ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿವಿಯ ಆವರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಬೀದಿನಾಯಿಗಳು ಭೀಕರವಾಗಿ ದಾಳಿ ಮಾಡಿದ್ದು, ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಲಿಘಡ: ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿವಿಯ ಆವರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಬೀದಿನಾಯಿಗಳು ಭೀಕರವಾಗಿ ದಾಳಿ ಮಾಡಿದ್ದು, ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಲಿಘಡ ವಿವಿ ಮುಂಭಾಗದಲ್ಲಿರುವ ಮೈದಾನದಲ್ಲಿ ನಿಂತಿದ್ದ ವೇಳೆ ಎಲ್ಲಿಂದಲೋ ಬಂದ ಐದಕ್ಕೂ ಹೆಚ್ಚು ಬೀದಿನಾಯಿಗಳು ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಅವರನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೈದಾನದಲ್ಲಿ ನಿಂತಿದ್ದ ವ್ಯಕ್ತಿಯನ್ನು ನಾಯಿಗಳು ಕಚ್ಚಿ ನೆಲಕ್ಕೆ ಎಳೆದು ಹಾಕಿ ದಾಳಿ ಮಾಡುತ್ತಿರುವ ಭೀಕರ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವ್ಯಕ್ತಿ ಆರಂಭದಲ್ಲಿ ನಾಯಿಗಳನ್ನು ಓಡಿಸಲು ನೋಡುತ್ತಾರೆ. ಆದರೆ ಐದಕ್ಕೂ ಹೆಚ್ಚು ನಾಯಿಗಳು (Stray dog) ಒಟ್ಟೊಟ್ಟಿಗೆ ಬಂದು ಇವರ ಮೇಲೆ ದಾಳಿ ಮಾಡಿದ್ದು, ಇವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದಾಗಿ ದಾರಿಯಲ್ಲೇ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅನೇಕರು ಈ ಭಯಾನಕ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
stray dogs attack: ಭಿಕ್ಷುಕಿಯನ್ನು ಎಳೆದಾಡಿ ಕೊಂದ ರಕ್ಕಸ ಬೀದಿನಾಯಿಗಳ ಹಿಂಡು!
ಆದರೆ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮುಂಜಾನೆ 6.30 ರ ಸುಮಾರಿಗೆ ಘಟನೆ ನಡೆದಿದ್ದು, ಬೆಳಗ್ಗೆ 7.30 ರ ಸುಮಾರಿಗೆ ಪಾರ್ಕ್ ಬಳಿ ಮೃತದೇಹ ಇರುವುದಾಗಿ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರನ್ನು 65 ವರ್ಷದ ಡಾ. ಸಫ್ದರ್ ಅಲಿ (Safdar ali)ಎಂದು ಗುರುತಿಸಲಾಗಿದೆ. ಅಲಿಘಡ ವಿವಿ ಆವರಣದ ಸಿವಿಲ್ ಲೈನ್‌ನಲ್ಲಿ ಈ ಘಟನೆ ನಡೆದಿದೆ.
ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್
CCTV footage of the painful death of a person due to dog attack emerged.
More than half a dozen attacked a person in the Aligarh Muslim University campus of Thana Civil Line area of Aligarh, which killed the person on the spot. pic.twitter.com/5XedupSu90