ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ
ನವದೆಹಲಿ(ಅ.20) ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
आज शाम 6 बजे राष्ट्र के नाम संदेश दूंगा। आप जरूर जुड़ें।
Will be sharing a message with my fellow citizens at 6 PM this evening.
ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ 'ಇಂದು ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಸಂದೇಶ ನೀಡಲಿದ್ದೇನೆ. ನೀವೂ ತಪ್ಪದೇ ಭಾಗವಹಿಸಿ' ಎಂದು ಮನವಿ ಮಾಡಿದ್ದಾರೆ.
undefined
ಮೋದಿ ಯಾವ ವಿಚಾರವಾಗಿ ಮಾತನಾಡಬಹುದು?
ಈಗಾಗಲೇ ಕೊರೋನಾ ಗರಿಷ್ಠ ಮಟ್ಟಕ್ಕೇರಿ ಇಳಿಯಲಾರಂಭಿಸಿದೆ. ಹೀಗಿರುವಾಗಲೇ ದೇಶದಲ್ಲಿ ಸಾಲು ಸಾಲಾಗಿ ಹಬ್ಬಗಳು ಬರಲಾರಂಭಿಸಿವೆ. ಸಾಲದೆಂಬಂತೆ ಚಳಿಗಾಲವೂ ಆರಂಭವಾಗುತ್ತಿದೆ. ಇನ್ನು ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಕೊರೋನಾ ಲಸಿಕೆ ಫೆಬ್ರವರಿಯಲ್ಲಿ ತಯಾರಾಗಬಹುದೆಂದು ತಿಳಿಸಿದ್ದಾre. ಇಂತಹ ಮಹತ್ತರ ಘಟ್ಟದಲ್ಲಿ ಲಸಿಕೆ ತಯಾರಾಗುವವರೆಗೆ ಜನರು ಅತ್ಯಂತ ಜಾಗರೂಕತೆ ವಹಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ನಾಲ್ಕು ತಿಂಗಳು ಕೊರೋನಾ ಮಾರ್ಗಸೂಚಿಗಳನದ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೈಗಳನ್ನು ಆಗಾಗ ಸ್ವಚ್ಛಗೊಳಿಸುವ ಬಗ್ಗೆ ಮಾತನಾಡಬಹುದೆಂದು ಅಂದಾಜಿಸಲಾಗಿದೆ.
ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜನರು ಕೊಂಚ ಜಾಗ್ರತೆ ತಪ್ಪಿದರೂ ಕೊರೋನಾ ಮಹಾಮಾರಿ ಮತ್ತೆ ಜನರ ಬದುಕನ್ನು ನಿರ್ನಾಮ ಮಾಡಲಿದೆ.