ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ

Published : Jun 22, 2025, 03:44 PM ISTUpdated : Jun 22, 2025, 03:52 PM IST
PM Modi speaks to President Masoud Pezeshkian

ಸಾರಾಂಶ

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಡುವ ಮೂಲಕ ಸ್ವರೂಪ ತೀವ್ರಗೊಂಡಿದೆ. ಉದ್ವಿಘ್ನ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

ನವದೆಹಲಿ(ಜೂ.22) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಆತಂಕ ಹೆಚ್ಚಿಸಿದೆ. ಇವರಿಬ್ಬರ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಟ್ಟು ಇರಾನ್‌ನ ನ್ಯೂಕ್ಲಿಯರ್ ಘಟಕದ ಮೇಲೆ ಬಾಂಬ್ ದಾಳಿ ಮಾಡಿದೆ. ಇತ್ತ ಈ ದಾಳಿಗೆ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಜನವಸತಿಗಳ ಮೇಲೆ ಮಿಸೈಲ್ ದಾಳಿ ಮಾಡಿದೆ. ಅಪಾರ ನಷ್ಟ ಸಂಭವಿಸಿದೆ. ಅಮೆರಿಕ ಎಚ್ಚರಿಕೆ ನೀಡಿದರೂ ಇರಾನ್ ಮಾತುಕತೆ ಸಾಧ್ಯವಿಲ್ಲ ಎಂದಿದೆ. ಇಸ್ರೇಲ್ ಮುಗಿಸಲು ಇರಾನ್ ನಿರ್ಧರಿಸಿ ದಾಳಿ ಮಾಡುತ್ತಿದೆ. ಯುದ್ಧ ತೀವ್ರಗೊಳ್ಳುತ್ತಿದೆ. ಈ ಉದ್ವಿಘ್ನ ಪರಿಸ್ಥಿತಿ ನಡುವೆ ಮಹತ್ವದ ಬೆಳವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಇರಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಯುದ್ಧ ನಿಲ್ಲಿಸಿ ಶಾಂತಿ ಕಾಪಾಡುವ ಕುರಿತು ಮೋದಿ ಮಾತನಾಡಿದ್ದಾರೆ.

ಯುದ್ಧದ ಪರಿಸ್ಥಿತಿ ಭೀಕರವಾಗುತ್ತಿದೆ. ಇರಾನ್ ಹಾಗೂ ಇಸ್ರೇಲ್ ದಾಳಿ ಪ್ರತಿ ದಾಳಿಗಳೂ ಹೆಚ್ಚಾಗುತ್ತಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಇರಾನ್ ಅಧ್ಯಕ್ಷ್ಯ ಮಸೌದ್ ಪೆಜೆಶ್ಕಿಯಾನ್ ಜೊತೆ ಮಾತನಾಡಿದ್ದಾರೆ. ತಕ್ಷಣವೇ ಯುದ್ಧ ನಿಲ್ಲಿಸಿ, ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯ ಬಗೆಹರಿಸಿಕೊಳ್ಳಲು ಮೋದಿ ಆಗ್ರಹಿಸಿದ್ದಾರೆ. ಯುದ್ಧದ ಬದಲು ಶಾಂತಿ ಮರುಸ್ಥಾಪನೆ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಕುರಿತು ಮೋದಿ ಟ್ವೀಟ್ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ.

 

 

ಶಾಂತಿ ಮರಸ್ಥಾಪಿಸಲು ಭಾರತ ಆಗ್ರಹ

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಜೊತೆ ಮಹತ್ವದ ಮಾತುಕತೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ. ಇದೇ ವೇಳೆ ಪರಿಸ್ಥಿತಿ ಗಂಭೀರತೆ ಪಡೆದುಕೊಳ್ಳುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಈ ತಕ್ಷಣವೇ ಯುದ್ಧದ ಮಾರ್ಗ ಬಿಟ್ಟು ಶಾಂತಿಯ ಮಾತುಕತೆ ನಡೆಸಲು ಭಾರತ ಆಗ್ರಹಿಸಿದೆ. ಮಾತುಕತೆ ಮೂಲಕ, ರಾಜತಾಂತ್ರಿಕತೆ ಮೂಲಕ ಶಾಂತಿ ಕಾಪಾಡಿಕೊಳ್ಳಲು ಭಾರತ ಒತ್ತಾಯಿಸಿದೆ. ನಾಗರೀಕರ ಸುರಕ್ಷತ, ಶಾಂತಿಯನ್ನು ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತದ ಈ ದೂರವಾಣಿ ಮಾತುಕತೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗೆ ಇರಾನ್ ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಮುಂದಾಳತ್ವ ವಹಿಸಬೇಕು ಎಂದಿತ್ತು. ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರುವ ಇರಾನ್, ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಮಾತಿನಂತೆ ಹೆಚ್ಚಾಗುತ್ತಿರುವು ಯುದ್ಧ ಆತಂಕವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಅಮೆರಿಕ ಎಂಟ್ರಿಯಿಂದ ತೀವ್ರಗೊಂಡ ಯುದ್ಧ

ಇರಾನ್ ಹಾಗೂ ಇಸ್ರೇಲ್ ಕಳೆದ ಕೆಲ ದಿನಗಳಿಂದ ಮಿಸೈಲ್ ದಾಳಿ, ಬಾಂಬ್ ದಾಳಿ, ಏರ್‌ಸ್ಟ್ರೈಕ್ ಸೇರಿದಂತೆ ಹಲವು ದಾಳಿ ನಡೆಸುತ್ತಿತ್ತು. ಕಳೆದ ಕೆಲ ದಿನಗಳಿಂದ ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ನ್ಯೂಕ್ಲಿಯರ್ ಮಾತುಕತೆ ಹಾಗೂ ಯುದ್ಧ ನಿಲ್ಲಿಸುವ ಕುರಿತು ಮಾತುಕತೆ ನಡೆಸಲು ಸೂಚಿಸಿದ್ದರು. ಆದರೆ ಇರಾನ್ ಟ್ರಂಪ್ ಮಾತು ಕೇಳಿಲ್ಲ. ಇಸ್ರೇಲ್ ಮೇಲೆ ದಾಳಿ ಮುಂದುವರಿಸಿದ್ದರು. ಇತ್ತ ಆಕ್ರೋಶಗೊಂಡಿದ್ದ ಅಮೆರಿಕ ಇಂದು ಏಕಾಏಕಿ ಇರಾನ್ ಮೇಲೆ ದಾಳಿ ನಡೆಸಿದೆ.

ಇರಾನ್ ನ್ಯೂಕ್ಲಿಯರ್ ಘಟಕದ ಮೇಲೆ ಅಮೆರಿಕ ದಾಳಿ

ಇಸ್ರೇಲ್ ದಾಳಿ ಬೆನ್ನಲ್ಲೇ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದೆ. ಇರಾನ್‌ನ ನ್ಯೂಕ್ಲಿಯರ್ ಘಟಕದ ಮೇಲೆ ದಾಳಿ ಮಾಡಿದೆ. ಮೂರು ನ್ಯೂಕ್ಲಿಯರ್ ಸ್ಥಾವರ ಮೇಲೆ ದಾಳಿ ಧ್ವಂಸಗೊಳಿಸಿದೆ. ಅಮೆರಿಕ ದಾಳಿ ಮಾಡಿದ ಬೆನ್ನಲ್ಲೇ ಇರಾನ್ ಆಕ್ರೋಶ ಹೆಚ್ಚಾಗಿದೆ. ಇರಾನ್ ಪ್ರತಿಯಾಗಿ ಇಸ್ರೇಲ್ ಜನವಸತಿ ಪ್ರದೇಶದ ಮೇಲೂ ದಾಳಿ ಮಾಡಿದೆ. ಈ ದಾಳಿಯಲ್ಲಿ ಇಸ್ರೇಲ್‌ನ 86ಕ್ಕೂ ಹೆಚ್ಚು ನಾಗರೀಕರೂ ಗಾಯಗೊಂಡಿದ್ದಾರೆ.

ಶಾಂತಿ ಮಾತುಕತೆಗೆ ಒಪ್ಪದಿದ್ದರೆ ಮತ್ತಷ್ಟು ಗಂಭೀರ ದಾಳಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಡೋನಾಲ್ಡ್ ಟ್ರಂಪ್, ಇರಾನ್‌ಗೆ ಎಚ್ಚರಿಸಿದ್ದಾರೆ. ಇತ್ತ ಅಮೆರಿಕ ದಾಳಿ ಮಾಡಿ ತಪ್ಪಸಗಿದೆ. ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..