3ನೇ ಅಲೆ ಎದುರಿಸಲು ಬಿಜೆಪಿಯಿಂದ 4 ಲಕ್ಷ ಆರೋಗ್ಯಕಾರ್ಯಕರ್ತರ ಪಡೆ!

By Suvarna NewsFirst Published Aug 8, 2021, 2:10 PM IST
Highlights

* ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕರ್ತರ ಪಡೆ ರಚನೆಗೆ ಸಿದ್ಧತೆ

* 3ನೇ ಅಲೆ ಎದುರಿಸಲು ಬಿಜೆಪಿಯಿಂದ 4 ಲಕ್ಷ ಆರೋಗ್ಯಕಾರ್ಯಕರ್ತರ ಪಡೆ

ನವದೆಹಲಿ(ಆ.08): ದೇಶಕ್ಕೆ ಕೋವಿಡ್‌ ವೈರಸ್‌ನ 3ನೇ ಅಲೆ ಅಪ್ಪಳಿಸುವ ಭೀತಿಯ ನಡುವೆಯೇ ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕರ್ತರ ಪಡೆಯನ್ನು ಸಿದ್ಧಪಡಿಸಲು ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಆಗಸ್ಟ್‌ ಅಂತ್ಯದ ಒಳಗಾಗಿ 4 ಲಕ್ಷ ಜನರನ್ನು ಆರೋಗ್ಯ ಕಾರ್ಯಕರ್ತರನ್ನಾಗಿ ರೂಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಶನಿವಾರ ತಿಳಿಸಿದ್ದಾರೆ.

ಇಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಕಾರ್ಯಕರ್ತರ ಚಳವಳಿ ಉದ್ಘಾಟಿಸಿ ಮಾತನಾಡಿದ ಚುಗ್‌ು, ‘ಒಟ್ಟು 4 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ 51 ಸಾವಿರ ಆರೋಗ್ಯ ಕಾರ್ಯಕರ್ತರನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೇ ರೂಪುಗೊಳಿಸುವ ಯೋಜನೆ ಹೊಂದಲಾಗಿದೆ. ತನ್ಮೂಲಕ ದೇಶಕ್ಕೆ 3ನೇ ಅಲೆ ಅಪ್ಪಳಿಸಿದರೆ ಅದರ ವಿರುದ್ಧದ ಹೋರಾಟಕ್ಕೆ ಬಿಜೆಪಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸಿದ್ಧವಿರಿಸಿಕೊಂಡಿದೆ’ ಎಂದರು. ಈಗಾಗಲೇ ಪಕ್ಷದ ಆರೋಗ್ಯ ಕಾರ್ಯಕರ್ತರಾಗಲು ದೇಶಾದ್ಯಂತ 1.48 ಲಕ್ಷ ಜನ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.

ದೇಶದ ಪ್ರತೀ ಗ್ರಾಮ ಮತ್ತು ಪಟ್ಟಣಕ್ಕೂ ಭೇಟಿ ನೀಡಲಿರುವ ಬಿಜೆಪಿ ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಿಗೆ ಸೇವೆ ನೀಡಲಿದ್ದಾರೆ. ಈ ಹಿಂದೆಯೂ ವಿಪಕ್ಷಗಳ ನಾಯಕರು ಕೊರೋನಾ ಹೋರಾಟದ ಬಗ್ಗೆ ಅನುಮಾನ ಮತ್ತು ಬಿಜೆಪಿ ನಾಯಕರನ್ನು ದೂರುತ್ತಾ ಸಮಯ ವ್ಯರ್ಥ ಮಾಡಿದ್ದರು. ಆದರೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಜನರ ನೆರವಿನಲ್ಲಿ ಸಕ್ರಿಯರಾಗಿದ್ದರು ಎಂದರು.

click me!