
ಅಮೆರಿಕ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿದ್ದು, ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ವಾಯುದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಈ ದಾಳಿಯನ್ನು ದೃಢಪಡಿಸಿದ್ದಾರೆ. ಶನಿವಾರ ನಡೆದ ಈ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ:
ಇರಾನ್ ಈ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ವಿರುದ್ಧ ಪ್ರತೀಕಾರದ ಎಚ್ಚರಿಕೆ ನೀಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಮೆರಿಕ ಅಧ್ಯಕ್ಷರಿಗೆ ನೇರ ಸಂದೇಶವನ್ನು ಕಳುಹಿಸಿದ್ದಾರೆ. ಇರಾನ್‌ನ ರಾಜ್ಯ ದೂರದರ್ಶನ ವರದಿಯ ಪ್ರಕಾರ, ಅಮೆರಿಕದ ದಾಳಿಯ ನಂತರ ಪ್ರತಿಯೊಬ್ಬ ಅಮೇರಿಕನ್ ನಾಗರಿಕ ಮತ್ತು ಸೈನಿಕ ಇರಾನ್‌ನ ಗುರಿಯಾಗಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಇರಾನ್ ಸುದ್ದಿ ನಿರೂಪಕ ಅಮೆರಿಕಕ್ಕೆ ನೇರ ಎಚ್ಚರಿಕೆ:
ಇರಾನ್‌ನ ಸುದ್ದಿ ನಿರೂಪಕರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಆರಂಭಿಸಿರುವ ಸಂಘರ್ಷವನ್ನು ಇರಾನ್ ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಇರಾನ್ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಅಪರಾಧ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅವರಿಗೆ ಸ್ಥಾನವಿಲ್ಲ. ನೀವು, ಅಮೆರಿಕ ಅಧ್ಯಕ್ಷರು ಪ್ರಾರಂಭಿಸಿದ ಸಂಘರ್ಷವನ್ನು ನಾವು ಮುಗಿಸುತ್ತೇವೆ ಎಂದು ಇರಾನ್ ಎಂದು ಎಚ್ಚರಿಸಿದ್ದಾರೆ.
ಮಿಸ್ಟರ್ ಟ್ರಂಪ್ ಯುದ್ಧ ಇದೀಗ ಪ್ರಾರಂಭವಾಗಿದೆ!
ಮಿಸ್ಟರ್ ಟ್ರಂಪ್ ಯುದ್ಧ ಮುಗಿದಿಲ್ಲ ಇದೀಗ ಪ್ರಾರಂಭವಾಗಿದೆ ಎಂದು ಎಚ್ಚರಿಕೆ ನೀಡಿರುವ ನಿರೂಪಕ, ನೀವು ಶಾಂತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಈ ದಾಳಿಯ ಪರಿಣಾಮಗಳು ಏನಾಗಬಹುದು ಎಂಬುದನ್ನು ನಾವು ನಿಮಗೆ ಅರ್ಥ ಮಾಡಿಸಲಿದ್ದೇನೆ. ಆ ರೀತಿ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಸಹ ಹೇಳಿದ್ದಾರೆ.
ಇರಾನ್ ಒಂದರ ನಂತರ ಒಂದರಂತೆ ಎಚ್ಚರಿಕೆಗಳನ್ನು ನೀಡುತ್ತಿದ್ದರೆ, ಅಧ್ಯಕ್ಷ ಟ್ರಂಪ್ ಪ್ರತಿಕ್ರಿಯೆಯಾಗಿ, ಇರಾನ್ ಶಾಂತಿಯ ಹಾದಿಗೆ ಬರದಿದ್ದರೆ, ಅದು ಇನ್ನಷ್ಟು ತೀವ್ರ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಘಟನೆಯಿಂದ ಜಾಗತಿಕ ರಾಜಕೀಯ ವಾತಾವರಣದಲ್ಲಿ ಗಂಭೀರ ಬಿಕ್ಕಟ್ಟು ಉಂಟಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಇರಾನ್‌ನ ಪ್ರತಿಕ್ರಿಯೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಧೋರಣೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ