ಶಿಕ್ಷಕರನ್ನು ಲಿಂಗಕ್ಕೆ ಅನುಗುಣವಾಗಿ 'ಸರ್' ಮತ್ತು 'ಮೇಡಂ' ಎಂದು ಸಂಬೋಧಿಸುವ ತಾರತಮ್ಯವನ್ನು ಕೊನೆಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯನ್ನು ಕೇರಳ ಮಕ್ಕಳ ಹಕ್ಕುಗಳ ಸಮಿತಿಯು ಪರಿಗಣಿಸಿದ ನಂತರ ಈ ನಿರ್ದೇಶನ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ತಿರುವನಂತಪುರ (ಜ.13): ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ-ತಟಸ್ಥ ಪದಗಳನ್ನು ಉತ್ತೇಜಿಸುವ ಕ್ರಮದಲ್ಲಿ, ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ರಾಜ್ಯದ ಶಾಲೆಗಳಲ್ಲಿ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ', 'ಮಿಸ್' ನಂತಹ ಗೌರವಾರ್ಥಗಳ ಬದಲಿಗೆ 'ಶಿಕ್ಷಕ' ಎಂದು ಸಂಬೋಧಿಸುವಂತೆ ನಿರ್ದೇಶಿಸಿದೆ. '. ಮಕ್ಕಳ ಹಕ್ಕುಗಳ ಸಮಿತಿಯು ಶಿಕ್ಷಕರನ್ನು ಅವರ ಲಿಂಗಕ್ಕೆ ಅನುಗುಣವಾಗಿ 'ಸರ್' ಮತ್ತು 'ಮೇಡಂ' ಎಂದು ಸಂಬೋಧಿಸುವಾಗ ತಾರತಮ್ಯವನ್ನು ಕೊನೆಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ನಂತರ ಈ ನಿರ್ದೇಶನ ಬಂದಿದೆ.'ಶಿಕ್ಷಕ' ಎಂಬುದು 'ಸರ್' ಅಥವಾ 'ಮೇಡಂ' ನಂತಹ ಗೌರವಾರ್ಥ ಪದಗಳಿಗಿಂತ ಹೆಚ್ಚು ಲಿಂಗ-ತಟಸ್ಥ ಪದವಾಗಿದೆ ಎಂದು ಕೇರಳ ಮಕ್ಕಳ ಹಕ್ಕುಗಳ ಸಮಿತಿ ನಿರ್ದೇಶಿಸಿದೆ.
ಸಮಿತಿಯ ಅಧ್ಯಕ್ಷ ಕೆ ವಿ ಮನೋಜ್ ಕುಮಾರ್ ಮತ್ತು ಸದಸ್ಯ ಸಿ ವಿಜಯಕುಮಾರ್ ಅವರನ್ನೊಳಗೊಂಡ ಪೀಠ, ರಾಜ್ಯದ ಎಲ್ಲಾ ಶಾಲೆಗಳಲ್ಲಿ 'ಶಿಕ್ಷಕ' ಪದವನ್ನು ಬಳಸಲು ಸೂಚನೆಗಳನ್ನು ನೀಡುವಂತೆ ಸಾಮಾನ್ಯ ಶಿಕ್ಷಣ ಇಲಾಖೆಗೆ ಬುಧವಾರ ಸೂಚಿಸಿದೆ. ಸರ್ ಅಥವಾ ಮೇಡಂ ಎಂದು ಕರೆಯುವ ಬದಲು ಟೀಚರ್ ಎಂದು ಕರೆದರೆ ಎಲ್ಲ ಶಾಲೆಗಳ ಮಕ್ಕಳಲ್ಲಿ ಸಮಾನತೆ ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ಶಿಕ್ಷಕರೊಂದಿಗೆ ಅವರ ಬಾಂಧವ್ಯ ಹೆಚ್ಚುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
2021 ರಲ್ಲಿ, ಕೇರಳದ ಸ್ಥಳೀಯ ಗ್ರಾಮ ಪಂಚಾಯತ್ ತನ್ನ ಕಚೇರಿ ಆವರಣದಲ್ಲಿ ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಸಾಧಿಸುವ ದೃಷ್ಟಿಯಿಂದ 'ಸರ್' ಅಥವಾ 'ಮೇಡಂ' ನಂತಹ ಸಾಮಾನ್ಯ ನಮಸ್ಕಾರಗಳನ್ನು ನಿಷೇಧಿಸಲು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತು.
ಕಾಸರಗೋಡು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ, 500 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಆದೇಶ!
ಉತ್ತರ ಕೇರಳ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು ಈ ರೀತಿಯ ನಮಸ್ಕಾರಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊದಲ ನಾಗರಿಕ ಸಂಸ್ಥೆಯಾಗಿದೆ, ಇತರ ನಾಗರಿಕ ಸಂಸ್ಥೆಗಳಿಗೆ ಉದಾಹರಣೆ ಎನಿಸುವಂಥ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು.
ಏಲಕ್ಕಿಯಲ್ಲಿ ಕೀಟನಾಶಕ, ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ತಡೆ
ರಾಜಕೀಯವಾಗಿ ನಾವು ಭಿನ್ನವಾಗಿದ್ದೂ, ಪಂಚಾಯತ್‌ನಲ್ಲಿ ಎಲ್ಲರೂ ಸ್ನೇಹಪರ ವಾತಾವರಣ ಸೃಷ್ಟಿಸಬೇಕು ಎನ್ನುವ ನಿಟ್ಟಿನಲ್ಲಿ ಬದ್ಧರಾಗಿದ್ದಾರೆ. ಇಲ್ಲಿ ಕಚೇರಿಗಳಲ್ಲೂ ಇದೇ ರೀತಿಯ ಸೌಹಾರ್ದ ವಾತಾವರಣ ಇರಬೇಕು ಎಂದು ಬಯಸಿದ್ದೇವೆ. ಸರ್ ಅಥವಾ ಮೇಡಂ ರೀತಿಯಂಥ ನಮಸ್ಕಾರಗಳು ನಮ್ಮ ಮತ್ತು ಅವರ ಸಮಸ್ಯೆಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಜನರ ನಡುವೆ ಅಂತರವನ್ನು ಸೃಷ್ಟಿಸುತ್ತವೆ ಎಂಬ ಭಾವನೆ ನಮ್ಮೆಲ್ಲರಿಗೂ ಇತ್ತು ಎಂದು ಮಾಥುರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್ ಹೇಳಿದ್ದಾರೆ.