ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ ಅಟಲ್ ಟನಲ್ ಉದ್ಘಾಟಿಸಿದ ಪಿಎಂ ಮೋದ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಯೋಜನೆಯಾಗಿದ್ದ ಹಿಮಾಚಲ ಪ್ರದೇಶದ ರೋಹ್ತಂಗ್‌ನ ಸುರಂಗ ಮಾರ್ಗ 'ಅಟಲ್ ಟನಲ್' ಯೋಜನೆ ಪೂರ್ಣಗೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದು ವಿಶ್ವ ಅತೀ ಉದ್ಧದ ಹೆದ್ದಾರಿ ಸುರಂಗ ಮಾರ್ಗವಾಗಿದೆ.
Watch LIVE: Inauguration of Atal Tunnel by PM https://t.co/6Hkt0KPEAC
— Prasar Bharati News Services (@PBNS_India)2000ನೇ ಇಸವಿಯ ಜೂನ್ 3ರಂದು ರೋಹ್ತಂಗ್ ಪಾಸ್ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಪ್ರಧಾನಿ ವಾಜಪೇಯಿ ತೀರ್ಮಾನಿಸಿದ್ದರು. 2002ರ ಮೇ 26 ರಂದು ಶಂಕು ಸ್ಥಾಪನೆಯನ್ನೂ ನೆರವೇರಿಸಿದ್ದರು. ವಿಪರೀತ ಹಿಮದಿಂದಾಗಿ ವರ್ಷದಲ್ಲಿ ಆರು ತಿಂಗಳು ಮಾತ್ರ ಮನಾಲಿ ಹಾಗೂ ಲೇಹ್ ನಡುವೆ ಸಂಚಾರ ಸಾಧ್ಯವಾಗಿತ್ತು. ಈ ಕೊರತೆ ನೀಗಿಸಿ ವರ್ಷವಿಡೀ ಸಂಚಾರಕ್ಕೆ ಅವಕಾಶ ಕಲ್ಪಿಸಲು ಈ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಮನಾಲಿಯಿಂದ 25 ಕಿ. ಮೀ ದೂರದಿಂದ ಆರಂಭವಾಗುವ ಈ ಸುರಂಗ ಲಾಹೋಲ್ ತೆಲ್ಲಿಂಗಗ್ ಗ್ರಾಮದಲ್ಲಿ ಕೊನೆಯಾಗುತ್ತದೆ.
Himachal Pradesh: Prime Minister Narendra Modi inaugurates Atal Tunnel at Rohtang. pic.twitter.com/A7bXMs6WSR
— ANI (@ANI)undefined
ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್ ನಡುವಿನ ಸುರಂಗ ಮಾರ್ಗ ಇದಾಗಿದ್ದು, ಹಿಮಾಚಲಪ್ರದೇಶದಲ್ಲಿರುವ ಈ ಸುರಂಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದ್ದು, ಈ ಸುರಂಗದಿಂದ ಮನಾಲಿ ಹಾಗೂ ಲೇಹ್ ನಗರಗಳ ನಡುವಣ ಅಂತರ 46 ಕಿ.ಮೀ.ಯಷ್ಟುತಗ್ಗಲಿದೆ. ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟು ಉಳಿತಾಯವಾಗಲಿದೆ.
ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಈ ಯೋಜನೆಗೆ 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. 2002ರಲ್ಲಿ ಅಡಿಗಲ್ಲು ಹಾಕಲಾಗಿದ್ದ ಈ ಕಾಮಗಾರಿ 3300 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. ಶುಕ್ರವಾರ ಮನಾಲಿಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟನೆಗೆ ಸಜ್ಜಾಗಿರುವ ಸುರಂಗವನ್ನು ಪರಿಶೀಲನೆ ನಡೆಸಿದರು.
Himachal Pradesh: Prime Minister Narendra Modi at Atal Tunnel, Rohtang
It is the longest highway tunnel in the world built at an altitude of 3000 meters. The 9.02 Km long tunnel connects Manali to Lahaul-Spiti valley pic.twitter.com/yh2KmITCSB
ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ : ಮಾನಾಲಿ-ಲೇಹ್ ಪ್ರಯಾಣದಲ್ಲಿ 5 ತಾಸು ಇಳಿಕೆ !
ವಿಶೇಷತೆಗಳು
- ಕುದುರೆ ಲಾಳಾಕೃತಿಯ ದ್ವಿಪಥ ಮಾರ್ಗವನ್ನು ಸುರಂಗ ಹೊಂದಿದೆ
- 8 ಮೀ. ಅಗಲದ ರಸ್ತೆ. 5.525 ಮೀ. ಎತ್ತರದ ವಾಹನ ಚಲಿಸಬಹುದು
- ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ
- ಗರಿಷ್ಠ 80 ಕಿ.ಮೀ. ವೇಗದಲ್ಲಿ ಹೋಗಬಹುದು
- ಸರ್ವಋುತು ಸುರಂಗ. ಹಿಮಪಾತ ವೇಳೆಯೂ ವಾಹನ ಸಂಚಾರ
ಅಟಲ್‌ಜೀ ಅವರ ಬದುಕಿನ ಸ್ವಾರಸ್ಯಕರ ಸನ್ನಿವೇಶಗಳು
- 150 ಮೀಟರ್‌ಗಳಿಗೊಂದು ಟೆಲಿಫೋನ್ ವ್ಯವಸ್ಥೆ
- ಪ್ರತೀ 1 ಕಿ.ಮೀ.ಗೊಂದು ಗಾಳಿಯ ಶುದ್ಧತೆಯ ಪರೀಕ್ಷಾ ವ್ಯವಸ್ಥೆ
- ಪ್ರತೀ 250 ಮೀಟರ್‌ಗೊಂದು ಬ್ರಾಡ್‌ಕಾಸ್ಟ್ ವ್ಯವಸ್ಥೆ, ಸಿಸಿ ಕ್ಯಾಮೆರಾ, ಸ್ವಯಂಚಾಲಿತ ಅನಾಹುತ ಘಟನೆ ಪತ್ತೆ ವ್ಯವಸ್ಥೆ