ಯಾರ ಸರ್ಕಾರ ಗೊತ್ತಾ? ಐ ಲವ್ ಮೊಹಮ್ಮದ್ ಪ್ರತಿಭಟನೆಯ ಮೌಲ್ವಿ ವಿರುದ್ಧ ನುಗ್ಗಿದ ಯೋಗಿ ಬುಲ್ಡೋಜರ್

Published : Sep 30, 2025, 07:58 PM IST
bulldozer action

ಸಾರಾಂಶ

ಯಾರ ಸರ್ಕಾರ ಗೊತ್ತಾ? ಯೋಗಿ ವಾರ್ನಿಂಗ್ ಬೆನ್ನಲ್ಲೇ ಮೌಲನಾ ವಿರುದ್ಧ ಬುಲ್ಡೋಜರ್ ಘರ್ಜನೆಯಾಗಿದೆ. ಐ ಲವ್ ಮೊಹಮ್ಮದ್ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ ಆರೋಪ ಎದುರಿಸುತ್ತಿರುವ ಮೌಲನಾ ಮೊಹ್ಸಿನ್ ರಾಜಾ ಅಕ್ರಮ ಕಟ್ಟಡಗಳು ಧ್ವಂಸಗೊಂಡಿದೆ.

ಬರೇಲಿ (ಸೆ.30) ಭಾರತದಲ್ಲಿ ಇತ್ತೀಚೆಗೆ ಐ ಲವ್ ಮೊಹಮ್ಮದ್ ಭಾರಿ ಟ್ರೆಂಡ್ ಆಗಿತ್ತು. ಈ ಟ್ರೆಂಡ್ ಏನು ಎಂದು ತಿಳಿದುಕೊಳ್ಳುವ ಮುಂಚೆ ಅಭಿಯಾನ ಮುದುಡಿತ್ತು. ಸೆಪ್ಟೆಂಬರ್ 26ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಪ್ರತಿಭಟನೆ ಕಾವು ಪಡೆದಿತ್ತು. ಪ್ಲಕಾರ್ಡ್ ಹಿಡಿದು ಕಲ್ಲೂ ತೂರಾಟ, ಹಿಂಸಾಚಾರ ನಡೆಸಿದ್ದರು. ಹಲವು ಪೊಲೀಸರು ಗಾಯಗೊಂಡಿದ್ದರು. ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿತ್ತು. ಏಕಾಏಕಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿತ್ತು. ಈ ಪ್ರತಿಭಟನೆಗೆ ಪ್ರಚೋದನೆ ನೀಡಿದ, ಬೆಂಬಲಿಸಿದ ಅಲಾ ಹಜ್ರತ್ ದರ್ಗಾ ಮೌಲನಾ ಮೊಹ್ಸಿನ್ ರಾಜಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರತಿಭಟನೆ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರದಲ್ಲಿರುವುದು ಯಾರು ಎಂದು ಗೊತ್ತಾ ಎಂದು ಮಹತ್ವದ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಅರೆಸ್ಟ್ ಆಗಿರುವ ಮೌಲಾನ ಮೊಹ್ಸಿನ್ ಕಟ್ಟಡಗಳ ಮೇಲೆ ಯುಪಿ ಬುಲ್ಡೋಜರ್ ಘರ್ಜಿಸಿದೆ.

ಮೌಲನಾ ಮೊಹ್ಸಿನ್ ಅಕ್ರಮ ಕಟ್ಟಡಗಳು, ಮನೆಗಳ ಮೇಲೆ ಬುಲ್ಡೋಜರ್ ನುಗ್ಗಿದೆ. ಕಟ್ಟಡಗಳು ಧ್ವಂಸಗೊಳಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಬಿಗಿ ಭದ್ರತೆಯಲ್ಲಿ ಯುಪಿ ಪೊಲೀಸರು ಬುಲ್ಡೋಜರ್ ನುಗ್ಗಿಸಿದ್ದಾರೆ.

ಯೋಗಿ ಆದಿತ್ಯನಾಥ್ ಎಚ್ಚರಿಕೆ

ಭಾರತದಲ್ಲಿ ಏಕಾಏಕಿ ಐ ಲವ್ ಮೊಹಮ್ಮದ್ ಟ್ರೆಂಡ್ ಆಗಿತ್ತು. ಎಲ್ಲರು ಐ ಲವ್ ಮೊಹಮ್ಮದ್ ಎಂದು ಪ್ಲಕಾರ್ಡ್ ಹಿಡಿದು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆ ಕಾವು ಪಡೆದುಕೊಂಡ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಹಿಂದೂ ಹಬ್ಬಗಳು, ಧಾರ್ಮಿಕ ಆಚರಣೆಗಳು ಬಂದಾಗ, ಕಲ್ಲು ತೂರಾಟ, ಹಿಂಸಾಚಾರ ನಡೆಯುತ್ತದೆ. ಕೆಲವರಿಗೆ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಿದಲ್ಲಿದೆ ಅನ್ನೋದು ಗೊತ್ತಿದೆಯಾ? ಕೆಲವರಿಗೆ ಡೆಂಟಿಂಗ್ ಹಾಗೂ ಪೈಟಿಂಗ್ ಆಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು.

 

 

ಕೆಲವರು ಇಡೀ ಸಮಾಜವನ್ನು ಆತಂಕದಲ್ಲಿಡಲು, ತಮ್ಮ ಗುರಿಸಾಧನೆಗೆ ಬಳಸಿಕೊಳ್ಳವು ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿನ ಶಾಂತಿ ಕದಡುವುದು, ನಿಯಮ ಉಲ್ಲಂಘಿಸಿದರೆ ಇದು ಯಾವ ಸರ್ಕಾರ ಎಂದು ಗೊತ್ತಿರಲಿ. ಒಂದು ತಿಳಿದುಕೊಳ್ಳಿ, ನಾವು ನಿಮಗೆ ಹತ್ತು ಪಟ್ಟು ತಯಾರಾಗಿದ್ದೇವೆ. ಎಲ್ಲವನ್ನೂ ನಿಭಾಯಿಸುತ್ತೇವೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

56ಕ್ಕೂ ಹೆಚ್ಚು ಮಂದಿ ಅರೆಸ್ಟ್

ಕಲ್ಲುತೂರಾಟ ಸೇರಿದಂತೆ ಹಿಂಸಾಚಾರದ ಪ್ರತಿಭಟನೆ ನಡೆಸಿದ 56ಕ್ಕೂ ಹೆಚ್ಚು ಮಂದಿಯನ್ನು ಉತ್ತರ ಪ್ರದೇಶ ಸರ್ಕಾರ ಬಂಧಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್