ಅಮೆರಿಕ ಅಧ್ಯಕ್ಷ ಚುನಾವಣೆಗೆ: ಭಾರತ ಮೂಲದ ರೋ ಖನ್ನಾ ಸ್ಪರ್ಧೆ?

By Kannadaprabha News  |  First Published Jan 14, 2023, 7:30 AM IST

ಮುಂದಿನ ವರ್ಷ ನಡೆಯಬೇಕಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಆಡಳಿತಾರೂಢ ಡೆಮೊಕ್ರಟ್‌ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ರೋ ಖನ್ನಾ ಅವರು ಕಣಕ್ಕಿಳಿಯುವ ಸಾಧ್ಯತೆ ಕುರಿತು ಅಮೆರಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.


ನ್ಯೂಯಾರ್ಕ್: ಮುಂದಿನ ವರ್ಷ ನಡೆಯಬೇಕಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಆಡಳಿತಾರೂಢ ಡೆಮೊಕ್ರಟ್‌ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ರೋ ಖನ್ನಾ ಅವರು ಕಣಕ್ಕಿಳಿಯುವ ಸಾಧ್ಯತೆ ಕುರಿತು ಅಮೆರಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. 2028ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ರೋ ಖನ್ನಾ ಹೊಂದಿದ್ದರು. ಆದರೆ ಹಾಲಿ ಅಧ್ಯಕ್ಷ ಜೋ ಬೈಡೆನ್‌ ವಯೋಸಹಜ ಕಾರಣಗಳಿಂದ 2024ರ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿದರೆ, ಖನ್ನಾ ಅವರು ಅಭ್ಯರ್ಥಿಯಾಗಬಹುದು ಎನ್ನಲಾಗುತ್ತಿದೆ. ಬೈಡೆನ್‌ ಅವರು ಸ್ಪರ್ಧೆ ಮಾಡದಿದ್ದರೆ ಖನ್ನಾ ಅವರು ಸಂಭವನೀಯ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರ ಸಲಹಾ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಯಾರು ಈ ಖನ್ನಾ?:

Tap to resize

Latest Videos

ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ (Indian freedom fighter) ಅಮರನಾಥ ವಿದ್ಯಾಲಂಕಾರ್‌ (Amarnath Vidyalankar)ಅವರ ಮೊಮ್ಮಗ ರೋ ಖನ್ನಾ. ವಿದ್ಯಾಲಂಕಾರ್‌ ಅವರ ಪುತ್ರಿ ಹಾಗೂ ಅಳಿಯ ಪಂಜಾಬ್‌ನಿಂದ (Punjab) ಅಮೆರಿಕಕ್ಕೆ ವಲಸೆ ಹೋಗಿದ್ದರು. 1976ರಲ್ಲಿ ಅವರ ಪುತ್ರನಾಗಿ ಜನಿಸಿದವರು ಖನ್ನಾ. ವಕೀಲರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಡೆಮೊಕ್ರಟಿಕ್‌ ಪಕ್ಷದ ಸದಸ್ಯರಾಗಿರುವ ಅವರು 2016ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 8 ಬಾರಿಯ ಗೆಲುವಿನ ಸರದಾರ ಮೈಕ್‌ ಹೋಂಡಾ ಅವರನ್ನು ಮಣಿಸಿ ಗಮನ ಸೆಳೆದ್ದಿರು.

ಪ್ರಧಾನಿ ಮೋದಿ ಭೇಟಿ ಮಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಲಂಡನ್‌ನಲ್ಲಿ ಕುಚಿಪುಡಿ ನೃತ್ಯಕ್ಕೆ ಹೆಜ್ಜೆ ಹಾಕಿದ ರಿಷಿ ಸುನಕ್ ಪುತ್ರಿ

click me!