ಉತ್ತರ ಪ್ರದೇಶದ ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ಮಿಷನ್ ಶಕ್ತಿ ಅಭಿಯಾನ| ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಮಿಷನ್ ಶಕ್ತಿ ಅಭಿಯಾನ| ಕಳೆದ ಎರಡು ದಿನದಲ್ಲಿ ಹದಿನಾಲ್ಕು ಅರೋಪಿಗಳಿಗೆ ಗಲ್ಲು ಹಾಗೂ ಇಪ್ಪತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಲಕ್ನೋ(ಅ.20): ಉತ್ತರ ಪ್ರದೇಶದ ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನದಂತೆ ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಮಿಷನ್ ಶಕ್ತಿ ಅಭಿಯಾನದಡಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಕಳೆದ ಎರಡು ದಿನದಲ್ಲಿ ಹದಿನಾಲ್ಕು ಅರೋಪಿಗಳಿಗೆ ಗಲ್ಲು ಹಾಗೂ ಇಪ್ಪತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮುಖ್ಯಮಂತ್ರಿಯವರ ಸೂಚನೆಯನ್ನು ಅನುಸರಿಸಿ, ಪ್ರಾಸಿಕ್ಯೂಷನ್ ನಿರ್ದೇಶನಾಲಯವು ಅತೀ ಶೀಘ್ರವಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ಇದನ್ನು ಮತ್ತಷ್ಟು ತ್ವರಿತಗೊಳಿಸುವುದಾಗಿ ಸಿಎಂ ತಿಳಿಸಿದ್ದಾರೆ.
ಇನ್ನು ಗೃಹ ಸಚಿವ ಅವನೀಶ್ ಕುಮಾರ್ ಈ ಸಂಬಂಧ ಮಾತನಾಡುತ್ತಾ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಮೂಲಕವೇ ಕಾನೂನನ್ನು ಮತ್ತಷ್ಟು ಬಲಪಡಿಸಲು ಸಾಧ್ಯ. ಈ ನಿಟ್ಟಿನಲ್ಲೇ ಹೆಜ್ಜೆ ಇರಿಸಿರುವ ಪ್ರಾಸಿಕ್ಯೂಷನ್ ನಿರ್ದೇಶನಾಲಯ ವಿಶೇಷ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದೆ. 11 ಪ್ರಕರಣಗಳಲ್ಲಿ 14 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದರೆ, 5 ಪ್ರಕರಣಗಳಲ್ಲಿ ಭಾಗಿಯಾದ 11 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ 8 ಪ್ರಕರಣಗಳಲ್ಲಿ ಭಾಗಿಯಾದ 22 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಇಷ್ಟೇ ಅಲ್ಲದೇ ನಿರ್ದೇಶನಾಯಲವು ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ನಡೆಸಿದ್ದ 88 ಪ್ರಕರಣಗಳಲ್ಲಿ ಭಾಗಿಯಾಗಿದ್ದ 117 ಮಂದಿಯ ಜಾಮೀನು ವಜಾಗೊಳಿಸಿದೆ.
undefined
ಶಿಕ್ಷೆ ವಿಧಿಸಿರುವುದರಲ್ಲಿ ಉತ್ತರ ಪ್ರದೇಶ ನಂಬರ್ 1:
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಎಡಿಜಿ ಆಶುತೋಷ್ ಪಾಂಡೇ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ. ನ್ಯಾಯಾಲಯಗಳಲ್ಲಿ ಪ್ರಕರಣದ ವಿಚಾರಣೆ ಅತೀ ಶೀಘ್ರದಲ್ಲೇ ಇತ್ಯರ್ಥವಾಗುತ್ತಿರುವುದೇ ಕಾರಣ ಎಂದಿದ್ದಾರೆ.