇವೆ ಎಂದು ಮತ್ತಷ್ಟು ಉದ್ಧಟತನ ಮೆರೆದಿದ್ದಾರೆ. ಈ ನಡುವೆ ಸತ್ಯಭಾಮ ಅವರ ಹೇಳಿಕೆ ಕುರಿತು ಕೇರಳ ಮಾನವ ಹಕ್ಕುಗಳ ಆಯೋಗ ವರದಿ ಕೇಳಿದೆ.
ರಾಮಕೃಷ್ಣನ್ ಕಿಡಿ: ಸತ್ಯಭಾಮ ಅವರು ನನ್ನನ್ನು, ದಲಿತರನ್ನು ಮಾತ್ರವೇ ಅಲ್ಲ. ಕಪ್ಪು ವರ್ಣೀಯರನ್ನೇ ಅಪಮಾನಿಸಿದ್ದಾರೆ. ಈ ಹಿಂದೆ ಕೂಡ ಅವರು ನನಗೆ ಅಪಮಾನ ಮಾಡಿದ್ದಾರೆ ಎಂದು ರಾಮಕೃಷ್ಣನ್ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ