
ಲಖನೌ (ಫೆ.13) ಒಂದೇ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್ಸ್‌ಸ್ಟೇಬಲ್ ಹಾಗೂ ಮಹಿಳಾ ಪೊಲೀಸ್ ಪೇದೆಯ ಮಂಚದಾಟದ ವಿಡಿಯೋ ಲೀಕ್ ಆಗಿದ್ದು ಕೋಲಾಹಲ ಸೃಷ್ಟಿಯಾಗಿದೆ. ಪೊಲೀಸ್ ಸೇವೆಗಿಂತ ತಮ್ಮ ವೈಯುಕ್ತಿಕ ಸೇವೆಯೆ ಹೆಚ್ಚಾಗಿದೆ. ಸರಸ ಸಲ್ಲಾಪ ಹಾದಿ ಬೀದಿಯ ಮಾತಾಗಿದೆ. ಮಹಿಳಾ ಪೊಲೀಸ್ ಪೇದೆ ಹಾಗೂ ಮುಖ್ಯ ಪೇದೆಯ ಹಲವು ಭಂಗಿಗಳ ಸುಮಾರು 10ಕ್ಕೂ ಹೆಚ್ಚು ವಿಡಿಯೋಗಳು ಹರಿದಾಡುತ್ತಿದೆ. ಈ ವಿಡಿಯೋ ಹಿರಿಯ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಪರಿಣಾಮ ತಕ್ಷಣವೇ ಇಬ್ಬರನ್ನು ಅಮಾನತು ಮಾಡಿ ಠಾಣಾ ವಲಯದಲ್ಲಿ ತನಿಖೆಗೆ ಆದೇಶ ನೀಡಿದ ಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳ ಪೈಕಿ ಕೆಲ ವಿಡಿಯೋದಲ್ಲಿ ಮಹಿಳಾ ಪೇದೆ ಪೊಲೀಸ್ ಯೂನಿಫಾರ್ಮ್‌ನಲ್ಲಿರುವುದು ಪತ್ತೆಯಾಗಿದೆ. ಇತ್ತ ಕೆಲ ವಿಡಿಯೋಗಳಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಯೂನಿಫಾರ್ಮ್‌ನಲ್ಲಿರುವ ವಿಡಿಯೋಗಳಿವೆ. ಇನ್ನು ಪುರುಷ ಹೆಡ್ ಕಾನ್ಸ್‌ಸ್ಟೇಬಲ್‌ಗೆ ಮದುವೆಯಾಗಿ ಸಂಸಾರವಿದೆ. ಇತ್ತ ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗಿಲ್ಲ. ಪ್ರಾಥಮಿಕ ಪೊಲೀಸ್ ಮಾಹಿತಿಗಳ ಪ್ರಕಾರ ಈ ಸರಸ ಇಬ್ಬರ ಒಪ್ಪಿಗೆಯಿಂದ ನಡೆದಿದೆ ಎಂಬ ಮಾಹಿತಿಯು ಹೊರಬಿದ್ದಿದೆ.
ಇಬ್ಬರು ಪೊಲೀಸ್ ಪೇದೆಗಳು ಕಳೆದ ಒಂದು ವರ್ಷದಿಂದ ಬಿಜ್ನೂರ್ ಪೊಲೀಸ್ ಠಾಣೆಯಲ್ಲಿ ನಿಯುಕ್ತರಾಗಿದ್ದರು. ಹೆಡ್ ಕಾನ್ಸ್‌ಸ್ಟೇಬಲ್ ಮದುವೆಯಾಗಿದ್ದರೂ ಮಹಿಳಾ ಪೊಲೀಸ್ ಪೇದೆ ಜೊತೆ ಸಂಬಂಧ ಬೆಳೆಸಿದ್ದಾರೆ. ಇತ್ತ ಮಹಿಳಾ ಪೊಲೀಸ್ ಪೇದೆ ಕೂಡ ಸಹಕರಿಸಿರುವುದು ವಿಡಿಯೋದಲ್ಲಿ ಪತ್ತೆಯಾಗಿದೆ. ಬಿಜ್ನೂರ್ ಪೊಲೀಸ್ ಠಾಣೆಗೆ ನಿಯುಕ್ತರಾಗುವ ಮೊದಲು ಇಬ್ಬರು ಬೇರೆ ಬೇರೆ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಬಿಜ್ನೂರ್ ಠಾಣೆಗೆ ನಿಯುಕ್ತರಾಗಿದ್ದಾರೆ. ಬಿಜ್ನೂರ್ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ಸರಸ ಆರಂಭಗೊಂಡಿದೆ.
ಹೆಡ್ ಕಾನ್ಸ್‌ಸ್ಟೇಬಲ್ ವಿಡಿಯೋಗಳು ಹರಿದಾಡುತ್ತಿದ್ದಂತೆ ಸಂಸಾರದಲ್ಲಿ ಬಿರುಕು ಮೂಡಿದೆ. ಮನೆಯಲ್ಲಿ ಪತ್ನಿ ಜಗಳ ಶುರುಮಾಡಿದ್ದಾರೆ. ಇತ್ತ ಪತ್ನಿ ಪೋಷಕರು ಆಗಮಿಸಿ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಮಹಿಳಾ ಕಾನ್ಸ್‌ಸ್ಟೇಬಲ್ ರಹಸ್ಯ ತಾಣಕ್ಕೆ ತೆರಳಿದ್ದಾರೆ. ಬಿಜ್ನೂರ್ ಸಾರ್ವಜನಿಕರಲ್ಲಿ ಈ ವಿಡಿಯೋಗಳು ಹರಿದಾಡುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಶಿಸ್ತು, ಪೊಲೀಸ್ ಮೇಲಿರುವ ಗೌರವಕ್ಕೆ ಧಕ್ಕೆ, ಅಶ್ಲೀಲತೆ ಸೇರಿದಂತೆ ಹಲವು ಆರೋಪಗಳ ಕಾರಣಗಳಿಂದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿದ್ದಾರೆ. ಠಾಣಾ ವಿಭಾಗದಲ್ಲಿ ತನಿಖೆ ನಡೆಸಿ ವರದಿಗೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ