ಬಾಬರ್ ರಸ್ತೆ ಹೆಸರು ಅಳಿಸಿ, 5 ಆಗಸ್ಟ್ ಎಂದು ಮರುನಾಮಕರಣ ಮಾಡಿದ ಮಾಜಿ ಕೇಂದ್ರ ಸಚಿವ!

Published : Aug 05, 2020, 05:46 PM ISTUpdated : Aug 05, 2020, 05:49 PM IST
ಬಾಬರ್ ರಸ್ತೆ ಹೆಸರು ಅಳಿಸಿ, 5 ಆಗಸ್ಟ್ ಎಂದು ಮರುನಾಮಕರಣ ಮಾಡಿದ ಮಾಜಿ ಕೇಂದ್ರ ಸಚಿವ!

ಸಾರಾಂಶ

ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಈ ಸ್ಥಳ ರಾಮನಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಶತಮಾನಗಳ ವಿವಾದ ಬಗೆ ಹರಿದಿತ್ತು. ಇದೀಗ ಶ್ರೀ ರಾಮನಿಗೆ ಭವ್ಯ ಮಂದಿರವೊಂದು ನಿರ್ಮಾಣವಾಗುತ್ತಿದೆ. ಭೂಮಿ ಪೂಜೆಗೂ ಮುನ್ನ ಬಾಬರ್ ರಸ್ತೆಯನ್ನು ಕೇಂದ್ರ ಮಾಜಿ ಸಚಿವರೊಬ್ಬರು ಅಳಿಸಿ ಹಾಕಿದ್ದಾರೆ. ಇಷ್ಟೇ ಅಲ್ಲ ಹೊಸ ಹೆಸರಿಡಲು ಕೇಂದ್ರಕ್ಕೆ ಆಗ್ರಹಿಸಿದ್ದಾರೆ.

ನವೆದೆಹಲಿ(ಆ.05): ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ದೇಶದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಶತ ಶತಮಾನಗಳ ಹೋರಾಟದ ಫಲವಾಗಿ ಇದೀಗ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಗೂ ಮುನ್ನ ಬಾಬರ್ ರಸ್ತೆಯನ್ನು ಅಳಿಸಿ ಹಾಕಲಾಗಿದೆ. ಇಷ್ಟೇ ಅಲ್ಲ ಈ ರಸ್ತೆಯನ್ನು 5 ಆಗಸ್ಟ್ ಎಂದು ಮರು ನಾಮಕರಣ ಮಾಡಲು ಕೇಂದ್ರ ಮಾಜಿ ಸಚಿವ ವಿಜಯ್ ಗೋಯಲ್ ಆಗ್ರಹಿಸಿದ್ದಾರೆ. 

 ನರೇಂದ್ರ ಮೋದಿ, ರಾಮ ಜನ್ಮಭೂಮಿಗೆ ಭೇಟಿ ಕೊಟ್ಟ ದೇಶದ ಮೊದಲ ಪ್ರಧಾನ ಮಂತ್ರಿ

ಕೇಂದ್ರ ದೆಹಲಿ ಬಂಗಾಳಿ ಮಾರುಕಟ್ಟೆ ಸಮೀಪದಲ್ಲಿ ಬಾಬರ್ ರಸ್ತೆ ಇದೆ. ಭೂಮಿ ಪೂಜೆಗೂ ಮುನ್ನ ವಿಜಯ್ ಗೋಯಲ್  ರಸ್ತೆಗೆ ಹಾಕಲಾಗಿದ್ದ ಫಲಕದಲ್ಲಿ ಬಾಬರ್ ರಸ್ತೆಯನ್ನು ಅಳಿಸಿ ಹಾಕಿದ್ದಾರೆ. ಇಷ್ಟೇ ಅಲ್ಲ ರಾಮ ಮಂದಿರ ಭೂಮಿ ಪೂಜೆ ನೇರವೇರುತ್ತಿರುವ ದಿನನ್ನೇ ಹೆಸರಾಗಿಡಲು ಆಗ್ರಹಿಸಿದ್ದಾರೆ.  ಬಾಬರ್ ರಸ್ತೆ ಬದಲು ಆಗಸ್ಟ್ 5 ರಸ್ತೆ ಎಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಬಾಬರ್ ದಾಳಿಕೋರ, ಭಾರತದ ಹಲವು ದೇವಾಲಯಗಳನ್ನು ನಾಶ ಪಡಿಸಿದ್ದಾನೆ. ರಾಮ ಮಂದಿರ ನಾಶ ಮಾಡಿ ಬಾಬ್ರಿ ಮಸೀದಿ ಕಟ್ಟಿದ್ದಾನೆ. ಇದೀಗ ಎಲ್ಲಾ ಸಮಸ್ಯೆಗಳು ಬಗೆ ಹರಿದು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೀಗಾಗಿ ಬಾಬರ್ ರಸ್ತೆ ಇನ್ನೂ ಇರುವುದು ಸರಿಯಲ್ಲ ಎಂದು ವಿಜಯ್ ಗೋಯೆಲ್ ಹೇಳಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನಿಮಿತ್ತ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿತ್ತು. ಆದರೆ  ವಿಜಯ್ ಗೋಯೆಲ್ ಬಾಬರ್ ರಸ್ತೆಗೆ ತೆರಳಿ ನಾಮಫಲಕದಲ್ಲಿ ಬಾಬರ್ ರಸ್ತೆಗೆ ಅಳಿಸಿ, ಅದರ ಕೆಳಗೆ 5 ಆಗಸ್ಟ್ ರೋಡ್ ಎಂದು ಬರೆದಿದ್ದಾರೆ. ಕಳೆದ ವರ್ಷ ಇದೇ ಬಾಬರ್ ರಸ್ತೆ ನಾಮಫಲಕಕ್ಕೆ ಹಿಂದೂ ಸೇನೆ ಮಸಿ ಬಳಿದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್