ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿ ಇತಿಹಾಸ ನಿರ್ಮಿಸಿತು. ಆ ಮೂಲಕ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎನಿಸಿಕೊಂಡಿತು. ಅದರ ಬೆನ್ನಲ್ಲಿಯೇ ಭಾರತದ ಸೌರ ಮಿಷನ್ ಆದಿತ್ಯ L1 ಅನ್ನು ಈ ವರ್ಷ ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಾಗಿದೆ.
ನವದೆಹಲಿ (ನ.11): ಚಂದ್ರಯಾನ-3 ಹಾಗೂ ಆದಿತ್ಯ ಎಲ್1 ಸೌರ ಮಿಷನ್‌ನ ಯೋಜನೆಯ ಕುರಿತಾಗಿ ಭಾರತ ಹಂಚಿಕೊಳ್ಳಲಿರುವ ಮಾಹಿತಿಗಾಗಿ ಅಮೆರಿಕ ಹಾಗೂ ರಷ್ಯಾ ದೇಶಗಳ ವಿಜ್ಞಾನಿಗಳು ಕಾಯುತ್ತಿದ್ದಾರೆ ಎಂದು ಕೇಂದ್ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 'ಬಾಹ್ಯಾಕಾಶ ವಲಯವನ್ನು ಅನ್‌ಲಾಕ್' ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳೇ ಈ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಭಾರತದ ಚಂದ್ರಯಾನ ಹಾಗೂ ಸೌರ ಮಿಷನ್‌ಗಳ ಯಶಸ್ಸು ದೇಶ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎನ್ನುವುದನ್ನು ಸಂಕೇತಿಸುತ್ತಿದೆ ಎಂದು ಜೀತೇಂದ್ರ ಸಿಂಗ್ ಹೇಳಿದ್ದಾರೆ. ನಮ್ಮ ಮಹತ್ವದ ಎರಡೂ ಕಾರ್ಯಾಚರಣೆಗಳು ಹೆಚ್ಚೂ ಕಡಿಮೆ ಏಕಕಾಲದಲ್ಲಿ ಪ್ರಾರಂಭವಾಯಿತು. ಚಂದ್ರಯಾನ-3ಯ ಮಹತ್ವದ ಉದ್ದೇಶ ಏನಾಗಿತ್ತೆಂದರೆ, ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು. ಯಾಕೆಂದರೆ ಇದು ಈವರೆಗೂ ಯಾರೂ ಕಾಲಿಡದ ಪ್ರದೇಶವಾಗಿತ್ತು. ಅಲ್ಲಿ ನಮ್ಮ ವಿಜ್ಞಾನಿಗಳು ವಾತಾವರಣ, ಖನಿಜಗಳು ಮತ್ತು ಉಷ್ಣ ಪರಿಸ್ಥಿತಿಗಳ ಕುರಿತಾಗಿ ನಿರ್ಣಾಯಕವಾಗಬಲ್ಲ ಡೇಟಾವನ್ನು ಸಂಗ್ರಹ ಮಾಡಿದ್ದು, ಇದರ ಇನ್ನಷ್ಟು ಸಂಶೋಧನೆಗಳು, ವಿಶ್ಲೇಷಣೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತಕ್ಕಿಂತ ಮುಂಚೆಯೇ ಈ ಪ್ರಯಾಣವನ್ನು ಪ್ರಾರಂಭಿಸಿದ ದೇಶಗಳಾಗಿರುವ ಅದರಲ್ಲೂ ಯುಎಸ್ ಮತ್ತು ರಷ್ಯಾ ನಡುವೆ ಯೋಜನೆಗಳ ಮಾಹಿತಿಯನ್ನು ಹಂಚಿಕೊಳ್ಳಲು ಭಾರತಕ್ಕೆ ತೀವ್ರ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು. "1969 ರಲ್ಲಿ ಯುಎಸ್ ಚಂದ್ರನ ಮೇಲೆ ಮಾನವನ ಮೊದಲ ಲ್ಯಾಂಡಿಂಗ್ ಮಾಡಿತು. ಆದರೆ ನಮ್ಮ ಚಂದ್ರಯಾನ-3 ಯೋಜನೆ ಚಂದ್ರನ ಮೇಲೆ ನೀರಿನ ಅಂಶವಿರುವ ಎಚ್2ಓ ಅಣುವಿನ ಅಸ್ತಿತ್ವದ ಪುರಾವೆಗಳನ್ನು ತಂದಿದೆ. ಇದು ಭವಿಷ್ಯದ ದಿನಗಳಲ್ಲಿ ಮಾನವನ ಅಲ್ಲಿ ಬದುಕಬಹುದು ಎನ್ನುವ ಸಾಧ್ಯೆತೆಯನ್ನು ತೋರಿಸಿದೆ. ಇದು ಇನ್ನಷ್ಟು ತನಿಖೆಗೆ ಮಹತ್ವದ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಕೂಡ ಈಗ ಭಾರತದ ಬೆಂಬಲವನ್ನು ಬಯಸುತ್ತಿದೆ ಎಂದು ಸಿಂಗ್ ಹೇಳಿದರು. "ಅಮೆರಿಕ ಮತ್ತು ರಷ್ಯಾ ಭಾರತದ ಮಾಹಿತಿಯನ್ನು ಹಂಚಿಕೊಳ್ಳಲು ಕುತೂಹಲದಿಂದ ಕಾಯುತ್ತಿವೆ" ಎಂದು ಅವರು ಹೇಳಿದರು.
"ಆದಿತ್ಯ ಮಿಷನ್ ಈಗಾಗಲೇ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಇದು ಜನವರಿಯಲ್ಲಿ ಕೆಲಸವನ್ನು ಪ್ರಾರಂಭಿಸಲು ನಿರ್ಧಾರ ಮಾಡಿದೆ. ಆದಿತ್ಯ ಎಲ್1 ಮಿಷನ್ ಉಡಾವಣೆ ಕೂಡ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆಯಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇದರ ಉಡಾವಣೆಯ ವೇಳೆ 10 ಸಾವಿರಕ್ಕಿಂತ ಅಧಿಕ ಜನರು ಸಾಕ್ಷಿಯಾಗಿದ್ದರು ಎಂದಿದ್ದಾರೆ. ಪಿಎಂ ಮೋದಿಯವರ ಉಪಕ್ರಮವು ಶ್ರೀಹರಿಕೋಟಾ ಮತ್ತು ಇಸ್ರೋವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕಾಗಿ ತೆರೆಯಿತು, ಬಾಹ್ಯಾಕಾಶ ಕ್ಷೇತ್ರದಲ್ಲಿ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಉದಯವಾಗಲು ಕಾರಣವಾಯಿತು ಎಂದಿದ್ದಾರೆ.
VIRGIN BRTH: ಗಂಡು ಜಾತಿಯ ವೀರ್ಯವಿಲ್ಲದೆ ಮರಿಗೆ ಜನ್ಮ ನೀಡಿದ ಶಾರ್ಕ್!
"ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ, ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದೇವೆ. ಕೆಲವರು ಈಗಾಗಲೇ ಉದ್ಯಮಿಗಳಾಗಿದ್ದಾರೆ" ಎಂದು ಅವರು ಹೇಳಿದರು. ಇದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಇದಕ್ಕೂ ಮುನ್ನ ನಮ್ಮ ಯುವ ಪ್ರತಿಭೆಗಳು ಅವಕಾಶಕ್ಕಾಗಿ ಬೇರೆ ದೇಶಕ್ಕೆ ಹೋಗುತ್ತಿದ್ದರು. ಇಂದು ದೇಶದಲ್ಲಿಯೇ ಇದ್ದುಕೊಂಡು ಬಾಹ್ಯಾಕಾಶ ವಲಯವನ್ನು ಪ್ರವರ್ಧಮಾನಕ್ಕೆ ತರುತ್ತಿದ್ದಾರೆ ಎಂದು ಹೇಳಿದರು. ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರೂ ಇಲ್ಲಿ ಅವಕಾಶ ಸಿಗದ ಕಾರಣ ಯುವಕರು ದೇಶ ತೊರೆಯುತ್ತಿದ್ದರು. ಮೋದಿಜಿ ಬಾಹ್ಯಾಕಾಶ ಈಗ ಅವರಿಗಾಗಿಯೇ ತೆರೆದಿದ್ದಾರೆ ಎಂದು ಹೇಳಿದರು.
South Korea ವ್ಯಕ್ತಿಯನ್ನು ತರಕಾರಿ ಬಾಕ್ಸ್ ಎಂದು ತಿಳಿದು ಜಜ್ಜಿ ಸಾಯಿಸಿದ ರೋಬಾಟ್!