* ಕೊರೋನಾ ಲಸಿಕೆ ಹಲವು ಸಂಶಯಗಳಿಗೆ ತೆರೆ ಎಳೆದ ಸರ್ಕಾರ
* ಬಂಜೆತನ, ಫಲವತ್ತತೆ ಕೊರತೆ ಶುದ್ಧ ಸುಳ್ಳು
* ವದಂತಿಗಳಿಗೆ ದಯವಿಟ್ಟು ಕಿವಿ ಕೊಡಬೇಡಿ
ನವದೆಹಲಿ(ಜೂ. 21) ಕೊರೋನಾ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವುದಿಲ್ಲ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿ ಫಲವತ್ತತೆಯ ಮೇಲೆ ಲಸಿಕೆಗಳು ಋಣಾತ್ಮಕ ಪರಿಣಾಮ ಬೀರುತ್ತವೆ ಎನ್ನುವುದು ಆಧಾರ ರಹಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇಂಥ ಮೂಢನಂಬಿಕೆಗಳು ಹಾಗೂ ಕಾಲ್ಪನಿಕ ಕಥೆಗಳು ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಂದಲೇ ಕೇಳಿಬಂದಿರುವುದು ಅಚ್ಚರಿ ತಂದಿದೆ. ಲಸಿಕೆ ವಿರೋಧಿಸುವ ಜನರು ಕೊರೋನಾ ವಾರಿಯರ್ಸ್ ಬಳಿ ಇಂಥ ವಿಚಾರ ಹೇಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಲಸಿಕಾ ಅಭಿಯಾನ ಸಂದರ್ಭದಲ್ಲಿ ಸಮುದಾಯದಲ್ಲಿ ಇಂತಹ ತಪ್ಪು ಸಂದೇಶ ಮತ್ತು ವದಂತಿಗಳು ಹರಡುವುದು ಹಿಂದೆಯೂ ನಡೆದ ಉದಾಹರಣೆಗಳಿವೆ ಎಂದು ಸರ್ಕಾರ ಹೇಳಿದೆ.
undefined
ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ?
ಈ ಹಿಂದೆ ಪೋಲಿಯೊ ಮತ್ತು ದಢಾರ-ರುಬೆಲ್ಲಾ ಲಸಿಕೆ ಅಭಿಯಾನದ ವೇಳೆ ಸಹ ಇಂತಹ ವದಂತಿಗಳು ಹರಡಿದ್ದವು. ಲಭ್ಯವಿರುವ ಯಾವುದೇ ಲಸಿಕೆಗಳು ಫಲವತ್ತತೆ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಎಲ್ಲಾ ಲಸಿಕೆಗಳು ಮತ್ತು ಅವುಗಳ ಡೋಸ್ ಗಳನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದೆ. ಮಾನವರಲ್ಲಿ ಅಂತಹ ಯಾವುದೇ ಅಡ್ಡಪರಿಣಾಮಗಳಿವೆಯೇ ಎನ್ನುವುದನ್ನು ಪರೀಕ್ಷಿಸಿದ ನಂತರವೇ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದೆ.
ಬಾಣಂತಿಯರಿಗೆ, ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಲು ಶಿಫಾರಸು ಮಾಡಲಾಗಿದೆ. ಲಸಿಕೆ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಾಮ ನೀಡುವ ಅಗತ್ಯವಿಲ್ಲ ಎಂಬುದನ್ನು ಹೇಳಿದ್ದು ಅನೇಕ ಅನುಮಾನಗಳಿಗೆ ತೆರೆ ಎಳೆದಿದೆ.
: Myths Vs. Facts
▪️No scientific evidences found linking COVID19 vaccination with infertility in men and women
National Expert Group on Vaccine Administration has recommended COVID19 vaccination for all lactating women
Read here: https://t.co/o75PvA0sAK