
ಲಖನೌ(ಜೂ.05) ಕಾಂಗ್ರೆಸ್ ಸರ್ಕಾರ ರಚಿಸಿದರೆ ಕಟಾ ಕಟ್ ಕಟಾ ಕಟ್ ಆಗಿ 1 ಲಕ್ಷ ರೂಪಾಯಿ ಜಮೆ ಆಗಲಿದೆ ಎಂದು ರಾಹುಲ್ ಗಾಂಧಿ ಭಾಷಣ ಜೊತೆಗೆ ಗ್ಯಾರೆಂಟಿ ಕಾರ್ಡ್ ಕೂಡ ಹಂಚಲಾಗಿತ್ತು. ಇದರ ಬೆನ್ನಲ್ಲೇ ದೇಶಾದ್ಯಂತ ಮಹಿಳೆಯರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಕ್ಯೂ ನಿಂತಿದ್ದು ಭಾರಿ ವೈರಲ್ ಆಗಿತ್ತು. ಇದೀಗ ಕಾಂಗ್ರೆಸ್ ಹೇಳಿದಂತೆ ಬಿಜೆಪಿ ಬದಲು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಮತ ಹಾಕಿದ್ದೇವೆ. ನಮಗೆ 1 ಲಕ್ಷ ರೂಪಾಯಿ ಕೊಡುವುದಾಗಿ ಗ್ಯಾರೆಂಟಿ ಕಾರ್ಡ್ ನೀಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಮಹಿಳೆಯರು ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ್ದಾರೆ.
ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತನ್ನ ಭರವಸೆಗಳನ್ನು ಘಂಟಾಘೋಷವಾಗಿ ಹೇಳಿಕೊಂಡಿತ್ತು. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರತಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಖಾತೆಗೆ ಜಮೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇಷ್ಟಕ್ಕೇ ಕಾಂಗ್ರೆಸ್ ಕಾರ್ಯತಂತ್ರ ಮುಗಿದಿರಲಿಲ್ಲ. 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡನ್ನು ಪ್ರತಿ ಮನೆ ಮನೆಗೂ ತಲುಪಿಸಲಾಗಿತ್ತು.
ಸರ್ಕಾರ ರಚನೆಗೆ ಮೋದಿ ನೇತೃತ್ವದಲ್ಲಿ NDA ಸಭೆ,ಚಂದ್ರಬಾಬು-ನಿತೀಶ್ ಭಾಗಿ!
ಪ್ರತಿ ತಿಂಗಳು ಸರಿಸುಮಾರು 8,500 ರೂಪಾಯಿ ಖಾತೆಗೆ ಜಮೆ ಆಗಲಿದೆ. ಎಂದು ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಉತ್ತರ ಪ್ರದೇಶದ ಬಹುತೇಕ ಮನೆ ಮನೆಗೆ ಒಟ್ಟು 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡ್ ತಲುಪಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರ ಮಾತಿನಂತೆ ಬಿಜೆಪಿ ಸೋಲಿಸಿದ್ದೇವೆ. ನಮಗೆ 1 ಲಕ್ಷ ರೂಪಾಯಿ ಗ್ಯಾರೆಂಟಿ ನೀಡಿ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಕಚೇರಿ ಮುಂದೆ ಮಹಿಳೆಯರು ಒತ್ತಾಯಿಸಿದ್ದಾರೆ.
ಮನೆಯ ಗೃಹಿಣಿಯರಿಗೆ ಕಾಂಗ್ರೆಸ್ 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡ್ ತಲುಪಿಸಿದ್ದು ಮಾತ್ರವಲ್ಲ, ಗೆದ್ದರೆ ಪ್ರತಿ ತಿಂಗಳು 8,500 ರೂಪಾಯಿಯಂತೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಜಮೆ ಆಗಲಿದೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಮಹಿಳೆಯರಿಗೆ 2,500 ರೂಪಾಯಿ ಗೃಹ ಲಕ್ಷ್ಮಿ ಯೋಜನೆ ಮೂಲಕ ನೀಡುತ್ತಿದೆ ಎಂದು ವಿವರಿಸಲಾಗಿದೆ ಎಂದು ಯುಪಿ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಹೇಳಿದ್ದಾರೆ.
ಪ್ರಮುಖ ಹುದ್ದೆಗಳಿಗೆ ನಿತೀಶ್, ನಾಯ್ಡು ಭಾರಿ ಚೌಕಾಸಿ? ಸ್ಪೀಕರ್ ಹುದ ...
ಕಾಂಗ್ರೆಸ್‌ಗೆ ಮತ ನೀಡಿದ್ದೇವೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದೇವೆ.ನೀವು ಹೇಳಿದಂತೆ ಗ್ಯಾರೆಂಟಿ ಹಣ ನೀಡಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಪಟ್ಟು ಹಿಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ