ರಾಹುಲ್ ಗಾಂಧಿ ದೇಶದ ನಂ.1 ಭಯೋತ್ಪಾದಕ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಇದೀಗ 'ರಾಹುಲ್ ಗಾಂಧಿ ಇನ್ನೂ ಮಗು, ಯಾರ ಕೈಯಲ್ಲಿ ಆಡುತ್ತಿದ್ದರೋ ಗೊತ್ತಿಲ್ಲ' ಎನ್ನುವ ಮೂಲಕ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ನವದೆಹಲಿ (ಸೆ.17): ರಾಹುಲ್ ಗಾಂಧಿ ದೇಶದ ನಂ.1 ಭಯೋತ್ಪಾದಕ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಇದೀಗ 'ರಾಹುಲ್ ಗಾಂಧಿ ಇನ್ನೂ ಮಗು, ಯಾರ ಕೈಯಲ್ಲಿ ಆಡುತ್ತಿದ್ದರೋ ಗೊತ್ತಿಲ್ಲ' ಎನ್ನುವ ಮೂಲಕ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ರಾಹುಲ್ ಗಾಂಧಿ ಸಂಸದರಾಗಿದ್ದು, ಇಂದು ದೇಶದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆದರೂ ಪಪ್ಪು ಪಪ್ಪು ಆಗಿಯೇ ಉಳಿದಿದ್ದಾರೆ. ಪಪ್ಪು ಇನ್ನೂ ಮಗು, ಯಾರ ಕೈಯಲ್ಲಿ ಆಡುತ್ತಿದ್ದಾನೋ ನಮಗೆ ಗೊತ್ತಿಲ್ಲ ಎಂದಿದ್ದಾರೆ.
undefined
ರಾಹುಲ್ ಗಾಂಧಿ ದೇಶದ ನಂ.1 ಭಯೋತ್ಪಾದಕ: ಬಿಜೆಪಿ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕುಟುಂಬ ಸಿಖ್ಖರ ಮೇಲಿನ ದಾಳಿಗೆ ಹೆಸರುವಾಸಿಯಾಗಿದೆ, ಅಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಸಿಖ್ಖರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದವು. ಈಗಲೂ ರಾಹುಲ್ ಗಾಂಧಿ ಆಗಾಗ್ಗೆ ಸಿಖ್ಖರ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ರಾಹುಲ್ ಗಾಂಧಿ ಬಗ್ಗೆ ಈ ಮಾತನ್ನು ಹೇಳಿಲ್ಲ. ಬದಲಿಗೆ, ನಾನು ಸಿಖ್ ಆಗಿರುವುದರಿಂದ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ನನಗೇನೂ ವ್ಯತ್ಯಾಸವಾಗುವುದಿಲ್ಲ. ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.
ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದ ನೋಯ್ಡಾ ಜಿಲ್ಲಾಧಿಕಾರಿ, ಕಾಂಗ್ರೆಸ್ ನಾಯಕರು ಗರಂ!
ಮಲ್ಲಿಕಾರ್ಜುನ ಖರ್ಗೆ ಮೋದಿಗೆ ಪತ್ರ:
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಬಿಜೆಪಿ ಮತ್ತು ನಿಮ್ಮ ಮಿತ್ರಪಕ್ಷಗಳ ನಾಯಕರು ಬಳಸುವ ಹಿಂಸಾತ್ಮಕ ಭಾಷೆ ಭವಿಷ್ಯಕ್ಕೆ ಮಾರಕ ಎಂದು ಬೇಸರದಿಂದ ಹೇಳಬೇಕಾಗಿದೆ. ಕೇಂದ್ರ ಸರ್ಕಾರದ ರೈಲ್ವೇ ಖಾತೆ ರಾಜ್ಯ ಸಚಿವರು, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಸಚಿವರು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ನಂಬರ್ ಒನ್ ಭಯೋತ್ಪಾದಕ ಎಂದು ಕರೆಯುತ್ತಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ರವನೀತ್ ಸಿಂಗ್ ಬಿಟ್ಟು, 'ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸಾಹೇಬರು ನನಗೆ ವಿವರಿಸುವ ಮೊದಲು ತಮ್ಮ ನಾಯಕ ಪಪ್ಪು ಅವರಿಗೆ ವಿವರಿಸಿದರೆ ಉತ್ತಮ, ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರಂತರವಾಗಿ ಅವಮಾನಿಸುತ್ತಾರೆ. ಮೊದಲ ಪ್ರಧಾನಿಗೆ ಗೌರವ ಕೊಡುವುದು ಕಲಿಯಲಿ ಎಂದು ತಿರುಗೇಟು ನೀಡಿದ್ದಾರೆ.