ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ಜಾಮೀನು
ಮಂಗಳವಾರ ಜೈಲಿನಿಂದ ಬಿಡುಗಡೆಯಾದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಿಂದ ಮಂಜೂರಾಗಿದ್ದ ಜಾಮೀನು
ಲಕ್ನೋ (ಫೆ.15): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ (Lakhimpur Kheri case) ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ (Union Minister Ajay Kumar Mishra ) ಅವರ ಪುತ್ರ ಆಶಿಶ್ ಮಿಶ್ರಾಗೆ (Ashish Mishra) ಜಾಮೀನು ದೊರೆತ ಐದು ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆಯಾಗಿ 129 ದಿನಗಳ ಕಾಲ ಜೈಲು ವಾಸ ಮಾಡಿದ್ದ ಆಶಿಶ್ ಮಿಶ್ರಾ ಅವರನ್ನು ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರ ಖೇರಿಯ ಟಿಕುನಿಯಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು.
ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾತ್ಮಕ ವಾಗ್ವಾದದ ನಡುವೆ ನಾಲ್ವರು ರೈತರನ್ನು ಕೊಂದ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಅವರ ಬಂಧನವಾಗಿತ್ತು. ರೈತರ ಆಂದೋಲನದ ವೇಳೆ ಟಿಕುನಿಯಾದಲ್ಲಿ ಈ ಘಟನೆ ನಡೆದಿತ್ತು. ಲಖಿಂಪುರ ಖೇರಿ ಜೈಲು ಅಧೀಕ್ಷಕ ಪಿ ಪಿ ಸಿಂಗ್ (Lakhimpur Kheri Jail Superintendent P P Singh) ಪ್ರಕಾರ, ಅಲಹಾಬಾದ್ ಹೈಕೋರ್ಟ್ ಉಚ್ಚರಿಸಲಾದ ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ ಮಿಶ್ರಾ ಅವರನ್ನು ಬಿಡುಗಡೆ ಮಾಡಲಾಗಿದೆ.
ನ್ಯಾಯಾಲಯದ ಲಕ್ನೋ ಪೀಠವು (Lucknow bench) ಕಳೆದ ವಾರ ಅವರಿಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶದಲ್ಲಿ 'ಅಚಾತುರ್ಯದಿಂದ' ಉಲ್ಲೇಖಿಸದಿರುವ ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಅಪರಾಧ ಸಂಚು)ಗಳನ್ನು ಸೇರಿಸಬೇಕೆಂದು ಮಿಶ್ರಾ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಲೋಪದಿಂದಾಗಿ ಜೈಲು ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದರು.
Ashish Mishra, son of MoS Home Ajay Mishra Teni, accused in the Lakhimpur Kheri violence case released on bail pic.twitter.com/11f2CmyFCc
— ANI (@ANI)
ಮಿಶ್ರಾ ಜೈಲಿನಿಂದ ಹೊರಬರುವ ಮತ್ತು ವಾಹನವನ್ನು ಪ್ರವೇಶಿಸುವ ದೃಶ್ಯಗಳನ್ನು ಆನ್ ಲೈನ್ ನಲ್ಲಿ ಪ್ರಸಾರವಾಗಿವೆ. ಕೆಲ ಚಿತ್ರಗಳಲ್ಲ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ, ಪುತ್ರನನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಆಗಮಿಸುತ್ತಿರುವ ದೃಶ್ಯವೂ ಪ್ರಸಾರವಾಗಿದೆ.
Lakhimpur Kheri Violence: 124 ದಿನಗಳ ಬಳಿಕ ಆಶಿಶ್ ಮಿಶ್ರಾ ಜೈಲಿನಿಂದ ಹೊರಕ್ಕೆ!
ಅಕ್ಟೋಬರ್ 3 ರಂದು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಲಖಿಂಪುರ ಖೇರಿ ಪ್ರವಾಸದಲ್ಲಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಬನ್ವೀರ್‌ಪುರ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ ಅವರು ಭಾಗವಹಿಸಬೇಕಿತ್ತು. ಉಪ ಮುಖ್ಯಮಂತ್ರಿ ಮೌರ್ಯ ಅವರನ್ನು ಬರಮಾಡಿಕೊಳ್ಳಲು ಮೂರು ವಾಹನಗಳು ಬನ್‌ವೀರ್‌ಪುರದಿಂದ ಹೊರಬಂದವು. ಆದರೆ ದಾರಿ ಮಧ್ಯೆ ಟಿಕುನಿಯಾ ಗ್ರಾಮದಲ್ಲಿ ರೈತರು ಪ್ರತಿಭಟನೆ ಆರಂಭಿಸಿದರು. ನಂತರ ರೈತರೊಂದಿಗೆ ವಾಗ್ವಾದ ನಡೆಯಿತು. ಆಶಿಶ್ ಮಿಶ್ರಾ ತಮ್ಮ ಥಾರ್ ಜೀಪ್ ಅನ್ನು ರೈತರ ಮೇಲೆ ಏರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ 4 ರೈತರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ನಂತರ 3 ಬಿಜೆಪಿ ಕಾರ್ಯಕರ್ತರು ಮತ್ತು 1 ಪತ್ರಕರ್ತ ಸಾವನ್ನಪ್ಪಿದರು.
Lakhimpur Violence: ಪುತ್ರನ ಪುಂಡಾಟ, ಕೇಂದ್ರ ಸಚಿವರಿಗೆ ಮತ್ತಷ್ಟು ಕಂಟಕ!
ಲಖೀಂಪುರ ಖೇರಿ ಹಿಂಸಾಚಾರ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಪ್ರತಿಭಟನಾಕಾರರ ರೈತರ ಹತ್ಯೆಗೆ ಯೋಜಿತ ಸಂಚು ನಡೆದಿದೆ ಎಂದು ಹೇಳಿದೆ. ಪ್ರಕರಣದ ಪ್ರಮುಖ ಆರೋಪಿ ಮಿಶ್ರಾ ಅವರನ್ನು ಕಳೆದ ವರ್ಷ ಅಕ್ಟೋಬರ್ 9 ರಂದು ಎಸ್‌ಐಟಿ "ವಿಚಾರಣೆಗೆ ಸಹಕರಿಸದ" ಮತ್ತು ಪ್ರಶ್ನೆಗಳಿಗೆ ಉತ್ತರಿಸದ ಕಾರಣ ಬಂಧಿಸಿತ್ತು. ಅವರು ಮತ್ತು ಇತರ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸುವವರೆಗೂ ಯುಪಿ ಪೊಲೀಸರು ಆಶಿಶ್ ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ.