ವಿಡಿಯೋ ಕಾಲ್ ಆಗಲ್ಲ, ಠಾಣೆಯಲ್ಲೇ ವಿಚಾರಣೆ; ಟ್ವಿಟರ್ MDಗೆ ಯುಪಿ ಪೊಲೀಸ್ ಸಮನ್ಸ್!

By Suvarna NewsFirst Published Jun 21, 2021, 9:40 PM IST
Highlights
  • ಗಾಜಿಯಾಬಾದ್ ವೃದ್ಧಿ ಮುಸ್ಲಿಂ ಮೇಲೆ ಹಲ್ಲೆ ಪ್ರಕರಣ ತನಿಖೆ ಚುರುಕು
  • ವಿಡೀಯೋ ಕಾಲ್ ಮೂಲಕ ವಿಚಾರಣೆಗೆ ಲಭ್ಯ ಎಂದಿದ್ದ ಟ್ವಿಟರ್ MD
  • ಠಾಣೆಯಲ್ಲೇ ವಿಚಾರಣೆ, ಹಾಜರಾಗಿ ಎಂದು ಯುಪಿ ಪೊಲೀಸರ ಸಮನ್ಸ್
     

ಉತ್ತರ ಪ್ರದೇಶ(ಜೂ.21):  ಗಾಜಿಯಾಬಾದ್ ವೃದ್ಧ ಮುಸ್ಲಿಂ ವ್ಯಕ್ತಿಗೆ ಥಳಿಸಿದ ಪ್ರಕರಣದ ತನಿಖೆಗೆ ಚುರುಕುಗೊಂಡಿದೆ. ಈ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಉತ್ತರ ಪ್ರದೇಶ ಪೊಲೀಸರು, ಭಾರತದ ಟ್ವಿಟರ್ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಸಮನ್ಸ್ ನೀಡಲಾಗಿದೆ. ಯಾವುದೇ ವಿಡಿಯೋ ಕಾಲ್ ಮೂಲಕ ವಿಚಾರಣೆ ಸಾಧ್ಯವಿಲ್ಲ, ಠಾಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ವಿಚಾರಣೆಗೆ ತಾನು ವಿಡಿಯೋ ಕಾಲ್ ಮೂಲಕ ಲಭ್ಯವಿರುವುದಾಗಿ ಮನೀಶ್ ಮಹೇಶ್ವರಿ ಹೇಳಿಕೆ ನೀಡಿದ್ದರು. ಆದರೆ ಉತ್ತರ ಪ್ರದೇಶ ಪೊಲೀಸರ ನೀಡಿದ ಸಮನ್ಸ್‌ನಲ್ಲಿ ಜೂನ್ 24 ರಂದು ಗಾಝಿಯಾಬಾದ್ ಪೊಲೀಸ್ ಠಾಣೆಗೆ ಹಾಜರಾಗಲು ಸೂಚಿಸಿದ್ದಾರೆ. ಠಾಣೆಯಲ್ಲೇ ವಿಚಾರಣೆ ನಡೆಯಲಿದೆ. ವಿಡಿಯೋ ಕಾಲ್ ಮೂಲಕ ವಿಚಾರಣೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಫೇಕ್ ವಿಡಿಯೋವನ್ನು  ಅಧಿಕಾರಿಗಳು ಕೇಳಿದ ಬಳಿಕವೂ ಟ್ವೀಟ್ ತೆಗೆದು ಹಾಕಿಲ್ಲ. ಟ್ವಿಟರ್ ಭಾರತೀಯ ಕಾನೂನು ಅರ್ಥಮಾಡಿಕೊಂಡಿದ್ದೀರಿ ಹಾಗೂ ಕಾನೂನು ಪಾಲಿಸಲು ಬದ್ಧರಾಗಿರುತ್ತೀರಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.  

ಐಟಿ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌!

ಹಲ್ಲೆ ಕುರಿತು ಟ್ವಿಟರ್ ಮೂಲಕ ಹಂಚಿಕೊಂಡಿರುವ ದಾರಿತಪ್ಪಿಸುವ ಹಾಗೂ ಕೋಮು ಭಾವನೆ ಪ್ರಚೋದಿಸುತ್ತಿದೆ ಎಂದು ಟ್ವೀಟರ್ ಇಂಡಿಯಾ, ಕೆಲ ಪತ್ರಕರ್ತರು ಹಾಗೂ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಾಗಿತ್ತು.
 

click me!