UP Elections: ಬಿಜೆಪಿಗೆ ತನ್ನದೇ ನಾಯಕರಿಂದ ಸಂಕಷ್ಟ, ಕ್ರಮ ಕೈಗೊಳ್ಳುವ ಸಾಧ್ಯತೆ!

By Suvarna NewsFirst Published Mar 2, 2022, 11:43 AM IST
Highlights

* ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಪಕ್ಷಗಳ ಪೈಪೋಟಿ

* ಬಿಜೆಪಿಗೆ ತನ್ನದೇ ನಾಯಕರಿಂದ ಸಂಕಷ್ಟ, ಕ್ರಮ ಕೈಗೊಳ್ಳುವ ಸಾಧ್ಯತೆ

* ಚುನಾವಣೆ ಬಳಿಕ ನಾಯಕರಿಗೆ ಬಿಜೆಪಿ ಡ್ರಿಲ್?

ಲಕ್ನೋ(ಮಾ.02): ಕುಶಿನಗರದ ಫಾಜಿಲ್‌ನಗರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ವಾಮಿ ಪ್ರಸಾದ್ ಮೌರ್ಯ ಅವರ ಕಾರಿನ ಮೇಲೆ ದಾಳಿ ಮಾಡಿದ ನಂತರ, ಅವರ ಪುತ್ರಿ ಸಂಘಮಿತ್ರ ಕಾರ್ಯಕರ್ತರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಾದ ನಂತರ ಸಂಘಮಿತ್ರ ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಸಂಘಮಿತ್ರ ಇದು ಕೇವಲ ವದಂತಿ ಎಂದಿದ್ದಾರೆ. ಸಂಘಮಿತ್ರ ಫೇಸ್‌ಬುಕ್ ಲೈವ್‌ನಲ್ಲಿ ಬಂದು ಈ ಸಂಗತಿಗಳನ್ನು ವದಂತಿ ಎಂದಿದ್ದಾರೆ. ಅಲ್ಲದೇ ಫಾಜಿಲ್‌ನಗರದ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪಕ್ಷದ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಚುನಾವಣೆ ನಂತರ ಬಿಜೆಪಿ ಸಂಘಮಿತ್ರ ಮೌರ್ಯ ವಿರುದ್ಧ ಕ್ರಮ ಕೈಗೊಳ್ಳಬಹುದು. ಸಂಘಮಿತ್ರ ಮೌರ್ಯ ಅವರಲ್ಲದೆ, ಇನ್ನೂ ಅನೇಕ ದೊಡ್ಡ ನಾಯಕರ ಹೆಸರುಗಳು ಈ ಕ್ರಮದ ಪಟ್ಟಿಯಲ್ಲಿ ಸೇರಿವೆ.

ಸಂಘಮಿತ್ರ ಮೌರ್ಯ ವಿರುದ್ಧ ಕ್ರಮ?

ಪಕ್ಷದ ಮೂಲಗಳ ಅನ್ವಯ, ಚುನಾವಣೆಯ ನಂತರ ಸಂಘಮಿತ್ರ ಮೌರ್ಯ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬಹುದು. ವಾಸ್ತವವಾಗಿ, ಸಂಘಮಿತ್ರ ಅವರು ತಮ್ಮ ತಂದೆಯ ಪರವಾಗಿ ರಹಸ್ಯವಾಗಿ ಪ್ರಚಾರ ಮಾಡಿದ್ದರು ಎಂದು ಈ ಹಿಂದೆ ಆರೋಪಿಸಲಾಗಿದೆ. ಸ್ವಾಮಿ ಪ್ರಸಾದ್ ಮೌರ್ಯ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಆಕೆಯೂ ಆತನೊಂದಿಗೆ ಇದ್ದಳು. ಈ ಕುರಿತು ಸಂಘಮಿತ್ರ ಅವರು ಹಲ್ಲೆ ನಡೆಸಿದ ಬಳಿಕ ಅಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ರೋಡ್ ಶೋ ವೇಳೆ ತಂದೆಯ ಮೇಲೆ ಹಲ್ಲೆ ನಡೆದಿದೆ ಎಂದು ಸಂಘಮಿತ್ರ ಹೇಳಿದ್ದಾರೆ. ಇದು ಅವರನ್ನು ಕೊಲ್ಲುವ ಸಂಚು ಎಂದ ಸಂಘಮಿತ್ರ, ಬಳಿಕ ಫಾಜಿಲ್‌ನಗರದ ಜನತೆ ಸ್ವಾಮಿ ಪ್ರಸಾದ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಹೀಗಾಘಿ ಸಂಘಮಿತ್ರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ವರುಣ್ ಗಾಂಧಿ ವಿರುದ್ಧವೂ ಕ್ರಮ?

ಬಿಜೆಪಿ ವಿರುದ್ಧ ವರುಣ್ ಗಾಂಧಿ ಬಂಡಾಯ ಧೋರಣೆ ತಳೆದಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ವಿಧಾನಸಭಾ ಚುನಾವಣೆ ಮುಗಿದ ನಂತರ ಬಿಜೆಪಿ ವರುಣ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ. ವರುಣ್ ಗಾಂಧಿ ಹಲವು ವರ್ಷಗಳಿಂದ ಬಿಜೆಪಿಗೆ ತಲೆನೋವಾಗಿದ್ದು, ಪಕ್ಷದ ಸಂಕಷ್ಟವನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಬಂದಿದ್ದಾರೆ.

ರೀಟಾ ಬಹುಗುಣ ಜೋಶಿ ವಿರುದ್ಧವೂ ಕ್ರಮ?

ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ವಿರುದ್ಧವೂ ಚುನಾವಣೆಯ ನಂತರ ಕ್ರಮಕ್ಕೆ ಮುಂದಾಗಬಹುದು ಎನ್ನಲಾಗಿದೆ. ಕ್ಯಾಂಟ್‌ ಸೀಟ್‌ನಿಂದ ಮಗನಿಗೆ ಟಿಕೆಟ್‌ ನೀಡಬೇಕೆಂದು ಅವರು ಒತ್ತಾಯಿಸಿದ್ದರು. ಆದಾಗ್ಯೂ, ನಂತರ ಅವರ ಪುತ್ರ ಮಯಾಂಕ್ ಜೋಶಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು. ಅದರ ಫೋಟೋವನ್ನು ಅಖಿಲೇಶ್ ಯಾದವ್ ಕೂಡ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಚುನಾವಣೆಯ ನಂತರ, ರೀಟಾ ಬಹುಗುಣ ಜೋಶಿ ಬಗ್ಗೆ ಪಕ್ಷವು ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಯುಪಿ ಚುನಾವಣಾ ಮಾಹಿತಿ: 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

click me!