ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕ ಹಾಗೂ ಸಿಯಾಟಲ್‌ನಲ್ಲಿ (Seattle) ಭಾರತ ತಮ್ಮ ದೂತವಾಸ ಕಚೇರಿಗಳನ್ನು ತೆರೆಯಲಿವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಷಿಂಗ್ಟನ್: ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕ ಹಾಗೂ ಸಿಯಾಟಲ್‌ನಲ್ಲಿ (Seattle) ಭಾರತ ತಮ್ಮ ದೂತವಾಸ ಕಚೇರಿಗಳನ್ನು ತೆರೆಯಲಿವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಿಂದಾಗಿ ಕರ್ನಾಟಕದ ಜನತೆಗೆ ಇನ್ನು ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಪಡೆಯಲು ಅನುಕೂಲವಾಗಲಿದೆ. ಈವರೆಗೆ ಕನ್ನಡಿಗರು ಅಮೆರಿಕದ ವೀಸಾಗೆ ಚೆನ್ನೈಗೆ ಹೋಗಬೇಕಿತ್ತು.
ಕಳೆದ ವರ್ಷ 1.25 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ (Visa) ನೀಡಿದೆ. ಪ್ರಸ್ತುತ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈಗ ಈ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ (Ahmedabad) ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಅಮೆರಿಕ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಸಿಯಾಟಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ತೆರೆಯಲಿದೆ. ಸದ್ಯ ದಿಲ್ಲಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಇದ್ದು, ಮುಂಬೈ, ಕೋಲ್ಕತಾ, ಚೆನ್ನೈ ಹಾಗೂ ಹೈದರಾಬಾದ್ನಲ್ಲಿ ದೂತಾವಾಸಗಳಿವೆ.
ಎಚ್1ಬಿ ವೀಸಾ ನಿಯಮ ಬದಲು: ಭಾರತೀಯ ಟೆಕ್ಕಿಗಳಿಗೆ ಅನುಕೂಲ
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಅಮೆರಿಕ ಸರ್ಕಾರ (America Govt) ಎಚ್1ಬಿ ವೀಸಾ ನೀತಿಯಲ್ಲಿ (H1B visa) ಬದಲಾವಣೆ ಮಾಡಿದ್ದು, ಇದರಿಂದ ಇದೇ ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ನೌಕರಿ ಮಾಡುತ್ತಿರುವ ಟೆಕ್ಕಿಗಳು ಹಾಗೂ ಇತರ ನೌಕರರಿಗೆ ಭಾರಿ ಅನುಕೂಲವಾಗಲಿದೆ. ಎಚ್1ಬಿ ವೀಸಾ 3 ವರ್ಷದ ಅವಧಿಯದ್ದಾಗಿದ್ದು, ವೀಸಾ ಅವಧಿ ಮುಗಿಯುವ ವೇಳೆ ಅದರ ನವೀಕರಣಕ್ಕಾಗಿ ವೀಸಾದಾರರು ಸ್ವದೇಶಕ್ಕೇ ಹೋಗಬೇಕಿತ್ತು. ಅಂದರೆ ಭಾರತದ ಟೆಕ್ಕಿಗಳು ಭಾರತಕ್ಕೇ ಹೋಗಿ ಅದರ ನವೀಕರಣ ಮಾಡಿಕೊಳ್ಳಬೇಕಿತ್ತು. ಈ ನಿಯಮವನ್ನು ಬದಲಿಸಿರುವ ಬೈಡೆನ್ ಸರ್ಕಾರ, ಈಗ ಅಮೆರಿಕದಲ್ಲೇ ವೀಸಾ ನವೀಕರಣ ಮಾಡಿಕೊಳ್ಳಲು ಅನುಮತಿ ನೀಡಿದೆ. 2022ರಲ್ಲಿ 4.42 ಲಕ್ಷ ಎಚ್1ಬಿ ವೀಸಾದಾರರು ಅಮೆರಿಕದಲ್ಲಿದ್ದು, ಇವರಲ್ಲಿ ಭಾರತೀಯರ ಪಾಲು ಶೇ.73 ಆಗಿದೆ. ಕಳೆದ ವರ್ಷ 1.25 ಲಕ್ಷ ಭಾರತೀಯರಿಗೆ ಎಚ್1ಬಿ ವೀಸಾ ನೀಡಲಾಗಿತ್ತು.
ಭಾರತದಲ್ಲೇ ಎಂಜಿನ್ ಉತ್ಪಾದನೆ ಒಪ್ಪಂದ
ವಾಷಿಂಗ್ಟನ್: ಸ್ವದೇಶಿ ತೇಜಸ್ ಯುದ್ಧ ವಿಮಾನಗಳಿಗೆ ಭಾರತದಲ್ಲೇ ಎಂಜಿನ್ ಉತ್ಪಾದನೆ ಮಾಡುವ ಐತಿಹಾಸಿಕ ತಿಳುವಳಿಕೆ ಪತ್ರಕ್ಕೆ ಭಾರತ ಮತ್ತು ಅಮೆರಿಕ ಸಹಿಹಾಕಿವೆ.
ಇದರನ್ವಯ ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ಜೊತೆಗೂಡಿ ಎಂಜಿನ್ ಉತ್ಪಾದಿಸಲು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ಸ್ ಏರೋಸ್ಪೇಸ್ ಸಮ್ಮತಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದರ ಫಲವಾಗಿ ಈ ಒಪ್ಪಂದ ಏರ್ಪಟ್ಟಿದೆ. ಈ ತಿಳುವಳಿಕೆ ಪತ್ರದ ಅನ್ವಯ ಭಾರತದ 99 ಎಲ್‌ಸಿಎ ಮ್ಯಾಕ್ 2 ಯುದ್ಧ ವಿಮಾನಗಳಿಗೆ ಭಾರತದಲ್ಲೇ ಎಫ್ 414 ಎಂಜಿನ್‌ಗಳನ್ನು ಉತ್ಪಾದಿಸಲಾಗುವುದು. ಹಾಲಿ ತೇಜಸ್ ವಿಮಾನಗಳಿಗೆ ಎಫ್ 404 ಎಂಜಿನ್ ಬಳಸಲಾಗುತ್ತಿದ್ದು, ಎಫ್ 414 ಇನ್ನಷ್ಟು ಆಧುನಿಕ ಎಂಜಿನ್ ಆಗಿದೆ.