ಸದನದಲ್ಲಿ ಕಾಂಗ್ರೆಸ್ ಗದ್ದಲ: ಸೋನಿಯಾಗಿಂತ ದೊಡ್ಡದು ಭಾರತದ LAW: ಪ್ರಹ್ಲಾದ್ ಜೋಶಿ

Published : Jul 21, 2022, 02:43 PM IST
ಸದನದಲ್ಲಿ ಕಾಂಗ್ರೆಸ್ ಗದ್ದಲ: ಸೋನಿಯಾಗಿಂತ ದೊಡ್ಡದು ಭಾರತದ LAW: ಪ್ರಹ್ಲಾದ್ ಜೋಶಿ

ಸಾರಾಂಶ

ಸೋನಿಯಾ ಗಾಂಧಿ ಸೂಪರ್ ಹ್ಯೂಮನ್ ಬೀಯಿಂಗಾ..? ಕಾನೂನಿಗಿಂತ ದೊಡ್ಡವರಾ..? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ವಾ..? ಹೀಗೆ ಲೋಕಸಭೆಯಲ್ಲಿಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು. 

ನವದೆಹಲಿ (ಜು.21): ಸೋನಿಯಾ ಗಾಂಧಿ ಸೂಪರ್ ಹ್ಯೂಮನ್ ಬೀಯಿಂಗಾ..? ಕಾನೂನಿಗಿಂತ ದೊಡ್ಡವರಾ..? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ವಾ..? ಹೀಗೆ ಲೋಕಸಭೆಯಲ್ಲಿಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು. 

ಕಾಂಗ್ರೆಸ್ ಸದಸ್ಯರು ಹೀಗೆ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನ ವಿರೋಧಿಸಿ ಮಾತಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಅಸಲಿಗೇ ಇವರಿಗೆ ಏನು ಬೇಕು? ಈಗ ಸೋನಿಯಾ ಗಾಂಧಿ ಪರ ಪ್ರತಿಭಟಿಸುತ್ತಿರುವವರು ನಿನ್ನೆ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿದ್ರು. ಎರಡೂ ಸದನದಗಳ ಸಭಾಧ್ಯಕ್ಷರು ಸ್ವತಃ ಚರ್ಚೆಗೆ ಅವಕಾಶ ನೀಡೋದಾಗಿ ಹಲವು ಬಾರಿ ಭರವಸೆ ನೀಡಿದರು.

ಖರ್ಗೆ, ಪರಂರನ್ನು ಮುಳುಗಿಸಿದ ಸಿದ್ದು ಮುಂದಿನ ಗುರಿ ಡಿಕೆಶಿ: ಪ್ರಹ್ಲಾದ್‌ ಜೋಶಿ

ಆದರೂ ಸಹ ಪ್ರತಿಪಕ್ಷಗಳು ಸುಗಮವಾಗಿ ಸದನ ನಡೆಸಲು ಸಹಕರಿಸುತ್ತಿಲ್ಲ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ, ಅವರು ಚರ್ಚೆಯಲ್ಲಿ ಭಾಗವಹಿಸಬೇಕು. ಕಾನೂನಿನ ಮುಂದೆ ಎಲ್ಲರೂ ಒಂದೇ.  ಕಾಂಗ್ರೆಸ್ ಅಧ್ಯಕ್ಷರೇನು ಸೂಪರ್ ಹ್ಯೂಮನ್ ಬೀಯಿಂಗಾ..?   ಅವರು ಕಾನೂನಿಗಿಂತ ಮೇಲಿದ್ದಾರಾ? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಪ್ರಹ್ಲಾದ ಜೋಶಿ ಕಾಂಗ್ರೆಸ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಸಂಸತ್ ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಕ್ಷದ ವಿರುದ್ಧ  ಟೀಕಾ ಪ್ರಹಾರ ನಡೆಸಿದ್ದಾರೆ.

ಬಾಟ್ಲಾ ಹೌಸ್ ಶೂಟೌಟ್ ನಲ್ಲಿ ಉಗ್ರ ಸತ್ತಾಗ ಸೋನಿಯಾ ಕಣ್ಣೀರು ಹಾಕಿದ್ರಂತೆ: Pralhad Joshi

ಜೈರಾಂ ರಮೇಶ್ ಟ್ವೀಟು-ಜೋಶಿ ತಿರುಗೇಟು: ರಾಜ್ಯಸಭೆ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ, ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್,  ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿ ದರ ಹೆಚ್ಚಳ ಒಮ್ಮತದ ನಿರ್ಧಾರವಲ್ಲ ಅಂತ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ಸುಧೀರ್ಘ ಟ್ವೀಟ್ ಮಾಡಿರುವ ಜೈರಾಂ ರಮೇಶ್, ಜಿಎಸ್.ಟಿ ಕೌನ್ಸಿಲ್‌ನಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಸರ್ವಸಮ್ಮತದ ನಿರ್ಧಾರವಲ್ಲ. ಕೇಂದ್ರ ಹಣಕಾಸು ಸಚಿವರು ರಾಜ್ಯಗಳ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿಲ್ಲ ಎಂದು ಆಪಾದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್