ರಾಜ್ಯಸಭೆಯ ಬಿಜೆಪಿ ನಾಯಕರಾಗಿ ಪಿಯೂಷ್ ಗೋಯೆಲ್ ಆಯ್ಕೆ!

By Suvarna NewsFirst Published Jul 14, 2021, 5:34 PM IST
Highlights
  • ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಪ್ರಮುಖ ಸ್ಥಾನ
  • ಆಡಳಿತರೂಢ ಬಿಜೆಪಿ ರಾಜ್ಯಸಭಾ ನಾಯಕರಾಗಿ ಗೋಯೆಲ್ ಆಯ್ಕೆ
  • ಥಾವರ್ ಚಂದ್ ಗೆಹ್ಲೋಟ್ ಸ್ಥಾನಕ್ಕೆ ಗೋಯೆಲ್

ನವದೆಹಲಿ(ಜು.14): ಕೇಂದ್ರ ಸಂಪುಟ ಪುನರಾಚನೆಗಾಗಿ ಕೆಲವರು ರಾಜೀನಾಮೆ ನೀಡಿದ್ದರೆ, ಮತ್ತೆ ಕೆಲವರ ಸ್ಥಾನ ಬದಲಾಗಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಇದೀಗ ಕರ್ನಾಟಕ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಥಾವರ್ ಸ್ಥಾನಕ್ಕೆ ಇದೀಗ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ್ದ ಮಯೂರ್ ಶೇಲ್ಕೆಗೆ 50 ಸಾವಿರ ಬಹುಮಾನ..!.

2010ರಿಂದ ರಾಜ್ಯಸಭಾ ಸದಸ್ಯರಾಗಿರುವ ಪಿಯೂಷ್ ಗೋಯೆಲ್, ಸದ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದಾರೆ. ವಕೀಲ, ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಹಾಗೂ ಪಿಯೂಷ್ ಗೋಯೆಲ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅಂತಿಮವಾಗಿ ಪಿಯೂಷ್ ಗೋಯೆಲ್ ಅವರಿಗೆ ರಾಜ್ಯಸಭಾ ನಾಯಕತ್ವ ನೀಡಲಾಗಿದೆ.

ಭಾರತೀಯ ರೈಲ್ವೇ ಎಂದಿಗೂ ಖಾಸಗೀಕರಣ ಮಾಡುವುದಿಲ್ಲ; ಭರವಸೆ ನೀಡಿದ ಗೋಯೆಲ್

ಕಾಂಗ್ರೆಸ್ ಲೋಕಸಭೆ ನಾಯಕ ಅಧೀರ್ ರಂಜನ್ ಚೌದರಿಯನ್ನು ಬದಲಾಯಿಸುವ ಕುರಿತು ಚರ್ಚಿಸಿತ್ತು. ಆದರೆ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಹೇಳಿವೆ. ಆದರೆ ಬಿಜೆಪಿ ಸಂಪುಟ ಪುನಾರಚನೆಯಿಂದ ತೆರವಾದ ಸ್ಥಾನಗಳಿಗೆ ಆಯ್ಕೆ ಮಾಡುತ್ತಿದೆ.
 

click me!