
ಲಕ್ನೋ: ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಿನ್ಸಿಪಾಲ್‌ರೊಬ್ಬರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಸಮಯದಲ್ಲಿ ಮುಖಕ್ಕೆ ಫೇಶಿಯಲ್ ಮಾಡಿಸಿಕೊಂಡು ಕುಳಿತಿದ್ದವಿಚಿತ್ರ ಘಟನೆ ನಡೆದಿದೆ. ಬರೀ ಇಷ್ಟೇ ಅಲ್ಲ, ಇದನ್ನು ಗಮನಿಸಿದ ಶಿಕ್ಷಕಿಯೊಬ್ಬರನ್ನು ಪ್ರಿನ್ಸಿಪಾಲ್ ಕೈಗೆ ಕಚ್ಚಿ ಗಾಯಗೊಳಿಸಿದ್ದಾರೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ದಂಡಮೌ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಂಗೀತಾ ಸಿಂಗ್ ಎಂಬುವವರೇ ಈ ಕೃತ್ಯವೆಸಗಿದ ಪ್ರಾಂಶುಪಾಲೆ, ಇವರು ಉನ್ನಾವೋದ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯಾಗಿದ್ದು, ಮಕ್ಕಳಿಗೆ ಪಾಠ ಮಾಡಬೇಕಾದ ಸಮಯದಲ್ಲಿ ಇವರು ಮುಖಕ್ಕೆ ಫೇಸಿಯಲ್ (ಮುಖದ ಸೌಂದರ್ಯ ವರ್ಧಿಸುವ ಪ್ರಕ್ರಿಯೆ) ಮಾಡುತ್ತಾ ಕುಳಿತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಆಹಾರ ಬೇಯಿಸುತ್ತಿದ್ದ ಸ್ಥಳದಲ್ಲೇ ಮುಖ್ಯಶಿಕ್ಷಕಿ ಹೀಗೆ ಫೇಶಿಯಲ್ ಮಾಡುತ್ತಾ ಕುಳಿತಿದ್ದಾರೆ. ಈ ವೇಳೆ ಮತ್ತೊಬ್ಬ ಸಹಾಯಕ ಶಿಕ್ಷಕಿ ಅನಂ ಖಾನ್ ಇದನ್ನು ಗಮನಿಸಿದ್ದು. ತಮ್ಮ ಮೊಬೈಲ್ ಫೋನ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ.
Beauty Tips: ಫೇಶಿಯಲ್ ಸ್ಟೀಮ್ ನೀರಿಗೆ ಗಿಡಮೂಲಿಕೆ ಹಾಕಿ ಮ್ಯಾಜಿಕ್ ನೋಡಿ
ವೀಡಿಯೋದಲ್ಲಿ ಪ್ರಿನ್ಸಿಪಾಲ್ ತಮ್ಮ ಫೇಶಿಯಲ್ ಪ್ರಕ್ರಿಯೆಯ ಕೊನೆ ಹಂತದಲ್ಲಿದ್ದು, ಸಹ ಶಿಕ್ಷಕಿಯ ಅಚಾನಕ್ ಆಗಮನದಿಂದ ಶಾಕ್‌ಗೊಳಗಾಗಿ ಕುಳಿತ ಕುರ್ಚಿಯಿಂದ ಏಳಲು ನೋಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡ ಸಹ ಶಿಕ್ಷಕಿ ಅನಂ ಖಾನ್ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ ಪ್ರಿನ್ಸಿಪಾಲ್ ರಕ್ತ ಸೋರುವಂತೆ ಮಾಡಿದ್ದಾರೆ. ಪ್ರಿನ್ಸಿಪಾಲ್ ಹಲ್ಲೆಯಿಂದ ಗಾಯಗೊಂಡ ಶಿಕ್ಷಕಿ ತಮ್ಮ ಗಾಯದ ಫೋಟೊಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ಎರಡು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ವಿಭಾಗೀಯ ಶಿಕ್ಷಣಾಧಿಕಾರಿ ತನಿಖೆ ಆದೇಶಿಸಿದ್ದಾರೆ. ಅಲ್ಲದೇ ಬಿಘಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದ್ದು, ಹಲ್ಲೆಗೊಳಗಾದ ಅನಂ ಖಾನ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಘಾಪುರ ಸರ್ಕಲ್ ಆಫೀಸರ್ ಮಯಾ ರೈ ಪ್ರತಿಕ್ರಿಯಿಸಿದ್ದು, ನಾವು ಬಿಘಾಪುರದ ದಂಡಮೌನಲ್ಲಿರುವ ಸರ್ಕಾರಿ ಶಾಲೆಯ ಸಹಾಯಕ ಶಿಕ್ಷಕಿಯಿಂದ ದೂರು ಸ್ವೀಕರಿಸಿದ್ದೇವೆ. ಶಾಲೆಯ ಮುಖ್ಯಶಿಕ್ಷಕಿ ಶಾಲೆಯಲ್ಲೇ ಫೇಶಿಯಲ್ ಮಾಡುತ್ತಿದ್ದು, ಆಕೆಯ ಕೃತ್ಯವನ್ನು ಸೆರೆ ಹಿಡಿದ ಸಹ ಶಿಕ್ಷಕಿ ಮೇಲೆ ಮುಖ್ಯ ಶಿಕ್ಷಕಿ ಹಲ್ಲೆ ಮಾಡಿದ್ದಾರೆ ಎಂದು ದೂರು ಬಂದಿದ್ದು, ನಾವು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಲೇಸರ್ ಫೇಶಿಯಲ್ ಎಫೆಕ್ಟ್: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ