Lord Krishna Muslim Devotee ಮಥುರಾದ ಶ್ರೀಕೃಷ್ಣ ಭಕ್ತ ಸೈಯದ್ ಇಬ್ರಾಹಿಂ ಸಮಾಧಿಗೆ ಯೋಗಿ ಆದಿತ್ಯನಾಥ್ ಭೇಟಿ!

By Suvarna NewsFirst Published Jun 8, 2022, 5:28 PM IST
Highlights
  • ಭಕ್ತಿಗೆ ಜಾತಿ, ಧರ್ಮ ಇಲ್ಲ ಎಂದ ಸಿಎಂ ಯೋಗಿ
  • ಪ್ರವಾದಿ ನಿಂದನೆ ಧರ್ಮ ಸಂಘರ್ಷದ ನಡುವೆ ಯೋಗಿ ದಿಟ್ಟ ನಡೆ
  • ಸಮಾಧಿ ಬಳಿ ಕಾರ್ಯಕ್ರಮ ಆಯೋಜಲು ಯೋಗಿ ಸೂಚನೆ

ಮಥುರಾ(ಜೂ.08): ಮಥುರಾ ನಗರ ಶ್ರೀಕೃಷ್ಣ ನಗರ ಎಂದೇ ಪ್ರಖ್ಯಾತಿ. ಕೃಷ್ಣ ಹುಟ್ಟಿದ ಸ್ಥಳವಿದು. ಇತರ ಧರ್ಮದ ಹಲವರು ಇಲ್ಲಿ ಶ್ರೀಕೃಷ್ಣ ಆರಾಧಕರಾಗಿದ್ದಾರೆ. ಹೀಗೆ ಶ್ರೀಕೃಷ್ಣ ಭಕ್ತಿ ಪರಾಕಾಷ್ಠೆ ಮೆರೆದೆ ಮುಸ್ಲಿಮ್ ಭಕ್ತ ಸೈಯದ್ ಇಬ್ರಾಹಿಂ ಖಾನ್ ಸಮಾದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದಾರೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆಯಿಂದ ಸೃಷ್ಟಿಯಾಗಿರುವ ಧರ್ಮ ಸಂಘರ್ಷದ ನಡುವೆ ಯೋಗಿ ಆದಿತ್ಯನಾಥ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಧರ್ಮ-ಧರ್ಮದೊಳಗಿನ ಸಂಘರ್ಷ ತಗ್ಗಿಸಿ ಸೌಹಾರ್ಧತೆ ಬೆಳೆಯಲು ಯೋಗಿ ಆದಿತ್ಯನಾಥ್ ಶ್ರೀಕೃಷ್ಣನ ಮುಸ್ಲಿಮ್ ಭಕ್ತನ ಸಮಾಧಿಗೆ ಭೇಟಿ ನೀಡಿದ್ದಾರೆ. ಇಷ್ಟೇ ಅಲ್ಲ ಸಮಾಧಿ ಬಳಿ ಪ್ರತಿ ವಾರ ವಿವಿಧ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ್ದಾರೆ.

ಅಯೋಧ್ಯೆ, ಮಥುರಾ ಸುತ್ತ ಎಣ್ಣೆ ಬ್ಯಾನ್‌: ಮದ್ಯ ಮಾರಿದ್ದು ಸಾಕು ಹಾಲು ಮಾರಿ ಅಂದ ಯೋಗಿ

ಸೈಯದ್ ಇಬ್ರಾಹಿಂ ಖಾನ್ ಉತ್ತರ ಪ್ರದೇಶದ ಪ್ರಸಿದ್ಧ ಸೂಫಿ ಕವಿಯಾಗಿದ್ದಾರೆ. ರಕ್ಷಣ್ ಹೆಸರಿನಲ್ಲಿ ಶ್ರೀಕೃಷ್ಣನ ಆರಾಧಿಸಿದ್ದಾರೆ. ಇವರ ಹಲವು ಕವಿತೆಗಳು ಭಕ್ತಿ ಗೀತೆಗಳಾಗಿ ಬಿಡುಗಡೆಯಾಗಿದೆ. ಸೈಯದ್ ಇಬ್ರಾಹಿಂ ಬರೆದಿರುವ ಬಹುತೇಕ ಕವಿತೆಗಳು ಹಾಗೂ ಹಾಡುಗಳು ಶ್ರೀಕೃಷ್ಣ ಕುರಿತಾಗಿದೆ. ಶ್ರೀಕೃಷ್ಣನ ಭಕ್ತನಾಗಿ ಭಕ್ತಿಯೋಗ ಆರಂಭಿಸಿದ್ದರು. ಮಥುರಾದ ವೃಂದಾನವನದಲ್ಲೇ ತಮ್ಮ ಬಹುಕಾಲವನ್ನು ಕಳೆದಿದ್ದರು. ಶ್ರೀಕೃಷ್ಣ ವಿಶ್ವ ಕುಲಕ್ಕೆ ದೇವರು ಎಂದಿದ್ದ,  ಸೈಯದ್ ಇಬ್ರಾಹಿಂ ಕೊನೆಗೆ ತಾನು ವೈಷ್ಣವ ಎಂದು ಹೇಳಿಕೊಂಡಿದ್ದರು.

ಎರಡು ದಿನ ಮಥುರಾ ಪ್ರವಾಸದಲ್ಲಿರುವ ಯೋಗಿ ಆದಿತ್ಯನಾಥ್ ಇಂದು ಶ್ರೀಕೃಷ್ಣ ಭಕ್ತ ಸೈಯದ್ ಇಬ್ರಾಹಿಂ ಖಾನ್ ಸಮಾಧಿಗೆ ಭೇಟಿ ನೀಡಿದರು. ಈ ವೇಳೆ ಸೈಯದ್ ಸಮಾಧಿಯನ್ನು ನವೀಕರಿಸಿ ಭಕ್ತರ ದರ್ಶನಕ್ಕೆ ಅನೂಕೂಲ ಮಾಡಿರುವ ಬ್ರಜ್ ವಿಕಾಸ್ ಪರಿಷದ್‌ಗೆ ಯೋಗಿ ಆದಿತ್ಯನಾಥ್ ಧನ್ಯವಾದ ಹೇಳಿದ್ದಾರೆ. ಮಥುರಾ ಬೇಟಿಯಲ್ಲಿ ಯೋಗಿ ಆದಿತ್ಯನಾಥ್ ಮಥುರಾ ಕೃಷ್ಣ ಜನ್ಮಸ್ಥಾನ ಮಂದಿರ, ಬಾನ್ಕೆ ಬಿಹಾರಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

ಮಸೀದಿಯಿಂದ ತೆರವುಗೊಳಿಸಿದ ಲೌಡ್‌ ಸ್ಪೀಕರ್‌ ಶಾಲೆಗೆ ದಾನ!

ಇತ್ತೀಚೆಗೆ ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮಂದಿರದ ಗರ್ಭಗುಡಿಗೆ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ ನೇರವೇರಿಸಿದ್ದರು. ದೇಗುಲದ 2ನೇ ಹಂತದ ನಿರ್ಮಾಣ ಕಾರ್ಯಕ್ಕೂ ಅವರು ಇದೇ ವೇಳೆ ಚಾಲನೆ ನೀಡಿದ್ದರು. 2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ನಂತರ ಮಂದಿರದ ತಳಪಾಯ ನಿರ್ಮಾಣ ಕಾರ್ಯ ನಡೆದಿತ್ತು. ಅದು ಈಗ ಪೂರ್ಣಗೊಳ್ಳುವ ಮೂಲಕ 1ನೇ ಹಂತದ ಕಾಮಗಾರಿಗಳು ಮುಗಿದಿವೆ. ಈಗ ಗರ್ಭಗುಡಿಯ ನಿರ್ಮಾಣದ ಜೊತೆಗೇ ದೇಗುಲದ ಕಟ್ಟಡ ನಿರ್ಮಾಣ ಕಾರ್ಯಗಳೂ ಆರಂಭಗೊಳ್ಳಲಿವೆ. 2014ರ ಲೋಕಸಭೆ ಚುನಾವಣೆಗೂ ಮುನ್ನ ಗರ್ಭಗುಡಿ ಹಾಗೂ ಕಟ್ಟಡದ ಒಂದು ಹಂತವನ್ನು ಪೂರ್ಣಗೊಳಿಸಿ ಭಕ್ತಾದಿಗಳಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಗರ್ಭಗುಡಿಯ ಶಿಲಾನ್ಯಾಸದ ನಂತರ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ‘ಇದು ದಾಳಿಕೋರರ ವಿರುದ್ಧ ನಾವು ಸಾಧಿಸಿರುವ ಜಯ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಗಳಿಗೆ. ಜನರ ನಂಬಿಕೆಯ ಮೇಲೆ ಈ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ಇದು ರಾಷ್ಟ್ರೀಯ ಮಂದಿರವಾಗಲಿದೆ. ವಿದೇಶಿ ದಾಳಿಕೋರರಿಂದ ಹಿಂದೂ ಆಸ್ತಿಕರು ಅನುಭವಿಸಿದ 500 ವರ್ಷಗಳ ನೋವು ಈಗ ಶಮನವಾಗಿದೆ. ಸತ್ಯಮೇವ ಜಯತೇ ಎಂಬುದು ಮತ್ತೆ ಸಾಬೀತಾಗಿದೆ. ಧರ್ಮ, ಸತ್ಯ ಮತ್ತು ನ್ಯಾಯದ ದಾರಿಯಲ್ಲೇ ಭಾರತೀಯರಿಗೆ ಈ ಜಯ ಸಿಕ್ಕಿದೆ’ ಎಂದು ಹೇಳಿದರು.
 

click me!