
ಲಖನೌ (ಡಿ.12) ಶಾಲೆಗಳಲ್ಲಿ ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನ ಸಿಹಿ ಹಂಚುವುದು ಸಾಮಾನ್ಯ. ಆದರೆ ಈ ಬಾಲಕಿಯ ಹುಟ್ಟು ಹಬ್ಬ ಇರಲಿಲ್ಲ, ಆದರೂ ಶಾಲಾ ಟೀಚರ್‌ಗೆ ಸ್ವೀಟ್ ನೀಡಿದ್ದಾಳೆ. ಟೀಚರ್ ಮೇಲಿರುವ ಭಯ, ಹಿಂಜರಿಕೆ, ಗೌರವದ ಜೊತೆಗೆ ಬಾಲಕಿ ಟೀಚರ್‌ಗೆ ಸ್ವೀಟ್ ಕೊಟ್ಟು ಅಚ್ಚರಿ ನೀಡಿದ್ದಾಳೆ. ಈ ಸ್ವೀಟ್ ಕಾರಣವನ್ನೂ ಬಾಲಕಿ ಹೇಳಿದ್ದಾಳೆ. ಬಾಲಕಿಯ ಈ ವಿಡಿಯೋವನ್ನು ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಈ ಬಾಲಕಿಯ ನಗುವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮುಗ್ದ ನಗು, ಅಷ್ಟೇ ಮುಗ್ದತೆಯ ಮಾತುಗಳನ್ನು ಜನರು ಪ್ರಶಂಸಿಸಿದ್ದಾರೆ. ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳ ಮುಗ್ದತೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಆಕೆ ಸ್ವೀಟ್ ಹಂಚಿದ್ದು ಯಾಕೆ ಅನ್ನೋ ಕಾರಣ ಮನಮುಟ್ಟಲಿದೆ.
ಉತ್ತರ ಪ್ರದೇಶದ ಸರ್ಕಾರಿ ಶಾಲೆ ಈ ಸುಮಧುರ ಕ್ಷಣಕ್ಕೆ ಸಾಕ್ಷಿಯಾಗಿದೆ. ದಿವ್ಯಾ ಅನ್ನೋ ಶಿಕ್ಷಕಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಶಾಲಾ ಬಾಲಕಿ ರಫ್ ಬುಕ್‌ನ ಫೇಪರ್‌ನಲ್ಲಿ ಸ್ವೀಟ್ ಸುತ್ತಿಕೊಂಡು ಬಂದಿದ್ದಾಳೆ. ತನ್ನ ಶಾಲಾ ಟೀಚರ್‌ಗೆ ಈ ಸ್ವೀಟ್ ಹಂಚಲು ಕೆಲ ಹೊತ್ತು ಕಾದಿದ್ದಾಳೆ. ಕಾರಣ ಟೀಚರ್ ಇತರ ಅಧ್ಯಾಪಕರ ಜೊತೆ ಚರ್ಚಿಸುತ್ತಿರುವಾಗ, ಇತರ ವಿದ್ಯಾರ್ಥಿಗಳು ಟೀಚರ್ ಬಳಿ ಮಾತನಾಡುತ್ತಿರುವಾಗ ಈ ಬಾಲಕಿ ದೂರದಲ್ಲಿ ನಿಂತು ಕಾದಿದ್ದಾಳೆ. ಇದನ್ನು ಟೀಚರ್ ಕೂಡ ಗಮನಿಸಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು ತೆರಳಿದ ಬಳಿಕ ಟೀಚರ್ ದಿವ್ಯ ಬಾಲಕಿಯನ್ನು ಕರೆದಿದ್ದಾರೆ. ಈ ವೇಳೆ ತಮ್ಮ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಿಂಜರಿಕೆಯಿಂದಲೇ ಬಂದ ಬಾಲಕಿ, ಕೈಯಲ್ಲಿದ್ದ ಸ್ವೀಟನ್ನು ಟೀಚರ್‌ಗೆ ನೀಡಿದ್ದಾರೆ.
ಬಾಲಕಿ ಟೀಚರ್ ಬಳಿ ಬಂದು ಪೇಪರ್‌ನಲ್ಲಿ ಸುತ್ತಿಕೊಂಡು ಬಂದ ಸ್ವೀಟ್ ನೀಡಿದ್ದಾರೆ. ಬಾಲಕಿಗೆ ಏನಿದು ಎಂದು ಶಿಕ್ಷಕಿ ಕೇಳಿದ್ದಾರೆ. ಬಾಲಕಿ ನಾಚುತ್ತಲೇ ಮಿಠಾಯಿ ಎಂದು ಉತ್ತರಿಸಿದ್ದಾರೆ. ಪೇಪರ್ ತೆರೆದು ನೋಡಿದ ಟೀಚರ್, ಈ ಸ್ವೀಟ್ ಯಾರಿಗೆ ಎಂದು ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕಿ ನಿಮಗಾಗಿ ತಂದಿದ್ದೇನೆ ಎಂದಿದ್ದಾಳೆ. ಪೇಪರ್ ತೆರೆದು ನೋಡಿ ಖುಷಿ ಪಟ್ಟ ಟೀಚರ್, ಸರಿ ಯಾರು ಕೊಟ್ಟರು, ಏನಕ್ಕೆ ಸ್ವೀಟ್ ತಂದಿದ್ದಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಾಲಕಿ, ನನ್ನ ತಂದೆ ಬಂಬಯಿ (ಮುಂಬೈ)ನಿಂದ ಬರುವಾಗ ಸ್ವೀಟ್ ತಂದಿದ್ದಾರೆ. ಅದರಲ್ಲಿ ನಿಮಗಾಗಿ ಈ ಸ್ವೀಟ್ ತಂದಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿ ಮುಗ್ದ ಮಾತು, ನಗು ಟೀಚರ್ ಮನ ತಟ್ಟಿದೆ. ಥ್ಯಾಂಕ್ಯೂ ಎಂದ ಟೀಚರ್‌ಗೆ ವೆಲ್‌ಕಮ್ ಎಂದು ಉತ್ತರಿಸಿ ಬಾಲಕಿ ತರಗತಿಗೆ ತೆರಳಿದ್ದಾಳೆ ಈ ವಿಡಿಯೋವನ್ನು ಟೀಚರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಬಾಲಕಿಯ ಮುಗ್ದತೆ, ಆಕರ್ಷಕ ನಗುವಿಗೆ ಫಿದಾ ಆಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ಶಿಕ್ಷಕಿಗೆ ಧನ್ಯವಾದ ಹೇಳಿದ್ದಾರೆ. ಈ ವಿಡಿಯೋ ನಮ್ಮ ಮನಸ್ಸಿಗೂ ತಟ್ಟಿದೆ. ಬಾಲಕಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ, ಅಧ್ಯಾಪಕ ವೃಂದ, ಸಿಬ್ಬಂದಿಗಳಿಗೆ ಶುಭವಾಗಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಮುಗ್ದತೆ, ನಗು, ಶಿಕ್ಷಕಿ ಮೇಲಿನ ಭಯ ಭಕ್ತಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಕಾಣಸಿಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ