ಡಿಐಜಿ ಸಂಜೀವ್ ಶುಕ್ಲಾ ಅಮಾನತು: ವರ್ಗಾವಣೆ ವಿರುದ್ಧ ಧ್ವನಿ ಎತ್ತಿದ್ಧ ಅಧಿಕಾರಿ!

By Suvarna NewsFirst Published Aug 8, 2021, 4:08 PM IST
Highlights

* ಅಧಿಕಾರಶಾಹಿ ವಿರುದ್ಧ ಧ್ವನಿ ಎತ್ತಿದ್ದೇ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಮುಳುವಾಯ್ತು 

* ಸಂಜೀವ್ ಕುಮಾರ್ ಶುಕ್ಲಾ ಅಮಾನತು

* ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ವರ್ಗಾವಣೆ ವಿರುದ್ಧ ಧ್ವನಿ ಎತ್ತಿದ್ದ ಶುಕ್ಲಾ

ಲಕ್ನೋ(ಆ.08): ಯುಪಿಯ ಅಧಿಕಾರಶಾಹಿ ವಿರುದ್ಧ ಧ್ವನಿ ಎತ್ತಿದ್ದೇ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಮುಳುವಾಗಿದೆ. ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ವರ್ಗಾವಣೆ ಬಗ್ಗೆ ಧ್ವನಿ ಎತ್ತಿದ್ದ ಝಾನ್ಸಿ-ಬುಂದೇಲ್‌ಖಂಡ್‌ನ ಡಿಐಜಿ ಗೃಹರಕ್ಷಕರು ಸಂಜೀವ್ ಕುಮಾರ್ ಶುಕ್ಲಾ ಅವರನ್ನು ಅಮಾನತುಗೊಳಿಸಲಾಗಿದೆ.

ಯುಪಿ ಸರ್ಕಾರದ ಗೃಹ ಇಲಾಖೆಯು ಡಿಐಜಿ ಗೃಹರಕ್ಷಕ ದಳದ, ಝಾನ್ಸಿ (ಬುಂದೇಲ್‌ಖಂಡ್) ಸಂಜೀವ್ ಕುಮಾರ್ ಶುಕ್ಲಾ ಅವರನ್ನು ಅಮಾನತುಗೊಳಿಸಲು ಆದೇಶಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹರಕ್ಷಕ ದಳ ಅನಿಲ್ ಕುಮಾರ್, ನೀತಿ ನಿಯಮಗಳ ಅಡಿಯಲ್ಲಿ, ಡಿಐಜಿ ಸಂಜೀವ್ ಕುಮಾರ್ ಶುಕ್ಲಾ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಯುಪಿಯಲ್ಲಿ ಗೃಹ ರಕ್ಷಕರ ಜಿಲ್ಲಾ ಕಮಾಂಡೆಂಟ್‌ಗಳನ್ನು ಜೂನ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ವರ್ಗಾಯಿಸಲಾಯಿತು. ಡಿಐಜಿ ಸಂಜೀವ್ ಕುಮಾರ್ ಶುಕ್ಲಾ ಅವರು ಈ ವರ್ಗಾವಣೆಯ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಗೃಹ ರಕ್ಷಕ ದಳದ ಅಧಿಕಾರಿಗಳ ಗುಂಪಿನಲ್ಲಿ ಡಿಐಜಿ ಶುಕ್ಲಾ ಕೂಡ ಸಂದೇಶವನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಿವಿಧ ಅಧಿಕಾರಿಗಳು ಅವರನ್ನು ಕರೆದು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ ಎಂದು ಹೇಳಲಾಗಿದೆ.

ಡಿಐಜಿ ಸಂಜೀವ್ ಕುಮಾರ್ ಶುಕ್ಲಾ ಅಧಿಕಾರಿಗಳನ್ನು ಪ್ರಚೋದಿಸಲು ಯತ್ನಿಸಿದ್ದಾರೆ ಎಂದು ಗೃಹ ಇಲಾಖೆ ಹೇಳಿದೆ. ಡಿಐಜಿ ಕೂಡ ವರ್ಗಾವಣೆಗೆ ಸಂಬಂಧಿಸಿದಂತೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಡಿಐಜಿ ಶುಕ್ಲಾ ಜಿಲ್ಲೆಗಳಲ್ಲಿ ಅನೇಕ ವರ್ಷಗಳಿಂದ ಜಿಲ್ಲಾ ಕಮಾಂಡೆಂಟ್‌ಗಳ ವಿರುದ್ಧ ಧ್ವನಿ ಎತ್ತಿದ್ದರು.

ಇನ್ನು ಡಿಐಜಿಯನ್ನು ಅಮಾನತುಗೊಳಿಸುವ ಆದೇಶವನ್ನು ಹೊರಡಿಸುವಾಗ, ಗೃಹ ಇಲಾಖೆಯು ಗೃಹರಕ್ಷಕರ ವರ್ಗಾವಣೆಯನ್ನು ಸರ್ಕಾರದ ನಿಯಮಗಳ ಪ್ರಕಾರ ಮಾಡಲಾಗಿದೆ ಎಂದು ಹೇಳಿದೆ. ತನಿಖೆಯಲ್ಲಿ, ಡಿಐಜಿ ನಡವಳಿಕೆ ನಿಯಮಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ ಎನ್ನಲಾಗಿದೆ.

click me!