
ಲಖನೌ (ನ.18) ಭಾರತೀಯ ಸೇನೆಯ ಯುವ ಸೈನಿಕ ಪ್ರಯಾಗರಾಜ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಇದರ ನಡುವೆ ಸೋಶಿಯಲ್ ಮೀಡಿಯಾ ಮೂಲಕ ಪಿಯುಸಿ ವಿದ್ಯಾರ್ಥಿನಿಯ ಪರಿಚಯವಾಗಿದೆ. ಆಕೆಯ ವಯಸ್ಸು ಕೇವಲ 17. ಭಾರತೀಯ ಸೇನೆಯ ಯೋಧ ಎಂದಾಗಲೇ ಅಪ್ರಾಪ್ತೆ ಹೆಮ್ಮೆ ಪಟ್ಟಿದ್ದಾಳೆ. ಇತ್ತ ಯೋಧ ಪ್ರೀತಿಯಿಂದ ಮಾತನಾಡಿಸಲು ಶುರು ಮಾಡಿದ್ದ. ಇನ್‌ಸ್ಟಾಗ್ರಾಂನಲ್ಲಿ ಫ್ಲರ್ಟ್ ಮಾಡಲು ಮುಂದಾಗಿದ್ದ. ಕೆಲವೇ ದಿನಗಳಲ್ಲಿ ಇವರ ಪರಿಚಯ ಪ್ರೀತಿಯಾಗಿ ತಿರುಗಿದೆ. ಭೇಟಿ ಶುರುವಾಗಿದೆ. ವಯಸ್ಸು 17 ಆಗಿದ್ದರೂ ಹೀಗೆ ಪ್ರೀತ ಮುಂದುವರಿಸುವುದಕ್ಕಿಂತೆ ಮದುವೆಯಾಗುವಂತೆ ಯೋಧನಿಗೆ ಹೇಳಿದ್ದಾಳೆ. ಆದರೆ ಮದುವೆಯಾಗುವ ಪರಿಸ್ಥಿತಿಯಲ್ಲಿ ಯೋಧ ಇರಲಿಲ್ಲ. ಕಾರಣ ಆತನಿಗೆ ಆಗಲೇ ಬೇರೆ ಯುವತಿಯೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಇಕ್ಕಟ್ಟಿನಲ್ಲಿ ಸಿಲುಕಿದ್ದ ಭಾರತೀಯ ಯೋಧನ ನಿರ್ಧಾರ ಪೊಲೀಸರನ್ನೇ ದಂಗು ಬಡಿಸಿದ ಘಟನೆ ಉತ್ತರ ಪ್ರದೇಶದ ಥರ್ವಾಯಿ ಬಳಿ ನಡೆದಿದೆ.
ಪ್ರಯಾಗರಾಜ್‌ನಲ್ಲಿ ನಿಯೋಜನೆಗೊಂಡ ಭಾರತೀಯ ಸೇನೆಯ ಯೋಧ ದೀಪಕ್ ಬಿಡುವಿನ ವೇಳೆ ಇನ್‌ಸ್ಟಾಗ್ರಾಂ ಮೂಲಕ ಸುಂದರ ಯುವತಿಯರ ಫಾಲೋ ಮಾಡುವುದು, ಮೆಸೇಜ್ ಕಳುಹಿಸುವುದು ಮಾಡುತ್ತಿದ್ದ. ಈ ಪ್ರಯತ್ನದಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಸಾಕ್ಷಿ ಪರಿಚಯವಾಗಿದೆ. ಹೀಗೆ ಮಾತುಕತೆ ಶುರುವಾಗಿದೆ. ಈ ವೇಳೆ ತನಗೆ ಭಾರತೀಯ ಯೋಧನ ಮದುವೆಯಾಗಬೇಕು ಎಂದಿದ್ದಾಳೆ. ಅಲ್ಲಿಗೆ ದೀಪಕ್ ಮನಸ್ಸಲ್ಲಿ ಎರಡು ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ತಕ್ಷಣ ದೀಪಕ್ ತಡಮಾಡಿಲ್ಲ. ನಾನು ಭಾರತೀಯ ಯೋಧ ಎಂದಿದ್ದಾನೆ. ಆದರೆ ಸಾಕ್ಷಿ ನಂಬಿಲ್ಲ. ಹೀಗೆ ಮಾತುಕತೆ ಮುಂದುವರಿದಿದೆ. ಇದರ ನಡುವೆ ಡ್ಯೂಟಿ ಮುಗಿಯುತ್ತಿದ್ದಂತೆ ತನ್ನ ಯೂನಿಫಾರ್ಮ್‌ನಲ್ಲಿ ವಿಡಿಯೋ ಕಾಲ್ ಮಾಡಿ ತಾನು ಯೋಧ ಅನ್ನೋದನ್ನು ಸಾಬೀತುಮಾಡಿದ್ದಾನೆ. ಐಡಿ ಕಾರ್ಡ್, ತನ್ನ ಸೇನಾ ವಲಯದ ಕುರಿತುಹೇಳಿದ್ದಾನೆ. ಅಲ್ಲಿಗೆ ಸಾಕ್ಷಿಗೆ ದೀಪಕ್ ಮೇಲೆ ಲವ್ ಶುರುವಾಗಿದೆ. ಇತ್ತ ದೀಪಕ್ ಕೂಡ ಪ್ರೀತಿಸುವಂತೆ ನಾಟಕ ಮಾಡಿದ್ದಾನೆ.
ಇವರ ಸ್ನೇಹ, ಪ್ರೀತಿಯಾಗಿ ತಿರುಗಿದೆ. ಸಂಬಂಧಿಕರ ಮನೆಯಲ್ಲಿ ನಿಂತು ಕಾಲೇದು ವಿದ್ಯಾಭ್ಯಾಸ ಮಾಡುತ್ತಿದ್ದ ಸಾಕ್ಷಿ ಪ್ರಯಾಗರಾಜ್‌ನಲ್ಲಿದ್ದಳು. ಹೀಗಾಗಿ ಇವರಿಬ್ಬರು ಭೇಟಿಯಾಗಲು ಆರಂಭಗೊಂಡಿತು. ಸುತ್ತಾಟ, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಪ್ರಣಯ ಹಕ್ಕಿಗಳಂತೆ ಓಡಾಟ, ಒಡನಾಟ ಶುರುವಾಗಿತ್ತು. ಇದರ ನಡುವೆ ಸಾಕ್ಷಿ ಮದುವೆಯಾಗುವಂತೆ ಯೋಧ ದೀಪಕ್‌ನ ಒತ್ತಾಯಿಸಲು ಆರಂಭಿಸಿದ್ದ. ಒತ್ತಡ ತೀವ್ರಗೊಂಡಿತ್ತು. ಇತ್ತ ದೀಪಕ್ ಸಂಕಷ್ಟಕ್ಕೆ ಸಿಲುಕಿದ್ದ
ಸಾಕ್ಷಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಂತೆ ದೀಪಕ್ ಮೇಲೆ ಒತ್ತಡ ಹೆಚ್ಚಾಯಿತು. ಕಾರಣ ದೀಪಕ್‌ಗೆ ಆಗಲೇ ಮತ್ತೊಬ್ಬ ಹುಡುಗಿ ಜೊತೆ ಮದುವೆ ಫಿಕ್ಸ್ ಆಗಿತ್ತು. ಕುಟುಂಬಸ್ಥರು ನೋಡಿದ್ದ ಹಡುಗಿ ಜೊತೆ ಮುದುವೆ ಫಿಕ್ಸ್ ಮಾಡಲಾಗಿತ್ತು. ಹೀಗಾಗಿ ಮದುವೆ ಹತ್ತಿರಬರುತ್ತಿದ್ದಂತೆ ಸಾಕ್ಷಿ ಒತ್ತಡ ಹೆಚ್ಚಾಗುತ್ತಿದ್ದಂತೆ ಮಹಾ ಪ್ಲಾನ್ ಹಾಕಿ ಆಕೆಯನ್ನು ಬೇಟಿ ಮಾಡಲು ಸೂಚಿಸಿದ್ದ.
ಅಜಾದ್ ಪಾರ್ಕ್‌ನಲ್ಲಿ ಭೇಟಿಯಾದ ಈ ಜೋಡಿ, ಮಹತ್ವದ ಮಾತುಕತೆ ನಡೆಸಿದೆ. ತನಗೆ ಮದುವೆ ಫಿಕ್ಸ್ ಆಗಿದ್ದು, ಈ ಸಂಬಂಧ ಇಲ್ಲಿಗೆ ಅಂತ್ಯಗೊಳಿಸುವಂತೆ ಆತ ಸೂಚಿಸಿದ್ದಾನೆ. ಆದರೆ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಕಾರಣ ಪೋಷಕರನ್ನು ಭೇಟಿ ಮಾಡಿಸುವಂತೆ ಒತ್ತಾಯಿಸಿದ್ದಾಳೆ. ತನ್ನಿಂದ ಎಲ್ಲಾ ಪಡೆದು ತನಗೆ ಮೋಸ ಮಾಡಿದರೆ ಮದುವೆ ದಿನ ಎಲ್ಲಾ ಬಹಿರಂಗಪಡಿಸುವುದಾಗಿ ಸಾಕ್ಷಿ ಎಚ್ಚರಿಕೆ ನೀಡಿದ್ದಾಳೆ. ಅಲ್ಲಿಗೆ ತಾನು ಸಿಲುಕಿಕೊಂಡಿದ್ದೇನೆ ಅನ್ನೋದು ದೀಪಕ್‌ಗೆ ಖಚಿತವಾಗಿದೆ. ಸರಿ ಪೋಷಕರ ಭೇಟ ಮಾಡಿಸುವುದಾಗಿ ಹೇಳಿ ಬೈಕ್ ಮೇಲೆ ಕೂರಿಸಿ ಥರ್ವಾಯಿ ಕಾಡು ಪ್ರದೇಶದತ್ತ ಕರೆದುಕೊಂಡು ಹೋಗಿದ್ದಾನೆ. ಈ ಕಾಡಿನಲ್ಲೊಂದು ದೇವಸ್ಥಾನದಲ್ಲಿ ಮದುವೆಯಾಗೋಣ ಎಂದಿದ್ದಾನೆ. ಯೋಧನಾಗಿದ್ದ ಕಾರಣ ಈಕೆ ಎಲ್ಲವನ್ನೂ ನಂಬಿದ್ದಾಳೆ. ಅಷ್ಟರ ವೇಳೆಗೆ ಕತ್ತಲಾಗಿದೆ. ಹರಿತ ಆಯುಧದಿಂದ ಆಕೆಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಬಳಿಕ ಮರದ ಕೆಳಗೆ ಮೃತದೇಹ ಹೂತು ಹಾಕಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಐದು ದಿನಗಳ ಬಳಿಕ ಸ್ಥಳೀಯರಿಗೆ ಮೃತದೇಹದ ಕೆಲ ಭಾಗ ಮರದ ಕೆಳಗೆ ಪತ್ತೆಯಾಗಿದೆ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಇತ್ತ ಮರದ ಬಳಿ ವಿದ್ಯಾರ್ಥಿನಿಯ ಪುಸ್ತಕ ಪತ್ತೆಯಾಗಿದೆ. ತನಿಖೆೆ ತೀವ್ರಗೊಳ್ಳುತ್ತಿದ್ದಂತೆ ಯೋದ ದೀಪಕ್ ಅರೆಸ್ಟ್ ಆಗಿದ್ದಾನೆ. ಇದೀಗ ನಡೆದ ಘಟನೆ ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ