ಕಣ್ಮುಂದೆಯೇ ಮಗನ ಮೇಲೆ ಕಟ್ಟಡ ಬಿತ್ತು, ಆತನಿಗಾಗಿ 8 ಗಂಟೆ ಹುಡುಕಾಡಿದೆ, ಕೆಸರಿನಲ್ಲಿ ಸಿಲುಕಿದ್ದು ಅವನೇ ಅಂತ ಗೊತ್ತಾಗಲಿಲ್ಲ

By Mahmad Rafik  |  First Published Aug 10, 2024, 5:16 PM IST

ವಯನಾಡು ಭೂಕುಸಿತದಿಂದ ಕೆಸರಿನ ಗುಂಡಿಯಲ್ಲಿ  ಸಿಲುಕಿದ್ದ ಅರುಣ್ ಹಲವು ಗಂಟೆಗಳ ಕಾಲ ಸಾವಿನ ಮನೆಯ ಮುಂದೆ ನಿಂತಿದ್ದನು. ಅರುಣ್ ಅವರನ್ನು ರಕ್ಷಣೆ ಮಾಡಲಾಗಿದ್ದು, ಏಷ್ಯಾನೆಟ್ ನ್ಯೂಸ್ ಜೊತೆ ಅರುಣ್ ತಾಯಿ ಭಾರ್ಗವಿ ಮಾತನಾಡಿದ್ದಾರೆ.


ವಯನಾಡು: ಮಳೆ ನಿಂತರೂ ಮಳೆಹನಿ ನಿಲ್ಲಲ್ಲ ಎಂಬಂತಾಗಿದೆ ಭೂಕುಸಿತ ಉಂಟಾದ ವಯನಾಡು ಭಾಗದ ಜನರ ಕಥೆ. ಭೂಕುಸಿತ ಉಂಟಾದ ಪ್ರದೇಶದಲ್ಲಿ ಬದುಕುಳಿದ ಜನರು ಮುಂದಿನ ಜೀವನ ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮನೆ, ಆಸ್ತಿ ಸೇರಿದಂತೆ ಎಲ್ಲವನ್ನು ಕಳೆದುಕೊಂಡು ಆಶ್ರಯ ಕೇಂದ್ರದಲ್ಲಿರುವ ಪ್ರತಿಯೊಬ್ಬರದ್ದು ಒಂದೊಂದು ಕತೆಯಾಗಿದೆ. ಕೆಲವರು ಇನ್ನೂ ತಮ್ಮ ಕುಟುಂಬಸ್ಥರಿಗಾಗಿ ಹುಡುಕಾಟ ಮುಂದುವರಿಸಿದ್ರೆ, ಗಾಯಾಳುಗಳು ನಮ್ಮವರು ಎಲ್ಲಿಂದ ಕೇಳುತ್ತಿದ್ದಾರೆ. ಸದ್ಯ ಸರ್ಕಾರದಿಂದ ಸಂತ್ರಸ್ತರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ದಾನಿಗಳು ಸಹ ಸಂತ್ರಸ್ತರ ಕಷ್ಟಕ್ಕೆ ಮಿಡಿಯುತ್ತಿದ್ದು, ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಸಹಾಯದ ಹಸ್ತ ಚಾಚುತ್ತಿದ್ದಾರೆ. ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ ಮುಂಡಕೈ ಭಾಗದ ಮಹಿಳೆ ಭಾರ್ಗವಿ ಅಂದಿನ ಘಟನೆಯನ್ನು ಹಂಚಿಕೊಂಡಿದ್ದಾರೆ. 

ಕಣ್ಮುಂದೆಯೇ ಮಗ ಅರುಣ್ ಮೇಲೆ ಕಟ್ಟಡ ಮೇಲೆ ಬಿತ್ತು. ಮಗನಿಗಾಗಿ ನಾವೆಲ್ಲರೂ ಸುಮಾರು ಎಂಟು ಗಂಟೆಗಳ ಕಾಲ ಹುಡುಕಾಟ ನಡೆಸಲಾಯ್ತು. ನದಿಯಲ್ಲಿ ಕೊಚ್ಚಿ ಹೋಗಿ ಕೆಸರಿನಲ್ಲಿ ಮುಳುಗಿದ್ದವ ನಮ್ಮ ಅರುಣ್ ಎಂದು ನಮಗೆ ಗೊತ್ತೇ ಆಗಲಿಲ್ಲ. ಇಷ್ಟು ದೊಡ್ಡ ದುರಂತದಲ್ಲಿಯೂ ಮಗ ಬದುಕುಳಿದಿರೋದರಿಂದ ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ಭಾರ್ಗವಿ ಹೇಳಿದ್ದಾರೆ. ದುರಂತಲ್ಲಿ ಭಾರ್ಗವಿ ಅವರ ಕಾಲಿಗೂ ಗಾಯವಾಗಿದೆ. 

Tap to resize

Latest Videos

ನಮ್ಮವರು ಇರಬಹುದು ಮೆಲ್ಲನೆ ಅಗೆಯಿರಿ: ಯುವಕನ ಮನಮಿಡಿಯುವ ಮನವಿಗೆ ಹಿಟಾಚಿ ಚಾಲಕ ಭಾವುಕ

ಕಟ್ಟಡ ಉರುಳಿದ್ದರಿಂದ ಅರುಣ್ ಸಂಪೂರ್ಣ ದೇಹ ಕೆಸರುಮಯವಾಗಿತ್ತು. ಆತನ ಕತ್ತು ಮಾತ್ರ ಕಾಣಿಸುತ್ತಿತ್ತು. ಹಲವು ಗಂಟೆಗಳ ಕಾಲ ಅರುಣ್ ಸಾವಿನ ಮನೆಯ ಮುಂದೆ ನಿಂತಿದ್ದನು. ತುಂಬಾ ಸಮಯದ ಬಳಿಕ ರಕ್ಷಣಾ ಸಿಬ್ಬಂದಿ ತೀವ್ರ ಪ್ರಯತ್ನದಿಂದ  ಅರುಣ್ ಬದುಕುಳಿದನು. ರಕ್ಷಣಾ ಸಿಬ್ಬಂದಿ ನನ್ನ ಮಗನನ್ನು ಜೀವಂತವಾಗಿ ನನಗೆ ಒಪ್ಪಿಸಿದ್ದಾರೆ. ಸದ್ಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ರಕ್ಷಣಾ ಸಿಬ್ಬಂದಿಗೆ ಭಾರ್ಗವಿ ಧನ್ಯವಾದ ಸಲ್ಲಿಸಿದರು. 

ರಕ್ಷಣಾ ಸಿಬ್ಬಂದಿ ತೀವ್ರ ಪ್ರಯತ್ನದಿಂದ ರಕ್ಷಿಸಲ್ಪಟ್ಟ ಅರುಣ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡೂ ಕಾಲು ಮತ್ತು ಇಡೀ ದೇಹದ ತುಂಬೆಲ್ಲಾ ಗಾಯಗಳಾಗಿದ್ದರಿಂದ ಅರುಣ್ ಕೆಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಡೀ ದೇಹ ಕೆಸರಿನಿಂದ ಆವರಿಸಿದಾಗ ಅರುಣ್‌ಗೆ ಉಸಿರಾಡಲು ಮಾತ್ರ ಸಾಧ್ಯವಾಗಿತ್ತು. ಅರುಣ್ ಅವರ ದೃಢಸಂಕಲ್ಪ ಮತ್ತು ಛಲದಿಂದ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಕೆಸರಿನ ಗುಂಡಿಯಲ್ಲಿ ಸಿಲುಕಿದ್ದ ಅರುಣ್ ತಲೆ ಮಾತ್ರ ಕಾಣುತ್ತಿತ್ತು. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅರುಣ್ ರಕ್ಷಣಾ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ದುರಂತದಲ್ಲಿ ಮಡಿದ ಮಕ್ಕಳೆಷ್ಟು? ವಯನಾಡು ಸಂತ್ರಸ್ಥರ ಭೇಟಿಯಾಗಿ ಭಾವುಕರಾದ ಮೋದಿ!

click me!