ನರೇಂದ್ರ ಮೋದಿ, ರಾಮ ಜನ್ಮಭೂಮಿಗೆ ಭೇಟಿ ಕೊಟ್ಟ ದೇಶದ ಮೊದಲ ಪ್ರಧಾನ ಮಂತ್ರಿ!

By Suvarna News  |  First Published Aug 5, 2020, 5:38 PM IST

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮೋದಿ| ಭವ್ಯ ರಾಮ ಮಂದಿರಕ್ಕೆ ಮೋದಿ ಭೂಮಿ ಪೂಜೆ, ಶಿಲಾನ್ಯಾಸ| ಅಯೋಧ್ಯೆಗೆ, ರಾಮ ಜನ್ಮಭೂಮಿಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ ಮೋದಿ


ಅಯೋಧ್ಯೆ(ಆ.05) ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ, ಆಗಸ್ಟ್ 5 ರಂದು ಅಯೋಧ್ಯೆಯ ಹನುಮಾನ್ ಗಢಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ರಾಮ ಮಂದಿರದ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ಅವರು ಈ ದೇಗುಲಕ್ಕೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲದೇ ರಾಮ ಜನ್ಮಭೂಮಿಗೂ ಹೆಜ್ಜೆ ಇಟ್ಟ ಮೊದಲ ಪಿಎಂ ಎನಿಸಿಕೊಂಡಿದ್ದಾರೆ.

'ಅಂದೇ ಅಲ್ಲೊಂದು ಮಂದಿರ ಕಟ್ಟಿದ್ದೆವು, ಆ ಸಂಭ್ರಮ ಹೇಗೆ ಮರೆಯಲಿ!'

Tap to resize

Latest Videos

ಹನುಮಾನ್ ಗಢಿಯ ಪ್ರಧಾನ ಅರ್ಚಕ ಶ್ರೀ ಗದ್ಧೀನ್‌ಶೀನ್ ಪ್ರೇಮ್‌ದಾಸ್‌ಜೀ ಮಹರಾಜ್ ಈ ಕುರಿತು ಮಾತನಾಡುತ್ತಾ ಪಿಎಂ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದು,ಬಹಳ ಹೆಮ್ಮೆಯ ಕ್ಷಣ ಎಂದಿದ್ದಾರೆ. ಹನುಮಾನ್ ಗಢಿಗೆ ಬೇಟಿ ನೀಡಿದ ಪ್ರಧಾನಿ ಮೋದಿಗೆ ಬೆಳ್ಳಿ ಕಿರೀಟ ಹಾಗೂ ಶ್ರೀರಾಮನ ಎಂದು ಬರೆದಿರುವ ಶಾಲನ್ನು ನೀಡಿ ಗೌರವಿಸಿದ್ದಾರೆ. 

ಸಂಪ್ರದಾಯದಂತೆ ಹನುಮಾನ್ ಗಢಿಗೆ ಮೊದಲು ಭೇಟಿ

ಹನುಮಾನ್ ಗಢಿ ದೇಗುಲದಲ್ಲಿ ಬಾಲ ಆಂಜನೇಯ ಮಾತೆ ಅಂಜನಿಯ ಮಡಿಲಲ್ಲಿ ಕುಳಿತಿರುವ ಪ್ರತಿಮೆ ಇದೆ ಈ ದೇಗುಲವನ್ನು ಸುಮಾರು 10ನೇ ದಶಕದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇಗುಲದ ಪ್ರಮುಖ ಪ್ರತಿಮೆಯ ದರ್ಶನ ಪಡೆಯಬೇಕಾದರೆ 76 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಇನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಹನುಮಾನ್ ಗಢಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಅನುಸರಿಸಿದ್ದಾರೆ. ಶ್ರೀರಾಮನ ಪೂಜೆಗೂ ಮುನ್ನ ಹನುಮಂತನ ಪೂಜೆ ಮಾಡುವುದು ಹಿಂದಿನಿಂದಲೂ ಬಂದ ಪದ್ಧತಿ.

click me!