ಗೋಲ್‌ಗಪ್ಪಾ ರುಚಿ ಹೆಚ್ಚಿಸಲು ಹಾರ್ಪಿಕ್ ಮತ್ತು ಯೂರಿಯಾ ಬಳಸಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ದಾಳಿ ನಡೆಸಿ, ಹಿಟ್ಟನ್ನು ಕಾಲಿನಲ್ಲಿ ತುಳಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ನವದೆಹಲಿ: ಗೋಲ್‌ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರ ಬಳಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಜಾರ್ಖಂಡ್‌ನ ಗರ್ವ್ಹಾದಲ್ಲಿ ಕೆಲ ವ್ಯಕ್ತಿಗಳು ಇಂಥದ್ದೊಂದು ಕೃತ್ಯ ಎಸಗುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಇಬ್ಬರು ವ್ಯಕ್ತಿಗಳು ಗೋಲ್‌ಗಪ್ಪಾ ತಯಾರಿಸಲು ಬಳಸುವ ಹಿಟ್ಟನ್ನು ಕಾಲಿನಲ್ಲಿ ತುಳಿಯುತ್ತಾ ಇದ್ದಿದ್ದು ಕಂಡುಬಂದಿದೆ. ವಿಚಾರಣೆ ವೇಳೆ ಗೋಲ್‌ಗಪ್ಪಾ ರುಚಿ ಹೆಚ್ಚಿಸಲು ಅದಕ್ಕೆ ಯೂರಿಯಾ ಮತ್ತು ಹಾರ್ಪಿಕ್ ಬಳಸಿದ್ದನ್ನು ಒಪ್ಪಿಕೊಂಡಿದ್ದಾರೆ.
ಪಾನಿಪೂರಿಯಲ್ಲಿ 5 ರೀತಿಯ ರಾಸಾಯನಿಕ ವಸ್ತುಗಳಿವೆ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಹಿರಿಯರು ಮತ್ತು ಮಕ್ಕಳು ಜಂಕ್ ಅಥವಾ ಫಾಸ್ಟ್ ಫುಡ್ ಸೇವಿಸುವುದು ಅನಾರೋಗ್ಯಕ್ಕೆ ಮಾರ್ಗ ಹಾಕಿದಂತಾಗುತ್ತದೆ. ಕಡಿಮೆ ದರಕ್ಕೆ ಸಿಗುವ ಎಗ್‌ರೈಸ್, ಗೋಬಿ ಮಂಚೂರಿ, ಮಾಮ್, ಪಾನಿಪುರಿ, ಕೆಲವು ಬೇಕರಿ ಪದಾರ್ಥಗಳಂತಹ ಫಾಸ್ಟ್‌ಫುಡ್‌ಗೆ ಬಣ್ಣ, ರುಚಿ ಹಾಗೂ ಸುವಾಸನೆ ಬರಲು ಕಡಿಮೆ ದರದ ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುತ್ತದೆ, ಯಾವುದೇ ಕಾರಣಕ್ಕೂ ಇಂತಹ ಆಹಾರ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್! 4 ಭಾರತೀಯರಲ್ಲಿ ರೋಹಿತ್‌ಗಿಲ್ಲ ಸ್ಥಾನ