
ನವದೆಹಲಿ(ಜೂ.20): ಕರ್ನಾಟಕ ನೂತನ ಕಾಂಗ್ರೆಸ್ ಸರ್ಕಾರ ಇದೀಗ ತಮ್ಮ ವಿರುದ್ಧ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಫ್ಯಾಕ್ಟ್ ಚೆಕ್ ಪೊಲೀಸ್ ತಂಡ ರಚಿಸಿದೆ. ಆದರೆ ಸರ್ಕಾರ ನಿಯಮ ಮೀರಿ ಜನರ ಮೇಲೆ ಕ್ರಮ ಕೈಗೊಳ್ಳುತ್ತಿದೆ ಅನ್ನೋ ಆರೋಪ ಬಲವಾಗುತ್ತಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಇಬ್ಬಗೆ ನೀತಿಯೂ ಬಹಿರಂಗವಾಗಿದೆ. ಈ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದಾಖಲೆ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸರ್ಕಾರದ ಅಸಲಿಯತ್ತು ಬಹಿರಂಗಪಡಿಸಿದ್ದಾರೆ.
ಕೇಂದ್ರ ಸರ್ಕಾರ ಐಟಿ ನಿಯಮದಡಿಯಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಫ್ಯಾಕ್ಟ್ ಚೆಕ್ ಯುನಿಟ್ ರಚನೆ ಮಾಡಿತ್ತು. ಈ ವೇಳೆ ಕಾಂಗ್ರೆಸ್ ಇದು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಬೊಬ್ಬೆ ಹೊಡೆದಿತ್ತು. ಆದರೆ ಮೋದಿ ಸರ್ಕಾರ ಐಟಿ ನಿಯಮದ ಚೌಕಟ್ಟಿನಲ್ಲಿ ಈ ನಿಯಮ ತರಲಾಗಿತ್ತು. ಕೇವಲ ಸರ್ಕಾರದ ವಿರುದ್ಧ ಹರಡಲಾಗುವ ಸುಳ್ಳುಸುದ್ದಿಗಳನ್ನು ಪರಿಶೀಲನೆ ಮಾಡಲು ಈ ತಂಡ ರಚನೆ ಮಾಡಲಾಗಿತ್ತು. ಆದರೆ ಇದೀಗ ಸಿದ್ದರಾಮಯ್ಯ ಸರ್ಕಾರ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಪೊಲೀಸ್ ತಂಡ ರಚನೆ ಮಾಡಿದೆ. ಪೊಲೀಸ್ ಮೂಲಕ ಸರ್ಕಾರದ ವಿರುದ್ದ ಟೀಕೆ ಮಾಡುವರರನ್ನು ಬೆದರಿಸುವ ತಂತ್ರ ಅನುಸರಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಐಟಿ ತಿದ್ದುಪಡಿ ನಿಯಮಕ್ಕೆ ವಿರೋಧ: ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ; ರಾಜೀವ್ ಚಂದ್ರಶೇಖರ್
ಟ್ವೀಟ್, ಪೋಸ್ಟ್ ನಿಯಂತ್ರಸಲು ಕರ್ನಾಟಕ ಸರ್ಕಾರ ಪೊಲೀಸ್ ಪಡೆಯನ್ನು ಬಳಸಿಕೊಳ್ಳುತ್ತಿದೆ. ಇದು ಕಾನೂನು ಚೌಕಟ್ಟು ಮೀರಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಈ ಕುರಿತ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ಇಬ್ಬಗೆಯ ನೀತಿ, ಕಾಂಗ್ರೆಸ್ ನಡೆಯನ್ನು ಬಟಾಬಯಲು ಮಾಡಿದ್ದಾರೆ.
ಭಾರತ ಸರ್ಕಾರ ಐಟಿ ನಿಯಮದಡಿಯಲ್ಲಿ ಫ್ಯಾಕ್ಟ್ ಚೆಕ್ ಯುನಿಟ್ ತಂದಿದೆ. ಇದು ಸರ್ಕಾರದ ವಿರುದ್ಧ ತಪ್ಪು ಮಾಹಿತಿಯನ್ನು ಹರಡುವುದನ್ನು ನಿಯಂತ್ರಿಸಲು ಹಾಗೂ ಸರ್ಕಾರದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿರುವುದನ್ನು ತಡೆಯಲು ಮಾತ್ರ. ಆದರೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಎಡಿಟರ್ಸ್ ಗಿಲ್ಡ್ ಸೇರಿದಂತೆ ಮಾಧ್ಯಮಗಳು ಇದನ್ನು ಪ್ರಶ್ನಿಸಿತ್ತು. ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ವಿದೇಶಗಳಲ್ಲೂ ಡಂಗುರ ಸಾರಿತ್ತು. 2004 ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರ ಸೆಕ್ಷನ್ 66A ದುರ್ಬಳಕೆ ಮಾಡಿದೆ. ಇದೀಗ ಸಿದ್ದರಾಮಯ್ಯ ತಪ್ಪು ಮಾಹಿತಿಯನ್ನು ಅಪರಾಧೀಕರಿಸಲು ಫ್ಯಾಕ್ಟ್ ಚೆಕ್ ಪೊಲೀಸ್ ತಂಡ ರಚಿಸಿದ್ದಾರೆ. ಆದರೆ ಈಗ ಕಾಂಗ್ರೆಸ್, ಮಿತ್ರ ಪಕ್ಷಗಳು ಎಡ ಮಾಧ್ಯಮಗಳು ಮೌನಕ್ಕೆ ಜಾರಿದೆ ಎಂದು ರಾಜೀವ್ ಚಂದ್ರಶೇಕರ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ನಡೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಮೋದಿ ಸರ್ಕಾರ ಸುಳ್ಳು ಸುದ್ದಿ ನಿಯಂತ್ರಣದಲ್ಲಿ ಸ್ಪಷ್ಟವಾಗಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಪದೇ ಪದೇ ವಾಕ್ ಸ್ವಾತಂತ್ರ್ಯ ಹೇಳಿಕೆ ನೀಡುತ್ತಿದೆ. ಕೇಂದ್ರ ಸರ್ಕಾರ ತಂದಿರುವ ಐಟಿ ನಿಯಮದಡಿ ಫ್ಯಾಕ್ಟ್ ಚೆಕ್ ಯುನಿಟ್, ವವಿವಾದಗಳನ್ನು ನ್ಯಾಯಲಯದಲ್ಲಿ ಪರಿಹರಿಸಲು ಅವಕಾಶ ನೀಡುತ್ತದೆ. ಆದರೆ ಇದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಹೋಗಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ವಾಕ್ ಸ್ವಾತಂತ್ರ್ಯವಿಲ್ಲ ಎಂದು ಡಂಗುರ ಸಾರುತ್ತಾರೆ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಸರ್ಕಾರವನ್ನು ಟೀಕಿಸುವ ವ್ಯಕ್ತಿಗಳ ಮೇಲೆ ಪೊಲೀಸ್ ಪಡೆ ಬಳಸುತ್ತಿದೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯ ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಅಕ್ರಮ ಬಯಲಿಗೆಳೆದ ಪತ್ರಕರ್ತೆ ವಿರುದ್ಧ FIRಗೆ ರಾಜೀವ್ ಚಂದ್ರಶೇಖರ್ ಖಂಡನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ