ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ

By Kannadaprabha News  |  First Published Aug 11, 2024, 5:31 AM IST

ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌  ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ.


ನವದೆಹಲಿ (ಆ.11): ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌  ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ.

'ನಾನು ನಂದಿನಿ, ಸಿಎ ಮಾಡೀನಿ..' 19 ವರ್ಷಕ್ಕೇ 1ನೇ ರ್ಯಾಂಕ್ ಜೊತೆ ಸಿಎ ಪಾಸ್ ಮಾಡಿ ದಾಖಲೆ ಗಳಿಸಿದ ಪೋರಿ

Tap to resize

Latest Videos

ಒಂದೇ ದಿನದಲ್ಲಿ ಡೇವಿಡ್‌ ಮಾಡಿರುವ ದಾಖಲೆಗಳು ಇಂತಿವೆ:

  • ಮೂರು ಸೇಬುಗಳನ್ನು 1 ನಿಮಿಷದಲ್ಲಿ 198 ಬಾರಿ ಕಚ್ಚಿರುವುದು.
  • ಪರ್ಯಾಯ ಕೈಗಳನ್ನು ಬಳಸಿ ಟೇಬಲ್ ಟೆನ್ನಿಸ್‌ ಬಾಲ್‌ಗಳನ್ನು 2 ಬಾಟಲಿಗಳ ಮೇಲೆ 10 ಬಾರಿ 2.09 ಸೆಕೆಂಡ್‌ನಲ್ಲಿ ನಿಲ್ಲಿಸಿರುವುದು.
  • ಹಿಂಭಾಗದಿಂದ ಬಾಸ್ಕೆಟ್‌ ಬಾಲ್‌ನ್ನು 30 ಸೆಕೆಂಡ್‌ನಲ್ಲಿ ಗೋಡೆಗೆ 38 ಸಲ ಬಡಿದಿರುವುದು* 30 ಸೆಕಂಡ್‌ಗಳಲ್ಲಿ ಕೈಗಳನ್ನು ಬಳಸಿ 5.100 ಮಿ.ಲೀ ನೀರನ್ನು ತಳ್ಳಿರುವುದು.
  • 5.38 ಸೆಕೆಂಡ್‌ನಲ್ಲಿ 10 ಟಾಯ್ಲೆಟ್ ಕಾಗದ ರೋಲ್‌ಗಳನ್ನು ಪೇರಿಸಿರುವುದು.
  • ಬೌಲಿಂಗ್ ಚೆಂಡು ಮತ್ತು ಎರಡು ಚೆಂಡುಗಳನ್ನು ಜಗ್ಲಿಂಗ್ ಹಿಡಿತದಲ್ಲಿ ಒಂದು ನಿಮಿಷಕ್ಕೆ 248 ಬಾರಿ ಬ್ಯಾಲೆನ್ಸ್ ಮಾಡಿರೋದು.
  • ಸ್ಟ್ರಾ ಮೂಲಕ 1 ಲೀ ನಿಂಬೆಹಣ್ಣು ಪಾನಕವನ್ನು 13.99 ಸೆಕೆಂಡ್‌ಗಳಲ್ಲಿ ಕುಡಿದಿರುವುದು.
  • 30 ಸೆಕೆಂಡ್‌ಗಳಲ್ಲಿ 20 ಟೀ ಶರ್ಟ್‌ಗಳನ್ನು ಧರಿಸಿರುವುದು.
  • 30 ಸೆಕೆಂಡ್‌ಗೆ 125 ಸಲ ಬೇಸ್‌ ಬಾಲ್‌ಗಳನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸಿ ಬ್ಯಾಲೆನ್ಸ್‌ ಮಾಡಿರೋದು.
  • ಕಾಗದದಿಂದ ಮಡಚಿದ ವಿಮಾನವನ್ನು 5.12 ಸೆಕೆಂಡ್‌ಗಳಲ್ಲಿ ತಯಾರಿಸಿರುವುದು.
  • 1 ನಿಮಿಷಕ್ಕೆ 29 ಸಲ ಚಾಪ್‌ಸ್ಟಿಕ್‌ಗಳನ್ನು ಅದರ ಗುರಿಯತ್ತ ಎಸೆದಿರುವುದು,
  • ಟೇಬಲ್‌ ಟೆನ್ನಿಸ್‌ ಚೆಂಡುಗಳನ್ನು ಬೌನ್ಸ್‌ ಮಾಡಿ, ಶೇವಿಂಗ್‌ ಫೋಮ್‌ ಹಾಕಿದ ತಲೆ ಮೇಲೆ ಮೇಲೆ ನಿಲ್ಲಿಸಿರುವುದು.
  • ಬಾಯಿಯಿಂದ ಟೇಬಲ್ ಟೆನ್ನಿಸ್‌ ಚೆಂಡನ್ನು ಗೋಡೆಗೆ ಪುಟಿಯುವಂತೆ ಮಾಡಿರುವುದು.
click me!