UP Election 2022 ಅಧಿಕಾರಕ್ಕಾಗಿ ಭರ್ಜರಿ ಘೋಷಣೆ, ಎಸ್‌ಪಿ ಗೆದ್ದರೆ ಬಡವರಿಗೆ 1 ಕೆಜಿ ತುಪ್ಪ ಉಚಿತ!

By Suvarna NewsFirst Published Feb 15, 2022, 8:50 PM IST
Highlights
  • ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಆಶ್ವಾಸನೆ
  • ಬಡವರಿಗೆ 5 ವರ್ಷ ಉಚಿತ ತುಪ್ಪ, ಭರ್ಜರಿ ಘೋಷಣೆ ಮಾಡಿದ ಎಸ್‌ಪಿ
  • ಬಡವರಿಗೆ ಸಿಗಲಿದೆ ಉಚಿತ ಪಡಿತರ, ಗೆಲ್ಲಿಸಿ ಎಂದು ಅಖಿಲೇಶ್ ಮನವಿ

ಉತ್ತರ ಪ್ರದೇಶ(ಫೆ.15): ಪಂಚ ರಾಜ್ಯಗಳ ಚುನಾವಣೆ(Five States Election) ಕಾವು ಜೋರಾಗಿದೆ. ಪ್ರತಿ ಪಕ್ಷಗಳು ಜನರಿಗೆ ಹೊಸ ಹೊಸ ಆಶ್ವಾಸನೆ, ಭರವಸೆ ನೀಡುತ್ತಿದೆ. ಇದೀಗ ಮತ್ತೆ ಅಧಿಕಾರ ಪಡೆಯಲು ಅವಿರತ ಶ್ರಮವಹಿಸುತ್ತಿರುವ ಅಖಿಲೇಶ್ ಯಾದವ್(Akhilesh yadav) ನೇತತ್ವದ ಸಮಾಜವಾದಿ ಪಾರ್ಟಿ(Samajwadi Party) ಇದೀಗ ಹೊಸ ಭರವಸೆ ನೀಡಿದೆ.  ಸಮಾಜವಾದಿ ಪಾರ್ಟಿಗೆ ಬಹುಮತ ಸಿಕ್ಕರೆ ಬಡವರಿಗೆ 5 ವರ್ಷ ಉಚಿತ ರೇಶನ್ ಹಾಗೂ 1 ಕೆಜಿ ತುಪ್ಪ ನೀಡಲಾಗುವುದು ಎಂದು ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

ಬಿಜೆಪಿ ಸರ್ಕಾರ ಉತ್ತರ ಪ್ರದೇಶ ಜನರನ್ನು ಬಡವರನ್ನಾಗಿಸಿದೆ. ಸಮಾಜವಾದಿ ಪಾರ್ಟಿ ಬಡವರಿಗೆ(Poor) ಉಚಿತ ರೇಶನ್(Free Ration) ನೀಡಿತ್ತು. ಆದರೆ ಬಿಜೆಪಿ ಉಚಿತ ರೇಶನ್ ಯೋಜನೆ ನಿಲ್ಲಿಸಿದೆ. ಹೀಗಾಗಿ ಈ ಬಾರಿಯ ಸಮಾಜವಾದಿ ಪಾರ್ಟಿಗೆ ಮತ ಹಾಕಿ ಅಭೂತಪೂರ್ವ ಗೆಲುವಿಗೆ ಸಹಕರಿಸಿ. ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 1 ಕೆಜಿ ತುಪ್ಪ ಹಾಗೂ ಪಡಿತರವನ್ನು 5 ವರ್ಷ ನೀಡಲಾಗುವುದು ಎಂದು ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

Latest Videos

ಭಾರತವನ್ನು ಘಜ್ವ ಇ ಹಿಂದ್ ಮಾಡಲು ಬಿಡುವುದಿಲ್ಲ: ಘರ್ಜಿಸಿದ ಯೋಗಿ ಆದಿತ್ಯನಾಥ್!

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಖಿಲೇಶ್ ಯಾದವ್ ಮಹತ್ವದ ಘೋಷಣೆ ಮಾಡಿದ್ದಾರೆ. ಪಡಿತರದಲ್ಲಿ ಅಡುಗೆ ಎಣ್ಣೆ ಕೂಡ ನೀಡಲಾಗುವುದು. ವರ್ಷದಲ್ಲಿ ಎರಡು ಅಡುಗೆ ಸಿಲಿಂಡರ್ ಉಚಿತವಾಗಿ ನೀಡಲಾಗುವುದು. ಇವೆಲ್ಲವೂ ಬಡವರಾಗಿ ಸಮಾಜವಾದಿ ಪಾರ್ಟಿ ನೀಡಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಉತ್ಯತ್ತಮ ಗುಣಮಟ್ಟದ ಪಡಿತರವನ್ನು ಸಮಾಜವಾದಿ ಪಾರ್ಟಿ ನೀಡಲಿದೆ. ಈ ಮೂಲಕ ಬಡವರ ಆರೋಗ್ಯದ ಕುರಿತು ಸಮಾಜವಾದಿ ಪಾರ್ಟಿ ಕಾಳಜಿ ವಹಿಸಲಿದೆ. ಆದರೆ ಬಿಜೆಪಿ ಸರ್ಕಾರ ನೀಡಿರುವ ಪಡಿತರ ಅತ್ಯಂತ ಕಳೆಪ ಮಟ್ಟದ್ದಾಗಿದೆ. ಉಪ್ಪಿನಲ್ಲಿ ಗಾಜಿನ ಚೂರುಗಳು ಸಿಕ್ಕ ಉದಾಹರಣೆಗಳಿವೆ. ಬಡವರ ಆರೋಗ್ಯ ವೃದ್ಧಿ ಪೌಷ್ಠಿಕಾಂಶದ ಆಹಾರ ನೀಡಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

ತ್ರಿವಳಿ ತಲಾಖ್‌ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ನೆರವು: Narendra Modi

ಉತ್ತರ ಪ್ರದೇಶದಲ್ಲಿನ ಬಡವರ ಏಳಿಗೆ ಸಮಾಜವಾದಿ ಪಾರ್ಟಿ ಅವಿರತ ಶ್ರಮವಹಿಸಲಿದೆ. ಕಳೆದ 5 ವರ್ಷದಲ್ಲಿ ಬಿಜೆಪಿ ಬಡವರ ಸೌಲಭ್ಯಗಳನ್ನು ಕಡಿತಗೊಳಿಸುತ್ತಾ ಬಂದಿದೆ. ಕೇವಲ ಚುನಾವಣೆ ಹತ್ತಿರಬಂದಾಗ ಬಡವರ ನೆನೆಪಿಸುವ ಬಿಜೆಪಿ, ಬಳಿಕ ಕಣ್ಣೆತ್ತಿ ನೋಡಿಲ್ಲ. ಆದರೆ ಸಮಾಜವಾದಿ ಪಾರ್ಟಿಗೆ ಅಧಿಕಾರ ನೀಡಿ, ಉತ್ತರ ಪ್ರದೇಶದ ಚಿತ್ರಣ ಬದಲಿಸುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ 11 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಯುವಕರಿಗೆ ಉದ್ಯೋಗ ನೀಡಲು ಬಿಜೆಪಿ ಸರ್ಕಾರ ಹಿಂದೇಟು ಹಾಕಿದೆ. ಆದರೆ ಸಮಾಜವಾದಿ ಪಾರ್ಟಿ ಖಾಲಿ ಇರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು. ರಾಜ್ಯದ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

UP Election : ಮೊದಲ ಹಂತದಲ್ಲಿ ಶೇ. 60.17 ರಷ್ಟು ಮತದಾನ

ಉತ್ತರ ಪ್ರದೇಶ ಚುನಾವಣೆ:
ಉತ್ತರ ಪ್ರದೇಶ ಚುನಾವಣೆ 7 ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಯುಪಿ ಚುನಾವಣೆ ಆರಂಭಗೊಂಡಿದೆ. ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಯುಪಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿದೆ ಸರ್ಕಾರ ರಚಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಯೋಗಿ ಸರ್ಕಾರದ ಅವಧಿ 14 ಮೇ 2022ಕ್ಕೆ ಅಂತ್ಯಗೊಳ್ಳಲಿದೆ. ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿದ್ದರೆ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ಇತರ ಪಕ್ಷಗಳು ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

click me!