
ಲಖನೌ(ಮಾ.30) ಮದುವೆಯಾಗಿ ಸಂಸಾರ ಚೆನ್ನಾಗಿರಲು, ಯಾವುದೇ ಸಮಸ್ಯೆಗಳು ಬರದಂತೆ ಕಾಪಾಡಲು ದೇವರ ಮೊರೆ ಹೋಗುವುದು, ಪೂಜೆ, ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತ್ನಿಯಿಂದ ಮುಕ್ತಿ ಕೊಟ್ಟರೆ 9 ಕಿಲೋಮೀಟರ್ ಉದ್ದಂಡ ನಮಸ್ಕಾರ ಹಾಗುತ್ತೇನೆ ಎಂದು ಹರಕೆ ಹೊತ್ತಿದ್ದ. ಇದರಂತೆ ಕಾನೂನಿನ ಅಡಿಯಲ್ಲಿ ಈತ ವಿಚ್ಚೇದನ ಪಡೆದ ಬೆನ್ನಲ್ಲೇ ದೇವರಿಗೆ ನೀಡಿದ ಹರಕೆ ಮಾತನ್ನು ಈಡೇರಿಸಿದ್ದಾನೆ. ಇದೀಗ ಈ ಹರಕೆ ಭಾರಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬಸ್ತಿಯಲ್ಲಿ.
ಯೋಗೇಶ್ ಅನ್ನೋ ಯುವಕ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಮದುವೆಯಾದ ಆರಂಭದಲ್ಲೇ ಮನಸ್ತಾಪಗಳು ಎದುರಾಗಿತ್ತು. ಮನಸ್ತಾಪ ತೀವ್ರಗೊಂಡಿತ್ತು. ಜಗಳ ನಿತ್ಯವಾಗಿತ್ತು. ಹಲವು ಮಾತುಕತೆ, ಸಂಧಾನಗಳು ನಡೆದಿದೆ. ಆದರೂ ಪ್ರಯೋಜನವಾಗಲಿಲ್ಲ. ಯೋಗೇಶ್ ಸಮಸ್ಯೆಗಳು ತೀವ್ರಗೊಂಡಿತ್ತು. ಹೇಗೋ ಒಂದು ವರ್ಷ ಸಂಸಾರ ನಡೆಸಿದರೂ ಒಂದು ದಿನ ಇಬ್ಬರಿಗೂ ನೆಮ್ಮದಿ ಇರಲಿಲ್ಲ. ಡಿವೋರ್ಸ್ ಅರ್ಜಿ ಸಲ್ಲಿಸಿದರೆ ಜೀವನಾಂಶ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ಹೀಗಾಗಿ ಇರೋ ಸಮಸ್ಯೆಗಳು ಮತ್ತಷ್ಟು ಜಟಿವಾಗಲಿದೆ ಎಂದು ಪರಿತಪಿಸಿದ್ದ.
ಭಾನುಪುರದಲ್ಲಿರುವ ಬಾದ್ವಾ ಮಾತಾ ದೇವಸ್ಥಾನಕ್ಕೆ ತೆರಳಿದ ಯೋಗೇಶ್ ತನ್ನನ್ನು ಪತ್ನಿಯಿಂದ ಮಾನಸಿಕ ಕಿರುಕುಳದಿಂದ ಮುಕ್ತಿಕೊಡಿಸಿದರೆ ದಂಡಾವತ ಯಾತ್ರೆ ಮಾಡುವುದಾಗಿ ಹರಕೆ ಹೊತ್ತಿದ್ದಾನೆ. ಈ ತೀವ್ರ ಕಿರಿಕುಳದಿಂದ ಮುಕ್ತಿ ಪಡೆದರೆ ಮನೆಯಿಂದ ದೇವಸ್ಥಾನವರೆಗೆ ಉದ್ಧಂಡ ನಮಸ್ಕಾರ ಹಾಕುತ್ತಾ ದರ್ಶನಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದ. ಹೀಗೆ ಹರಕೆ ಹೊತ್ತ ಕೆಲವೇ ದಿನಗಳಲ್ಲಿ ಮಹತ್ವದ ಬೆಳವಣಿಗೆ ನಡೆದಿತ್ತು
ಹರಕೆ ಹೊತ್ತ ಕೆಲ ದಿನಗಳಲ್ಲೇ ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಪತ್ನಿ ಮರಳಿ ಮನೆಗೆ ಬರಲಿಲ್ಲ. ಪತ್ನಿಯ ಪೋಷಕರು ಕರೆ ಮಾಡಿ ಸಮಸ್ಯೆ ತೀವ್ರಗೊಂಡಿದೆ. ಮುಂದೇನು ಎಂದು ಮಾತನಾಡಿದ್ದಾರೆ. ಈ ಮಾತುಕತೆ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಸಲ್ಲಿಸಲು ಮುಂದಾಗಿದ್ದಾರೆ. ಇದರಂತೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಇದರಿಂದ ಕೆಲವೇ ತಿಂಗಳಲ್ಲಿ ಕೋರ್ಟ್ ಡಿವೋರ್ಸ್ ನೀಡಿದೆ.
ಕೋರ್ಟ್ ಡಿವೋರ್ಸ್ ನೀಡುತ್ತಿದ್ದಂತೆ ಅದೇ ದಿನ ಮನೆಯಿಂದ ಬಾದ್ವಾ ಮಾತಾ ದೇವಸ್ಥಾನವರೆಗೆ ಉದ್ಧಂಡ ನಮಸ್ಕಾರ ಹಾಗುತ್ತಾ ಸಾಗಿದ್ದಾನೆ. ಯೋಗೇಶ್ ಕುಟುಂಬಸ್ಥರು, ಆಪ್ತರು ಸಾಥ್ ನೀಡಿದ್ದಾರೆ. ದಾರಿಯುದ್ಧಕ್ಕೂ ಉದ್ಧಂಡ ನಮಸ್ಕಾರ ಹಾಕುತ್ತಾ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ನಿರಾಳನಾಗಿದ್ದಾನೆ. ಈತನ ಹರಕೆಯಿಂದ ಇದೀಗ ಬಾದ್ವಾ ಮಾತಾ ದೇವಸ್ಥಾನ ಭಾರಿ ಚರ್ಚೆಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ